ಮಜುರಾಯಿ ಇಲಾಖೆಯ ಜಾಗ ಒತ್ತುವರಿ ಸ್ಥಳ ವೀಕ್ಷಣೆ ಮಾಡಿದ ಸಚವೆ ಶಶಿಕಲಾ ಜೊಲ್ಲೆ

| Updated By: Rakesh Nayak Manchi

Updated on: Dec 17, 2022 | 2:02 PM

ಮುಜರಾಯಿ ಇಲಾಖೆಯ ಜಾಗದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಲಾಗಿದ್ದು, ಖುದ್ದು ಮುಜರಾಯಿ ಇಲಾಖೆ ಸಚಿವರೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಮಜುರಾಯಿ ಇಲಾಖೆಯ ಜಾಗ ಒತ್ತುವರಿ ಸ್ಥಳ ವೀಕ್ಷಣೆ ಮಾಡಿದ ಸಚವೆ ಶಶಿಕಲಾ ಜೊಲ್ಲೆ
ಒತ್ತುವರಿ ಸ್ಥಳ ಪರಿಶೀಲನೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ
Follow us on

ಬೆಂಗಳೂರು: ಮಜುರಾಯಿ ಇಲಾಖೆ (Muzrai Department)ಯ ಜಾಗ ಒತ್ತುವರಿ (Encroachment) ಮಾಡಿರುವ ಪ್ರಕರಣ ಸಂಬಂಧ ಇಲಾಖೆಯ ಪರ ಹೈಕೋರ್ಟ್ (High Court) ಆದೇಶ ಬಂದ ಹಿನ್ನೆಲೆ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ನೀಲಸಂಧ್ರ ಗ್ರಾಮದ ಸರ್ವೆ 79ರ 15 ಎಕರೆ 12 ಗುಂಟೆ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳ ತೆರವು ವಿಚಾರವಾಗಿ ಪ್ರಕರಣ ಹೈಕೋರ್ಟ್​​ನಲ್ಲಿತ್ತು. ಸದ್ಯ ಮುಜರಾಯಿ ಇಲಾಖೆಯ ಪರವಾಗಿ ತೀರ್ಪು ಬಂದ ಹಿನ್ನಲೆ ಒತ್ತುವರಿದಾರರ ಮನವೊಲಿಕೆ ಹಾಗೂ ಒತ್ತುವರಿ ತೆರವು (Encroachment clearance) ಕಾರ್ಯಾಚರಣೆ ಹೇಗೆ ಶುರು ಮಾಡಬೇಕೆಂದು ಪರಿಶೀಲನೆ ನಡೆಸಲಾಯಿತು.

ನೀಲಸಂಧ್ರ ಗ್ರಾಮದ ಸರ್ವೆ 79ರಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಜಮೀನಿನಲ್ಲಿ ಸ್ಥಳೀಯರು ಒತ್ತುವರಿ ಮಾಡಿದ್ದಾರೆ. ಅದರಂತೆ ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳ ತೆರವು ವಿಚಾರವಾಗಿ ಪ್ರಕರಣ ಹೈಕೋರ್ಟ್​​ನಲ್ಲಿತ್ತು. ಕೋರ್ಟ್​ನಲ್ಲಿ ವಾದ-ಪ್ರತಿವಾದಗಳು ನಡೆದು ಇಲಾಖೆಯ ಪರ ತೀರ್ಪು ಪ್ರಕಟಗೊಂಡಿದೆ.

ಇದನ್ನೂ ಓದಿ: Kambala 2023: ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳ 2022-23 ಏಪ್ರಿಲ್ ವರೆಗೆ ನಿಗದಿಪಡಿಸಲಾಗಿದೆ

ಈ ನಿಟ್ಟಿನಲ್ಲಿ ಒತ್ತುವರಿದಾರರ ಮನವೊಲಿಕೆ ಹಾಗೂ ಒತ್ತುವರಿಯ ಕಾರ್ಯಾಚರಣೆ ಹೇಗೆ ಶುರು ಮಾಡಬೇಕೆಂದು ಪರಿಶೀಲನೆ ನಡೆಸಲು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಎಲ್ಲೆಲ್ಲಿ, ಎಷ್ಟೆಷ್ಟು ಜಾಗ ಒತ್ತುವರಿಯಾಗಿದೆ ಎಂದು ಖದ್ದು ಸಚಿವರು ಮತ್ತು ತಂಡ ಪರಿಶೀಲನೆ ನಡೆಸಿದರು. ಸ್ಥಳೀಯ ಒತ್ತುವರಿದಾರರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಹಿನ್ನಲೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ದೇವಸ್ಥಾನ ಜಾಗ ಕಾಪಾಡಿಕೊಳ್ಳಲು ಸರ್ವೆ ಕಾರ್ಯ

ನೀಲಸಂಧ್ರದಲ್ಲಿ ಮುಜರಾಯಿ ಇಲಾಕೆಯ ಒತ್ತುವರಿ ಜಾಗ ವೀಕ್ಷಣೆ ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ದೇಗುಲದ ಸುಮಾರು ಜಾಗ ಒತ್ತುವರಿಯಾಗಿದೆ. ನಮ್ಮ ದೇವಸ್ಥಾನಗಳ ಒತ್ತುವರಿಯಾದ ಜಾಗವನ್ನ ಕಾಪಾಡಿಕೊಳ್ಳುವ ಉದ್ದೇಶದಿಂದ ಸರ್ವೆ ಕಾರ್ಯ, ಒತ್ತುವರಿ ಕಾರ್ಯ ಮಾಡುತ್ತಿದ್ದೇವೆ. ಮುಖ್ಯಮಂತ್ರಿ, ಕಂದಾಯ ಸಚಿವರ ಜೊತೆ ಚರ್ಚಿಸಿ, ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಅಧಿಕಾರಿಗಳ ತಂಡ ಇಲ್ಲಿಗೆ ಬಂದು ವೀಕ್ಷಣೆ ಮಾಡುತ್ತಿದೆ. ಕಳೆದ ಅನೇಕ ಸರ್ಕಾರಗಳಿದರೂ ಒತ್ತುವರಿ ತೆರವು ಮಾಡಿರಲಿಲ್ಲ. 329 ನಿವೇಶನಗಳನ್ನ ಕಟ್ಟಿಕೊಂಡು, ಏಳೂವರೆ ಎಕರೆ ಜಾಗ ಮಾತ್ರ ಖಾಲಿ ಬಿಡಲಾಗಿದೆ. 80 ಲಕ್ಷ ಹಣವನ್ನು ಇಲಾಖೆಯಿಂದ ಖಾಲಿ ಜಾಗದ ಕಾಂಪೌಂಡ್​ಗೆ ಮೀಸಲಿಟ್ಟಿದ್ದೇವೆ. ಈ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲು ಅಡೆಚಣೆ ಮಾಡುತ್ತಿದ್ದಾರೆ. ನಮ್ಮ ಜಾಗ ಎಂದು ತಾಯಪ್ಪ ಅವರು ನ್ಯಾಯಾಲಯಕ್ಕೆ ಹೋಗಿದ್ದರು ಎಂದರು.

ಇದನ್ನೂ ಓದಿ: ದಸರಾ ಆನೆ ಬಲರಾಮನಿಗೆ ಗುಂಡೇಟು; ಜಮೀನು ಮಾಲೀಕ ಅರೆಸ್ಟ್, ಸಿಂಗಲ್ ಬ್ಯಾರಲ್ ಬಂದೂಕು ಹಾಗೂ ಕಾರ್ಟರಿಡ್ಜ್​​ ವಶ

ಆಸ್ತಿ ಕಬಳಿಕೆ ಮಾಡಿದವರ ವಿರುದ್ಧ ಕ್ರಮ ಆಗುತ್ತದೆ. ವಿದ್ಯುತ್ ಬಿಲ್, ನೀರಿನ ಬಿಲ್, ಕಂದಾಯ ಎಲ್ಲವೂ ಕಟ್ಟುತ್ತಿದ್ದಾರೆ. ಅಧಿಕಾರಿಗಳೇ ಅಕ್ರಮವಾಗಿ ಮಾಡಿಕೊಟ್ಟಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳ ಒತ್ತುವರಿಯನ್ನ ಪರಿಶೀಲಿಸಿ, ನಮ್ಮ ಆಸ್ತಿಯನ್ನ ಉಳಿಸಿಕೊಳ್ಳುತ್ತೇವೆ ಎಂದರು. ದೇವಸ್ಥಾನದಲ್ಲಿ ಅರ್ಚಕರ ಮೊಬೈಲ್ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲನೆ ಮಾಡಿ ತಜ್ಞರ ಜೊತೆ ಮಾತನಾಡಬೇಕಾಗುತ್ತದೆ. ಇವತ್ತು ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಬುಲ್ಡೋಜರ್ ತಂದು ಒತ್ತುವರಿ ಜಾಗ ತೆರವು ಮಾಡುವಂತೆ ಆಗ್ರಹ

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಇದು ದೇವಸ್ಥಾನದ ಜಮೀನು. 15 ಎಕರೆಯಲ್ಲಿ ಅರ್ಧಕರ್ಧ ಒತ್ತುವರಿಯಾಗಿದೆ. 229 ಮನೆಗಳನ್ನ ಅಕ್ರಮವಾಗಿ ಕಟ್ಟಿದ್ದಾರೆ. ವಿಧಾನ ಪರಿಷತ್​ನಲ್ಲಿ ಎರಡ್ಮೂರು ಸಲ ಪ್ರಶ್ನೆ ಮಾಡಿದ್ದೆ. ಇಗ ಜಾಗಕ್ಕೆನೇ ಭೇಟಿ ನೀಡಿದ್ದೇವೆ. ಹೈಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಸುಪ್ರಿಂ ಕೋರ್ಟ್, ಸಿಟಿ ಕೋರ್ಟ್, ಜಿಲ್ಲಾಧಿಕಾರಿಗಳ ಕೋರ್ಟ್ ಕೂಡ ದೇವಸ್ಥಾನಕ್ಕೆ ಸೇರಿದ ಜಾಗವೆಂದು ಜಡ್ಜ್ಮೆಂಟ್ ಕೊಟ್ಟಿದೆ ಎಂದರು.

ಒತ್ತುವರಿಯಾಗಿರುವ ಜಾಗವನ್ನು ಬುಲ್ಡೋಜರ್ ತಂದು ತೆರವುಗೊಳಿಸಬೇಕು. ಹೇಳೋದು, ಕೇಳೋದು ಏನಿಲ್ಲ. ಮುನಿಯಪ್ಪ ಎಂಬುವವರು ಕೋರ್ಟ್ ಮೊರೆ ಹೋಗಿದ್ದರು. ಅವರಿಗೆ ಕೋರ್ಟ್​ನಲ್ಲಿ ಹಿನ್ನಡೆಯಾಗಿದೆ. ಬುಲ್ಡೋಜರ್ ತಂದು ಈ ಜಾಗವನ್ನ ಕಬ್ಜ ಮಾಡಬೇಕು ಎಂದು ಆಗ್ರಹಿಸುತ್ತೇನೆ. ತಿಗಳ ಸಮಾಜಕ್ಕಿರುವ ಒಂದೇ ದೇಗುಲ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ವಿದ್ಯುತ್, ನೀರಿನ‌ಬಿಲ್ ಸೇರಿ ಬಇತರೆ ದಾಖಲೆಗಳನ್ನು ನೀಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದರು.

ರಾಜ್ಯದ ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Sat, 17 December 22