- Kannada News Photo gallery Cricket photos Why RCB Signed Richard Gleeson: Tactical Masterstroke Explained
RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!
Richard Gleeson: 38 ವರ್ಷದ ರಿಚರ್ಡ್ ಗ್ಲೀಸನ್ ಇಂಗ್ಲೆಂಡ್ ಪರ 6 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಈವರೆಗೆ 141 ಟಿ20 ಪಂದ್ಯಗಳನ್ನಾಡಿರುವ ಗ್ಲೀಸನ್ ಪಡೆದಿರುವುದು ಬರೋಬ್ಬರಿ 170 ವಿಕೆಟ್ಗಳು. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಈವರೆಗೆ 2867 ಎಸೆತಗಳನ್ನು ಎಸೆದಿರುವ ಅವರು ಕೇವಲ 3909 ರನ್ ಮಾತ್ರ ನೀಡಿದ್ದಾರೆ.
Updated on: May 16, 2026 | 8:53 AM

IPL 2026: ಐಪಿಎಲ್ 2026ರ ಟೂರ್ನಿಯ ಮಧ್ಯಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂಗ್ಲೆಂಡ್‌ನ ಅನುಭವಿ ವೇಗಿ ರಿಚರ್ಡ್ ಗ್ಲೀಸನ್ (Richard Gleeson) ಅವರನ್ನು 1.6 ಕೋಟಿ ರೂಪಾಯಿ ಮೂಲ ಬೆಲೆಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಶ್ರೀಲಂಕಾದ ವೇಗಿ ನುವಾನ್ ತುಷಾರ ಅವರಿಗೆ ಪರ್ಯಾಯ ಆಟಗಾರನಾಗಿ ಗ್ಲೀಸನ್ RCB ಕ್ಯಾಂಪ್ ಸೇರಿದ್ದಾರೆ. ಆರ್ಸಿಬಿ ಮ್ಯಾನೇಜ್ಮೆಂಟ್ ಈ ಹಠಾತ್ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣಗಳು ಇಲ್ಲಿವೆ... (PC: RCB)

ನುವಾನ್ ತುಷಾರ ಅನುಪಸ್ಥಿತಿ: RCB ತಂಡವು ಶ್ರೀಲಂಕಾದ ಲಸಿತ್ ಮಾಲಿಂಗ ಶೈಲಿಯ ಬೌಲರ್ ನುವಾನ್ ತುಷಾರ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಆದರೆ, ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ನಡೆಸಿದ ಕಡ್ಡಾಯ ಫಿಟ್ನೆಸ್ ಪರೀಕ್ಷೆಯಲ್ಲಿ ತುಷಾರ ವಿಫಲರಾದರು. ಈ ಕಾರಣದಿಂದಾಗಿ ಅವರಿಗೆ ಐಪಿಎಲ್ ಆಡಲು ಎನ್‌ಒಸಿ (NOC) ಸಿಕ್ಕಿರಲಿಲ್ಲ. ಇದಾಗ್ಯೂ ಅವರು ಐಪಿಎಲ್ನ ದ್ವಿತೀಯಾರ್ಧದ ವೇಳೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿತ್ತು. ಆದರೆ 12 ಪಂದ್ಯಗಳು ಮುಗಿದರೂ ತುಷಾರ ಆಗಮಿಸಿರಲಿಲ್ಲ. ಹೀಗಾಗಿ ಅವರ ಬದಲಿಗೆ ಆರ್ಸಿಬಿ ರಿಚರ್ಡ್ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. (Pc: X)

ಗ್ಲೀಸನ್ ಆಯ್ಕೆಯೇ ಯಾಕೆ? ಈ ಪ್ರಶ್ನೆಗೆ ಉತ್ತರ ಇಂಗ್ಲೆಂಡ್ ವೇಗಿ ಇತ್ತೀಚಿನ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ನೀಡಿದ ಅದ್ಭುತ ಪ್ರದರ್ಶನ. ಇತ್ತೀಚೆಗೆ ಮುಕ್ತಾಯಗೊಂಡ ಪಿಎಸ್ಎಲ್ (PSL 2026) ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಆಡಿದ್ದ ಕೇವಲ 7.14 ಎಕಾನಮಿ ರೇಟ್ನಲ್ಲಿ ಮಾತ್ರ ರನ್ ಬಿಟ್ಟು ಕೊಟ್ಟಿದ್ದರು. ಹೀಗಾಗಿಯೇ ಆರ್ಸಿಬಿ ಉತ್ತಮ ಫಾರ್ಮ್ನಲ್ಲಿರುವ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. (PC: ECB)

'ಹಿಟ್-ದಿ-ಡೆಕ್' ಬೌಲಿಂಗ್ ಶೈಲಿ : ಆರ್ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ರಿಚರ್ಡ್ ಗ್ಲೀಸನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚೆನ್ನಾಗಿ ತಿಳಿದಿದೆ. 38ರ ಹರೆಯದಲ್ಲೂ ಗ್ಲೀಸನ್ 140+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಅವರ ಎತ್ತರವೇ ಪ್ಲಸ್ ಪಾಯಿಂಟ್. ಹಠಾತ್ ಬೌನ್ಸ್ ಎಸೆಯಬಲ್ಲ ಸಾಮರ್ಥ್ಯ ಹೊಂದಿರುವ ಗ್ಲೀಸನ್, ಡೆತ್ ಓವರ್‌ಗಳಲ್ಲಿ ನಿಖರವಾದ ಯಾರ್ಕರ್ ಮತ್ತು ಶಾರ್ಪ್ ಬೌನ್ಸರ್‌ಗಳನ್ನು ಎಸೆಯುವ ಕೌಶಲ್ಯ ಹೊಂದಿದ್ದಾರೆ. (PC: ECB)

ಇನ್ನು ರಿಚರ್ಡ್ ಗ್ಲೀಸನ್ಗೆ ಐಪಿಎಲ್ ವಾತಾವರಣ ಹೊಸದಲ್ಲ. ಅವರು ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (2024) ಮತ್ತು ಮುಂಬೈ ಇಂಡಿಯನ್ಸ್ (2025) ತಂಡಗಳ ಭಾಗವಾಗಿದ್ದರು. ಹೀಗಾಗಿ ಐಪಿಎಲ್ ವಾತಾವರಣಕ್ಕೆ ಅವರು ಬೇಗನೆ ಹೊಂದಿಕೊಳ್ಳಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ರಿಚರ್ಡ್ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. (PC: IPL)

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
