AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಬರುತ್ತಿದ್ರೂ ರಸ್ತೆಗೆ ಟಾರ್​​ ಹಾಕೋ ಟೆಕ್ನಾಲಜಿ ತಂದಿದ್ದೇ ಕಾಂಗ್ರೆಸ್​: ಆರ್​​ ಅಶೋಕ್​​ ವ್ಯಂಗ್ಯ

ಬೆಂಗಳೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದ ಅವಾಂತರಗಳು ಸಂಭವಿಸಿವೆ. ಸದ್ಯ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮಳೆ ನೀರು ನಿಂತಲ್ಲಿ ಟಾರ್ ಹಾಕುವ ಸಾಧನವನ್ನು ಇವರು ತಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮಳೆ ಬರುತ್ತಿದ್ರೂ ರಸ್ತೆಗೆ ಟಾರ್​​ ಹಾಕೋ ಟೆಕ್ನಾಲಜಿ ತಂದಿದ್ದೇ ಕಾಂಗ್ರೆಸ್​: ಆರ್​​ ಅಶೋಕ್​​ ವ್ಯಂಗ್ಯ
ವಿಪಕ್ಷ ನಾಯಕ ಆರ್.ಅಶೋಕ್
ಕಿರಣ್​ ಹನಿಯಡ್ಕ
| Edited By: |

Updated on: Oct 11, 2025 | 5:46 PM

Share

ಬೆಂಗಳೂರು, ಅಕ್ಟೋಬರ್​ 11: ಬೆಂಗಳೂರಿನ ಅಭಿವೃದ್ಧಿಗೆ ಇವರು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಿನ್ನೆ ಮಳೆಯಲ್ಲಿ ಟಾರ್ ಹಾಕುತ್ತಿದ್ದ ವರದಿಯನ್ನು ನಾನು ನೋಡಿದೆ. ಮಳೆ ನೀರು ನಿಂತಲ್ಲಿ ಟಾರ್ ಹಾಕುವ ಟೆಕ್ನಾಲಜಿಯನ್ನು ಕಾಂಗ್ರೆಸ್​​ನವರು (Congress) ತಂದಿದ್ದಾರೆ. ಇದು ಅಮೆರಿಕಾದಲ್ಲೂ ಇಲ್ಲಾ, ಜಪಾನ್​​ನಲ್ಲೂ ಇಲ್ಲಾ.  ಅಂತಹ ಟೆಕ್ನಾಲಜಿಯನ್ನು ಭಾರತಕ್ಕೆ ತಂದಿದ್ದಾರೆ. ಈ ವಿಚಾರಕ್ಕೆ ಇವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ವ್ಯಂಗ್ಯವಾಡಿದ್ದಾರೆ.

ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಒತ್ತುವರಿ ತೆರವು ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ರು. ಈಗ ಸಿಎಂ ಸಿದ್ದರಾಂಯ್ಯ ಅದೇ ಡೈಲಾಗ್ ಹೊಡೆದು ಹೋಗುತ್ತಾರೆ ಎಂದು  ಕಿಡಿಕಾರಿದ್ದಾರೆ.

ಇದನ್ನೂ ಓದಿ: Bengaluru Rains: ಬೆಂಗಳೂರಲ್ಲಿ ಮಳೆಯ ಅಬ್ಬರಕ್ಕೆ ಹೊಳೆಯಂತಾಗಿರುವ ರೈನ್​ಬೋ ಡ್ರೈವ್​​ ಲೇಔಟ್

ಕೋಲ್ಡ್ ಟಾರ್ ಮಳೆ ನಿಂತ ಮೇಲೆ ಹಾಕುವುದು, ಮಳೆ ಬಂದಾಗ ಹಾಕುವುದಲ್ಲ. ಅದನ್ನ ಪ್ರಯೋಗ ಮಾಡಿ ನಾವು ಫೈಲ್ ಆಗಿದ್ದೇವೆ. ಅದು ಬೇಡ ಅಂತಾ ನಾವು ರಿಜೆಕ್ಟ್ ಮಾಡಿದ್ದೇವೆ. ರಾಜಕಾಲುವೆಗಳನ್ನು ಸರಿ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಸಿಎಂ, ಡಿಸಿಎಂ ನಗರ ಪ್ರದಕ್ಷಿಣೆಗೆ ಹೋಗದಿರುವುದೇ ಒಳ್ಳೆಯದು. ಸಿಟಿ ರೌಂಡ್ಸ್​ಗೆ ಹೋದರೆ 3 ರಿಂದ 4 ಗಂಟೆ ಟ್ರಾಫಿಕ್ ಜಾಮ್ ಆಗುತ್ತದೆ. ಸಿಟಿ ರೌಂಡ್ಸ್​ಗೆ ಹೋಗದಿದ್ದರೆ ಅಷ್ಟು ಹೊತ್ತು ಜನ ಸೇಫ್ ಆಗಿರುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ

ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಪಾಲಿಕೆಯಲ್ಲೂ ಹಣ ಇಲ್ಲ. ಸಿಎಂ ಮಾತಿಗೆ ಗುತ್ತಿಗೆದಾರರು ನಯಾ ಪೈಸೆ ಬೆಲೆ ಕೊಡುತ್ತಿಲ್ಲ. ಸರ್ಕಾರ ಹೇಳಿಕೆಗಳಲ್ಲೇ ಇದೆ ಹೊರತು ಕೆಲಸ ಮಾಡಲು ಹಣ ಇಲ್ಲ. ಮರ್ಯಾದೆ ಹೋಗುತ್ತದೆ ಅಂತಾ ಇವರು ಹೇಳಿಕೊಳ್ಳುತ್ತಿಲ್ಲ ಅಷ್ಟೇ. ಶ್ವೇತಪತ್ರ ಹೊಡಿಸಿದರೆ ಇವರ ಬಣ್ಣ ಇಡೀ ದೇಶಕ್ಕೆ ಗೊತ್ತಾಗುತ್ತದೆ. ವಿಶ್ವ ಬ್ಯಾಂಕ್ ಮಂಜೂರು ಮಾಡಿದ ಹಣ ಎಲ್ಲೋಯ್ತು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಬಿಹಾರ ಚುನಾವಣೆಗೆ ಫಂಡ್ ಸಂಗ್ರಹಕ್ಕೆ ಡಿನ್ನರ್ ಮೀಟಿಂಗ್​

ಸಚಿವರಿಗೆ ಸಿಎಂ ಡಿನ್ನರ್ ಮೀಟಿಂಗ್ ಆಯೋಜಿಸಿರುವ ವಿಚಾರವಾಗಿ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಫಂಡ್ ಸಂಗ್ರಹಕ್ಕೆ ಡಿನ್ನರ್ ಮೀಟಿಂಗ್​ ಕರೆದಿರುವುದು. ಸಚಿವರು ಯಾರು ಯಾರು ಎಷ್ಟು ಕೊಡಬೇಕು ಅಂತಾ ಫಿಕ್ಸ್ ಮಾಡುತ್ತಾರೆ. ಚಿನ್ನದ ಗಟ್ಟಿ ಸಿಕ್ಕಿಹಾಕಿಕೊಂಡಿದೆ, ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ದಾರೆ ಎಂದು ಆರ್​​. ಅಶೋಕ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಎಸ್​ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ
ಎಸ್​ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ
ಸಿದ್ದಾಪುರ ಕೊಲೆ ಪ್ರಕರಣ: ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ಸಿದ್ದಾಪುರ ಕೊಲೆ ಪ್ರಕರಣ: ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು
ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು
SSLC ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!
SSLC ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!
ಮೊಬೈಲ್ ಕದ್ದು ಬಸ್ಸಿನ ಕಿಟಕಿಯಿಂದ ಜಾರಿಕೊಳ್ಳುವ ಕಳ್ಳನ ಪ್ಲ್ಯಾನ್ ಫ್ಲಾಪ್
ಮೊಬೈಲ್ ಕದ್ದು ಬಸ್ಸಿನ ಕಿಟಕಿಯಿಂದ ಜಾರಿಕೊಳ್ಳುವ ಕಳ್ಳನ ಪ್ಲ್ಯಾನ್ ಫ್ಲಾಪ್
ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ
ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ
ಬೆಥೆಲ್ ಸ್ಪಿನ್​ಗೆ 'ತಿರುಗಿ' ಬಿದ್ದ ಶ್ರೀಲಂಕಾ
ಬೆಥೆಲ್ ಸ್ಪಿನ್​ಗೆ 'ತಿರುಗಿ' ಬಿದ್ದ ಶ್ರೀಲಂಕಾ