KKR vs GT: 34 ರನ್ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
Finn Allen 93 Runs: ಐಪಿಎಲ್ 2026 ರ KKR vs GT ಪಂದ್ಯದಲ್ಲಿ ಫಿನ್ ಅಲೆನ್ 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 35 ಎಸೆತಗಳಲ್ಲಿ 10 ಸಿಕ್ಸರ್ ಸಿಡಿಸಿ ಶತಕದ ಸನಿಹಕ್ಕೆ ಬಂದರು. ಎರಡು ಜೀವದಾನಗಳನ್ನು ಪಡೆದು ತಂಡಕ್ಕೆ ಭರ್ಜರಿ ಆರಂಭ ನೀಡಿದ ಅಲೆನ್, ಈಡನ್ ಗಾರ್ಡನ್ಸ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಅವರ ಬಿರುಸಿನ ಆಟ ಗುಜರಾತ್ ಬೌಲರ್‌ಗಳನ್ನು ಕಂಗೆಡಿಸಿತು.
ಐಪಿಎಲ್ 2026 ರ 60 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಫಿನ್ ಅಲೆನ್ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈಡನ್ ಗಾರ್ಡನ್ಸ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದ ಅಲೆನ್ ಕೇವಲ 7 ರನ್ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಅಲೆನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಹತ್ತು ಸಿಕ್ಸರ್‌ಗಳ ಸಹಿತ 93 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ವಾಸ್ತವವಾಗಿ ಅಲೆನ್ಗೆ ಈ ಪಂದ್ಯದಲ್ಲಿ ಎರಡು ಜೀವದಾನಗಳು ಸಿಕ್ಕವು. ಇನ್ನಿಂಗ್ಸ್ನ ಆರಂಭದಲ್ಲಿ ಹೋಲ್ಡನ್ ಸ್ವಲ್ಪ ಕಷ್ಟಕರವಾದ ಕ್ಯಾಚ್ ಬಿಟ್ಟರೆ, ಅಲೆನ್ 34 ರನ್ ಬಾರಿಸಿದ್ದಾಗ ಮೊಹಮ್ಮದ್ ಸಿರಾಜ್ ಸುಲಭವಾದ ಕ್ಯಾಚ್ ಕೈಬಿಟ್ಟರು. ಈ ಎರಡು ಜೀವದಾನಗಳ ಲಾಭ ಪಡೆದ ಅಲೆನ್ ಗುಜರಾತ್ ಬೌಲರ್‌ಗಳನ್ನು ಹೈರಾಣಾಗಿಸಿದರು.


