
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನ ಲಾಲ್‌ಬಾಗ್ (Lalbagh) ಸಸ್ಯೋದ್ಯನವನದಲ್ಲಿ ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್‌ನ ಜಾಗವನ್ನು ಬಳಸಲಾಗುತ್ತದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತೀವ್ರ ಚರ್ಚೆಗಳು ನಡೆದಿತ್ತು. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೂ ನಿರ್ಮಿಸಲಿರುವ ಸುರಂಗ ರಸ್ತೆ ಮಾರ್ಗಕ್ಕಾಗಿ ಲಾಲ್ ಬಾಗ್ನಲ್ಲಿ 6 ಎಕರೆ ಭೂಮಿ ಬಳಕೆ ಮಾಡಲಾಗುತ್ತಿದೆ ಎಂಬುದಾಗಿ ಹರಡಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಈಗಾಗಲೇ ಇಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯವನ್ನು ಪರಿಶೀಲಿಸಲು ನಾಳೆ ಲಾಲ್‌ಬಾಗ್‌ಗೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಲಿದ್ದಾರೆ. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಸುರಂಗ ರಸ್ತೆ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳುವ ಬಗ್ಗೆ ಅನೇಕ ನಾಗರಿಕರು ಮತ್ತು ನಾಗರಿಕ ಕಾರ್ಯಕರ್ತರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಲಾಲ್‌ಬಾಗ್‌ನ ಪರಿಸರ, ಪರಿಸರ ಮತ್ತು ಪರಂಪರೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಈ ಕಳವಳಗಳನ್ನು ಎಚ್ಚರಿಕೆಯಿಂದ ಆಲಿಸಬೇಕು. ನಾನು ನಾಳೆ (ಅಕ್ಟೋಬರ್ 12, ಭಾನುವಾರ) ಬೆಳಿಗ್ಗೆ 8 ಗಂಟೆಗೆ ನಾಗರಿಕರು, ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಲಾಲ್‌ಬಾಗ್‌ಗೆ ಭೇಟಿ ನೀಡಿ ಈ ಸಮಸ್ಯೆಯನ್ನು ಸ್ಥಳದಲ್ಲೇ ಪರಿಶೀಲಿಸುತ್ತೇನೆ. ಲಾಲ್‌ಬಾಗ್ ನಮ್ಮ ಅತ್ಯಂತ ಕಾಳಜಿ ಮತ್ತು ಗಮನಕ್ಕೆ ಅರ್ಹವಾಗಿದೆ. ಸಂಬಂಧಪಟ್ಟ ಎಲ್ಲಾ ನಾಗರಿಕರು ಸೇರಲು ಒತ್ತಾಯಿಸಲಾಗುತ್ತಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
Many citizens & civic activists have expressed serious concerns over land acquisition for the Tunnel Road Project at Lalbagh Botanical Garden.
Given Lalbagh’s environmental, ecological & heritage importance, these concerns must be heard with care.
I’ll be visiting Lalbagh… pic.twitter.com/yOtL00mSWX
— Tejasvi Surya (@Tejasvi_Surya) October 11, 2025
ಇದನ್ನೂ ಓದಿ: ಡಿಕೆ ಶಿವಕುಮಾರ್ ಲಾಲ್‌ಬಾಗ್ ನಡಿಗೆ; ಜನರ ಸಮಸ್ಯೆಗೆ ಕಿವಿಕೊಟ್ಟ ಡಿಸಿಎಂ
ಡಿಕೆ ಶಿವಕುಮಾರ್ ಸ್ಪಷ್ಟನೆ:
ಇನ್ನು, ಇಂದು ಲಾಲ್‌ಬಾಗ್ ಜಾಗವನ್ನು ಸುರಂಗ ರಸ್ತೆಗೆ ಸ್ವಾಧೀನ ಮಾಡಿಕೊಳ್ಳುವ ವದಂತಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಳ್ಳಿಹಾಕಿದ್ದಾರೆ.
ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ಹಂಚಿಕೆಯನ್ನು ಇಂದು ಘೋಷಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸುರಂಗ ರಸ್ತೆ ಯೋಜನೆಗಾಗಿ ಸಸ್ಯೋದ್ಯಾನದ 6 ಎಕರೆಯನ್ನು ವಶಕ್ಕೆ ಪಡೆಯಲಾಗುತ್ತದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸುರಂಗ ರಸ್ತೆ ಯೋಜನೆ ಲಾಲ್ ಬಾಗ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸುರಂಗ ಮಾರ್ಗ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ: ತೇಜಸ್ವಿ ಸೂರ್ಯ ಸವಾಲು
“ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವೈದ್ಯರು ಮತ್ತು ಆಂಬ್ಯುಲೆನ್ಸ್ ಲಭ್ಯವಿರುವಂತೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ಲಾಲ್‌ಬಾಗ್‌ನಲ್ಲಿ ಶೌಚಾಲಯಗಳನ್ನು ಉಚಿತವಾಗಿ ನೀಡಲಾಗುವುದು. ಲಾಲ್‌ಬಾಗ್ ಮಾದರಿಯಲ್ಲಿ ನಗರದ ಅರಣ್ಯ ಪ್ರದೇಶಗಳಲ್ಲಿ ಟ್ರೀ ಪಾರ್ಕ್‌ಗಳನ್ನು ನಿರ್ಮಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು, ಇದಕ್ಕೆ ಆರ್ಥಿಕ ನೆರವನ್ನು ಕೂಡಾ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
“ಉದ್ಯಾನದ ಗಡಿಯಲ್ಲಿರುವ ಪಾರ್ಕಿಂಗ್ ಪ್ರದೇಶದ ಬಳಿ ಒಂದರಿಂದ ಒಂದೂವರೆ ಎಕರೆ ಪ್ರದೇಶವನ್ನು ಸುರಂಗ ಕಾಮಗಾರಿಗೆ ಬೇಕಾದ ಉಪಕರಣಗಳನ್ನು ಸಂಗ್ರಹಿಸಲು ಬಳಸಲಾಗುವುದು. ಅದನ್ನು ನಂತರ ಮರುಸ್ಥಾಪಿಸಲಾಗುತ್ತದೆ. ಲಾಲ್‌ಬಾಗ್ ಗಡಿಯಲ್ಲಿರುವ ಅಶೋಕ ಸ್ತಂಭದ ಕಡೆಗೆ ಅದಕ್ಕೆ ಪ್ರವೇಶ ದ್ವಾರವನ್ನು ಒದಗಿಸಲಾಗುವುದು. ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸುಮಾರು 240 ಎಕರೆ ವ್ಯಾಪಿಸಿರುವ ಲಾಲ್ ಬಾಗ್ ಬೆಂಗಳೂರಿನ ಪ್ರಮುಖ ಆಕರ್ಷಣೇಯ ಕೇಂದ್ರಗಳಲ್ಲಿ ಒಂದಾಗಿದೆ. ಹಲವು ಶತಮಾನಗಳಷ್ಟು ಹಳೆಯದಾದ ಮರಗಳನ್ನು ಒಳಗೊಂಡಂತೆ ಅಪರೂಪದ ಸಸ್ಯಗಳನ್ನು ಹೊಂದಿರುವ ಸಸ್ಯೋದ್ಯಾನ ಆಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 pm, Sat, 11 October 25