Namma Metro: ಬೆಂಗಳೂರು ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಗುಡ್​​ನ್ಯೂಸ್: ಒಂದಲ್ಲ ಎರಡು ಬೋಗಿ ಮೀಸಲು

| Updated By: Digi Tech Desk

Updated on: Jan 12, 2024 | 12:10 PM

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದಿತ್ತು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಆರ್​ಸಿಎಲ್, ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಮೀಸಲಿರುವ ಕೋಚ್​​ ಅನ್ನು ಸಂಖ್ಯೆಯನ್ನು ಒಂದರಿಂದ ಎರಡು ಕೋಚ್​ಗಳಿಗೆ ಏರಿಸಲಿದೆ.

Namma Metro: ಬೆಂಗಳೂರು ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಗುಡ್​​ನ್ಯೂಸ್: ಒಂದಲ್ಲ ಎರಡು ಬೋಗಿ ಮೀಸಲು
ಬೆಂಗಳೂರು ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಗುಡ್​​ನ್ಯೂಸ್: ಒಂದಲ್ಲ ಎರಡು ಬೋಗಿ ಮೀಸಲಿಡಲು ಚಿಂತನೆ
Follow us on

ಬೆಂಗಳೂರು, ಜ.12: ನಮ್ಮ ಮೆಟ್ರೋದಲ್ಲಿ (Bengaluru Metro) ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರೈಲಿನಲ್ಲಿ ಎರಡು ಕೋಚ್​ಗಳನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಿದೆ. ಸದ್ಯ ನಮ್ಮ ಮೆಟ್ರೋ ರೈಲಿನಲ್ಲಿ ಒಂದು ಮಹಿಳಾ ಮೀಸಲು ಕೋಚ್​ ಇದೆ. ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಗಳ ಬಗ್ಗೆ ಟಿವಿ9 ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಮೆಟ್ರೋ ಅಧಿಕಾರಿಗಳು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಮಹಿಳೆಯರಿಗೆ 2 ಬೋಗಿ ಮೀಸಲಿಡಲು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಮೆಟ್ರೋದಲ್ಲಿ ಸಾಲು ಸಾಲು ಅವಘಡ; ಎಚ್ಚೆತ್ತ ಬಿಎಂಆರ್​ಸಿಎಲ್, ಪ್ರಯಾಣಿಕರ ಸುರಕ್ಷತೆಗೆ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ನಿರ್ಮಾಣ

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ಯುವಕನೊಬ್ಬ ಹಿಂಬದಿಯಿಂದ ಖಾಸಗಿ ಅಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿಯೊಬ್ಬಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಳು. ಅಲ್ಲದೆ, ವಿಚಾರ ತಿಳಿದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದಿದ್ದರು. ಈ ವೇಳೆ ಯುವತಿ ಮುಂದೆ ಆತ ತಪ್ಪೊಪ್ಪಿಕೊಂಡಿದ್ದನು.

ನವೆಂಬರ್ 20 ರಂದು ಇದೇ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ, ಕೆಂಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ಕೊಟ್ಟಿದ್ದರ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಡಿಸೆಂಬರ್ 7 ರಂದು ರಾಜಾಜಿನಗರಲ್ಲಿ ಮೆಟ್ರೋ ಹತ್ತಿದ್ದ ಯುವತಿಗೆ ಯುವಕನೊಬ್ಬ ಹಿಂಬದಿಯಿಂದ ಬಂದು ಆಕೆಯ ದೇಹವನ್ನ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದ. ಈ ರೀತಿಯ ಪ್ರಕರಣ ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳಿಗೆ ಮೆಟ್ರೋ ಎಷ್ಟು ಸುರಕ್ಷಿತ ಅನ್ನೋ ಆತಂಕಭರಿತ ಪ್ರಶ್ನೆ ಮೂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Fri, 12 January 24