ಜಿಬಿಎಯ 5 ಪಾಲಿಕೆಗಳ ಚುನಾವಣೆ: ವಾರ್ಡ್ ವಾರು ಅಂತಿಮ ಮೀಸಲಾತಿ ಪ್ರಕಟ

ಗ್ರೇಟರ್ ಬೆಂಗಳೂರು 5 ಪಾಲಿಕೆ ಚುನಾವಣೆಗಾಗಿ 369 ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ನಗರಾಭಿವೃದ್ದಿ ಇಲಾಖೆಯು ಸಾರ್ವಜನಿಕರ ಸಲಹೆಗಳ ನಂತರ ಈ ಪಟ್ಟಿಯನ್ನು ಅಂತಿಮಗೊಳಿಸಿದ್ದು, 176 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಪಾಲಿಕೆಗಳ ವಾರ್ಡ್‌ವಾರು ವಿವರಗಳು ಇಲ್ಲಿವೆ.

ಜಿಬಿಎಯ 5 ಪಾಲಿಕೆಗಳ ಚುನಾವಣೆ: ವಾರ್ಡ್ ವಾರು ಅಂತಿಮ ಮೀಸಲಾತಿ ಪ್ರಕಟ
ಗ್ರೇಟರ್ ಬೆಂಗಳೂರು ಪ್ರಾಧಿಕಾರ
Image Credit source: Google

Updated on: Mar 08, 2026 | 10:40 AM

ಬೆಂಗಳೂರು, ಮಾರ್ಚ್​​ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಭರದಿಂದ ನಡೆದಿದ್ದು, ವಾರ್ಡ್ ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 369 ವಾರ್ಡ್​​ಗಳಿಗೆ ನಗರಾಭಿವೃದ್ದಿ ಇಲಾಖೆ ಮೀಸಲಾತಿ ಅಂತಿಮಗೊಳಿಸಿದ್ದು, ಈ ಪೈಕಿ 176 ವಾರ್ಡ್​​ಗಳು ಮಹಿಳೆಯರಿಗೆ ಮೀಸಲಾಗಿವೆ. ಕರಡು ಪಟ್ಟಿಗೆ ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಸಲಹೆ ಮತ್ತು ಸೂಚನೆಗಳ ಜೊತೆಗೆ ಸರ್ಕಾರದ ಜೊತೆಗೂ ಕೆಲ ವಿಚಾರಗಳನ್ನು ಚರ್ಚಿಸಿ, ಸೂಕ್ತವಾದವುಗಳನ್ನು ಆಯ್ದುಕೊಂಡು ಈ ಅಂತಿಮ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ.

ಮೀಸಲಾತಿ ವಿವರ

ಬೆಂಗಳೂರು ಕೇಂದ್ರ ನಗರ ಪಾಲಿಕೆ

  • ಒಟ್ಟು ವಾರ್ಡ್​​ಗಳ ಸಂಖ್ಯೆ – 63
  • SC – 11 (5 ಮಹಿಳೆ)
  • ST – 1
  • ಹಿಂದುಳಿದ ವರ್ಗ(A) – 15 (ಮಹಿಳೆ 7)
  • ಹಿಂದುಳಿದ ವರ್ಗ(B) – 4 (ಮಹಿಳೆ 2)
  • ಸಾಮಾನ್ಯ – 32 (ಮಹಿಳೆ 16)
  • ಮಹಿಳೆಯರಿಗೆ ಒಟ್ಟು 30 ವಾರ್ಡ್​​ಗಳು ಮೀಸಲು

ಇದನ್ನೂ ಓದಿ: ಮೈತ್ರಿ ಪಕ್ಷಗಳ ನಡುವೆ ಲಯ ತಪ್ಪಿದ ತಾಳ ಮೇಳ; ನಾಯಕರ ನಡುವೆ ಇಲ್ವಂತೆ ಸಮನ್ವಯತೆ!

ಬೆಂಗಳೂರು ಪೂರ್ವ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 50
  • SC – 7 (ಮಹಿಳೆ 3)
  • ST – 1
  • ಹಿಂದುಳಿದ ವರ್ಗ (A) – 14 (ಮಹಿಳೆ 7)
  • ಹಿಂದುಳಿದ ವರ್ಗ (B) – 3 (ಮಹಿಳೆ 1)
  • ಸಾಮಾನ್ಯ – 25 (ಮಹಿಳೆ 12)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 23

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 112
  • SC – 9 (ಮಹಿಳೆ 4)
  • ST – 2 (ಮಹಿಳೆ 1)
  • ಹಿಂದುಳಿದ ವರ್ಗ (A) – 30 (ಮಹಿಳೆ 15)
  • ಹಿಂದುಳಿದ ವರ್ಗ (B) – 7 (ಮಹಿಳೆ 3)
  • ಸಾಮಾನ್ಯ – 64 (ಮಹಿಳೆ 32)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 55

ಬೆಂಗಳೂರು ಉತ್ತರ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 72
  • SC – 9 (ಮಹಿಳೆ 4)
  • ST – 2 (ಮಹಿಳೆ 1)
  • ಹಿಂದುಳಿದ ವರ್ಗ (A) – 19(ಮಹಿಳೆ 9)
  • ಹಿಂದುಳಿದ ವರ್ಗ (B) – 5(ಮಹಿಳೆ 2)
  • ಸಾಮಾನ್ಯ – 37 (ಮಹಿಳೆ 18)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 34

ಬೆಂಗಳೂರು ದಕ್ಷಿಣ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 72
  • SC – 7 (ಮಹಿಳೆ 3)
  • ST – 1
  • ಹಿಂದುಳಿದ ವರ್ಗ (A) – 19 ( =ಮಹಿಳೆ 9)
  • ಹಿಂದುಳಿದ ವರ್ಗ (B) – 5 (ಮಹಿಳೆ 2)
  • ಸಾಮಾನ್ಯ – 40 (ಮಹಿಳೆ 20)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು- 34

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು


ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 10:31 am, Sun, 8 March 26

Follow Us