ಬೆಂಗಳೂರು: ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ಮೂಡಿಗೆರೆ ಶಾಸಕರ ಕಾರು ಲಾಕ್ ಮಾಡಿದ ಪೊಲೀಸರು

| Updated By: Rakesh Nayak Manchi

Updated on: Jan 19, 2023 | 12:08 PM

ಮೂಡಿಗೆರೆ ಎಂಎಲ್​ಎ ಎಂದು ಸ್ಟಿಕ್ಕರ್ ಇರುವ ಥಾರ್ ಜೀಪ್ ಬಸವನಗುಡಿ ಬಿಎಂಎಸ್ ಕಾಲೇಜು ಬಳಿ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದು, ಪೊಲೀಸರು ಲಾಕ್ ಮಾಡಿದ್ದಾರೆ.

ಬೆಂಗಳೂರು: ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ಮೂಡಿಗೆರೆ ಶಾಸಕರ ಕಾರು ಲಾಕ್ ಮಾಡಿದ ಪೊಲೀಸರು
ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ಮೂಡಿಗೆರೆ ಶಾಸಕರು ಎಂದು ಸ್ಟಿಕ್ಕರ್ ಇದ್ದ ಕಾರು ಲಾಕ್ ಮಾಡಿದ ಪೊಲೀಸರು
Follow us on

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ ಯಾರೇ ಆಗಲಿ ಅದಕ್ಕೆ ತಕ್ಕ ಪ್ರತಿಫಲ ಸಿಗಲೇಬೇಕಾಗುತ್ತದೆ. ಇದು ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ವರೆಗೂ ಅನ್ವಯವಾಗುತ್ತದೆ. ಶಾಸಕರು, ಸಚಿವರ ಕಾರು ಎಂದು ಪೊಲೀಸರು ಸುಮ್ಮನಾಗುತ್ತಾರೆ. ಆದರೆ ಅಪರೂಪದಲ್ಲಿ ಅಪರೂಪವಾಗಿ ಸಂಚಾರಿ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗಳ ಕಾರುಗಳನ್ನು ಪೊಲೀಸರು ತಡೆಯುತ್ತಾರೆ. ಇದೇ ರೀತಿಯ ಘಟನೆ ಬೆಂಗಳೂರು ನಗರದ ಬಸವನಗುಡಿಯ ಬಿಎಂಎಸ್ ಕಾಲೇಜು (BMS College Basavanagudi) ಬಳಿ ನಡೆದಿದೆ. ಮೂಡಿಗೆರೆ ಎಂಎಲ್​ಎ (Mudigere MLA) ಎಂದು ಸ್ಟಿಕ್ಕರ್ ಇರುವ ಥಾರ್ ಜೀಪ್, ವಾಹನ ನಿಲುಗಡೆ ನಿಷೇಧ (No Parking) ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿದ್ದು, ಇದನ್ನು ಗಮನಿಸಿದ ಪೊಲೀಸರು ವಾಹನವನ್ನ ಕ್ಲಾಂಪ್​​ನಿಂದ ಲಾಕ್ ಮಾಡಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಬಸವನಗುಡಿ ಬಿಎಂಎಸ್ ಕಾಲೇಜು ಬಳಿ ಮೂಡಿಗೆರೆ ಎಂಎಲ್​ಎ ಎಂದು ಸ್ಟಿಕ್ಕರ್ ಅಂಟಿಸಿದ ತಾರ್ ಜೀಪ್ ಪತ್ತೆಯಾಗಿದೆ. ಆದರೆ ಈ ಜೀಪ್ ವಾಹನ ನಿಲುಗಡೆ ನಿಷೇಧಿತ ಸ್ಥಳದಲ್ಲಿ ಇದ್ದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಬಸವನಗುಡಿ ಸಂಚಾರಿ ಠಾಣಾ ಪೊಲೀಸರು ಕ್ಲಾಂಪ್​ ಮೂಲಕ ವಾಹನದ ಚಕ್ರವನ್ನು ಲಾಕ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Che Guevara: ಬೆಂಗಳೂರು, ಬಾಗೇಪಲ್ಲಿಯಲ್ಲಿ ಇಂದು ಕ್ಯೂಬಾದ ಕ್ರಾಂತಿಕಾರಿ ಚೆಗೆವಾರ ಮಗಳು, ಮೊಮ್ಮಗಳಿಗೆ ನಾಗರಿಕ ಸನ್ಮಾನ

ನೋ ಪಾರ್ಕಿಂಗ್​ನಲ್ಲಿ ಪಾರ್ಕ್​ ಮಾಡಿರುವ ಈ ಜೀಪ್ ನಿಜವಾಗಿಯೂ ಶಾಸಕರಿಗೇ ಸೇರಿದ ಜೀಪ್ ಆಗಿದಾ? ಅಥವಾ ನಕಲಿ ಎಂಎಲ್​ಎ ಸ್ಟಿಕ್ಕರ್ ಅಂಟಿಸಿದ್ದಾರೆಯೇ? ಈ ಜೀಪನ್ನು ನೋ ಪಾರ್ಕಿಂಗ್​ನಲ್ಲಿ ಪಾರ್ಕ್ ಮಾಡಿದವರು ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಎಂಎಲ್​ಎ ಸ್ಟಿಕ್ಕರ್ ಇರುವ ಕಾರು ಸೇರಿದಂತೆ ಅದರ ಮುಂಭಾಗದಲ್ಲಿ ಸಾಲಾಗಿ ನಿಲ್ಲಿಸಲಾಗಿದ್ದ ನಾಲ್ಕೈದು ಕಾರುಗಳ ಚಕ್ರಕ್ಕೂ ಪೊಲೀಸರು ಕ್ಲಾಂಪ್ ಮೂಲಕ ಲಾಕ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ