AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರ ಭವಿಷ್ಯ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿದ್ದಾರೆ ಗ್ರಹಗಳ ರಾಜರು; ನಿಮ್ಮ ರಾಶಿ ಭವಿಷ್ಯ ಇಲ್ಲಿದೆ

2026ರ ಮೇ 17ರಿಂದ 24ರವರೆಗಿನ ವಾರ ಭವಿಷ್ಯ ಇಲ್ಲಿದೆ. ಈ ವಾರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ನಿರೀಕ್ಷಿಸಬಹುದು, ಆದರೆ ಆತುರದಿಂದ ದುಃಖ ಎದುರಾಗಬಹುದು. 12 ರಾಶಿಗಳ ಫಲಗಳನ್ನು ವಿವರವಾಗಿ ನೀಡಲಾಗಿದ್ದು, ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಸಂಬಂಧಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ. ಶುಭವಾಗಲಿ.

ವಾರ ಭವಿಷ್ಯ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿದ್ದಾರೆ ಗ್ರಹಗಳ ರಾಜರು; ನಿಮ್ಮ ರಾಶಿ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 16, 2026 | 10:45 PM

Share

2026ರ ಮೇ 17ರಿಂದ 24ರವರೆಗೆ ಮೂರನೇ ವಾರದಲ್ಲಿ ಎಲ್ಲ ಫಲಗಳನ್ನು ಬೇಗ ನಿರೀಕ್ಷಿಸಿ, ದುಃಖ ತಂದುಕೊಳ್ಳಬೇಕಾಗುವುದು. ನಿಮ್ಮ ಶ್ರಮವನ್ನು ಲೋಪವಿಲ್ಲದಂತೆ ಮಾಡಿ. ಶುಭವಾಗಲಿ.

​ಮೇಷ ರಾಶಿ :

​ರಾಶಿಯಲ್ಲಿ ಕುಜ ಹಾಗೂ ಪಂಚಮದಲ್ಲಿ ಚಂದ್ರ-ಕೇತು ಇದ್ದಾರೆ. ದ್ವಿತೀಯದ ರವಿ-ಬುಧರಿಂದ ಆರ್ಥಿಕ ಲಾಭವಿದ್ದರೂ, ಮಾತಿನಲ್ಲಿ ತಾಳ್ಮೆ ಇರಲಿ. ಮಕ್ಕಳ ವಿಷಯದಲ್ಲಿ ಸಣ್ಣ ಆತಂಕ ಎದುರಾಗಬಹುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ​ ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ರವಿ, ಬುಧ ಮತ್ತು ಮಾಂದಿ ಇರುವುದರಿಂದ ದೈಹಿಕ ಆಲಸ್ಯ ಅಥವಾ ತಲೆನೋವು ಕಾಡಬಹುದು. ಚತುರ್ಥ ಚಂದ್ರನಿಂದಾಗಿ ತಾಯಿಯ ಆರೋಗ್ಯದ ಕಡೆ ಗಮನವಿರಲಿ. ದ್ವಿತೀಯದ ಗುರು-ಶುಕ್ರರಿಂದ ಧನ ಲಾಭವಾಗಲಿದೆ. ​ ಮಿಥುನ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಮತ್ತು ಶುಕ್ರ ಇರುವುದರಿಂದ ಅತ್ಯಂತ ಶುಭ ವಾರವಿದು. ಕೀರ್ತಿ, ಗೌರವ ಹೆಚ್ಚಾಗಲಿದೆ. ತೃತೀಯದಲ್ಲಿ ಚಂದ್ರನಿರುವುದರಿಂದ ಧೈರ್ಯ ಮತ್ತು ಸೋದರರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಕಂಡುಬರಲಿದೆ. ​ ಕರ್ಕಾಟಕ ರಾಶಿ :

​ರಾಶ್ಯಾಧಿಪತಿ ಚಂದ್ರನು ದ್ವಿತೀಯದಲ್ಲಿ ಕೇತುವಿನೊಂದಿಗಿದ್ದಾನೆ. ಧನ ಹರಿವು ಚೆನ್ನಾಗಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ವ್ಯಯಸ್ಥಾನದ ಗುರು-ಶುಕ್ರರಿಂದ ಧಾರ್ಮಿಕ ಕಾರ್ಯಗಳಿಗಾಗಿ ಹಣ ವಿನಿಯೋಗವಾಗಲಿದೆ. ಆರೋಗ್ಯ ಸಾಧಾರಣವಾಗಿರುತ್ತದೆ. ​ ಸಿಂಹ ರಾಶಿ :

​ನಿಮ್ಮ ರಾಶಿಯಲ್ಲೇ ಚಂದ್ರ ಮತ್ತು ಕೇತು ಇರುವುದರಿಂದ ಮಾನಸಿಕವಾಗಿ ಸಣ್ಣಪುಟ್ಟ ಗೊಂದಲಗಳಿರಬಹುದು. ಆದರೆ ಲಾಭಸ್ಥಾನದ ಗುರು-ಶುಕ್ರ ಹಾಗೂ ಭಾಗ್ಯದ ಕುಜನ ಬಲದಿಂದ ಎಲ್ಲ ಸವಾಲುಗಳನ್ನು ಜಯಿಸಿ ಆರ್ಥಿಕವಾಗಿ ಪ್ರಗತಿ ಹೊಂದುವಿರಿ.

​ಕನ್ಯಾ ರಾಶಿ :

​ನಿಮ್ಮ ರಾಶಿಗೆ ವ್ಯಯಸ್ಥಾನದಲ್ಲಿ ಚಂದ್ರನಿದ್ದಾನೆ. ಅನಗತ್ಯ ಪ್ರಯಾಣ ಮತ್ತು ಖರ್ಚುಗಳು ಹೆಚ್ಚಾಗಬಹುದು. ದಶಮದ ಗುರು-ಶುಕ್ರರಿಂದ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಜಾಗ್ರತೆ ಇರಲಿ. ​ ತುಲಾ ರಾಶಿ :

​ನಿಮ್ಮ ರಾಶಿಗೆ ಲಾಭಸ್ಥಾನದಲ್ಲಿ ಚಂದ್ರ-ಕೇತು ಹಾಗೂ ಭಾಗ್ಯದಲ್ಲಿ ಗುರು-ಶುಕ್ರರಿದ್ದಾರೆ. ಅದೃಷ್ಟ ಒಲಿದು ಬರುವ ವಾರವಿದು. ದೀರ್ಘಕಾಲದ ಆಸೆಗಳು ಈಡೇರಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ​ ವೃಶ್ಚಿಕ ರಾಶಿ :

​ನಿಮ್ಮ ರಾಶ್ಯಾಧಿಪತಿ ಕುಜನು ಷಷ್ಠದಲ್ಲಿದ್ದಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕರ್ಮಸ್ಥಾನದಲ್ಲಿ ಚಂದ್ರನಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಷ್ಟಮದ ರವಿ-ಬುಧರಿಂದ ಆರೋಗ್ಯದ ಕಡೆ ಗಮನವಿರಲಿ.

ಧನು ರಾಶಿ :

​ನಿಮ್ಮ ರಾಶಿಗೆ ಭಾಗ್ಯಸ್ಥಾನದಲ್ಲಿ ಚಂದ್ರನಿದ್ದಾನೆ. ಹಿರಿಯರ ಮತ್ತು ಗುರುಗಳ ಆಶೀರ್ವಾದದಿಂದ ನಿಂತುಹೋದ ಕೆಲಸಗಳು ಪುನಃ ಆರಂಭವಾಗಲಿವೆ. ಸಪ್ತಮದ ಗುರು-ಶುಕ್ರರ ಪ್ರಭಾವದಿಂದ ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ.

ಮಕರ ರಾಶಿ :

​ನಿಮ್ಮ ರಾಶಿಗೆ ಅಷ್ಟಮದಲ್ಲಿ ಚಂದ್ರ-ಕೇತು ಇರುವುದರಿಂದ ವಾಹನ ಚಾಲನೆಯಲ್ಲಿ ತೀವ್ರ ಎಚ್ಚರಿಕೆ ಅಗತ್ಯ. ಕಚೇರಿಯಲ್ಲಿ ವಾದ-ವಿವಾದಗಳಿಂದ ದೂರವಿರಿ. ಷಷ್ಠದ ಗುರು-ಶುಕ್ರರಿಂದಾಗಿ ಸಾಲದ ಬಾಧೆಗಳು ಸದ್ಯಕ್ಕೆ ನಿವಾರಣೆಯಾಗಲಿವೆ. ​ ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಇದ್ದು, ಸಪ್ತಮದಲ್ಲಿ ಚಂದ್ರನಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ. ಪಂಚಮದ ಗುರು-ಶುಕ್ರರಿಂದಾಗಿ ಬುದ್ಧಿವಂತಿಕೆಯ ನಿರ್ಧಾರಗಳು ಕೈಗೂಡಲಿವೆ. ಮಕ್ಕಳ ಕಡೆಯಿಂದ ಶುಭ ವಾರ್ತೆ ಕೇಳುವಿರಿ. ​ ಮೀನ ರಾಶಿ :

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

ನಿಮ್ಮ ರಾಶಿಯಲ್ಲಿ ಶನಿ ಇದ್ದು, ಷಷ್ಠದಲ್ಲಿ ಚಂದ್ರನಿದ್ದಾನೆ. ಏಳನೇ ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾದರೂ, ಷಷ್ಠ ಚಂದ್ರನ ಬಲದಿಂದ ಶತ್ರು ಬಾಧೆ ನಿವಾರಣೆಯಾಗಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು