ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ, ವಿವರ ಇಲ್ಲಿದೆ
ಏಪ್ರಿಲ್ 1 ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ನ ಹೊಸಕೋಟೆ-ದೇವನಹಳ್ಳಿ ವಿಭಾಗದ ಟೋಲ್ ಶುಲ್ಕ ಹೆಚ್ಚಿಸಲಾಗಿದೆ. 2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) STRR ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಆರು ತಿಂಗಳ ಮುಂಚೆಯೇ ಶುಲ್ಕ ಹೆಚ್ಚಳವಾಗಿದೆ.
ಬೆಂಗಳೂರು, ಮಾರ್ಚ್.28: ಬೆಂಗಳೂರು-ಮೈಸೂರು ಹೆದ್ದಾರಿಯ (Bengaluru-Mysuru Expressway) ಟೋಲ್ ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ. ಜೊತೆಗೆ ಏಪ್ರಿಲ್ 1 ರಿಂದ ವಾಹನ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 7 (ಬೆಂಗಳೂರು-ಹೈದರಾಬಾದ್) ಟೋಲ್ ಶುಲ್ಕಗಳು 3% ಹೆಚ್ಚಿಸಲಾಗಿದೆ, STRR ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ.
2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) STRR ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಕೇವಲ ಆರು ತಿಂಗಳ ಒಳಗೆಯೇ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ NHAI ಯ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಪ್ರತಿಕ್ರಿಯೆ ನೀಡಿದ್ದು, ಟೋಲ್ ಪರಿಷ್ಕರಣೆಯು “ವಾರ್ಷಿಕ, ರಾಷ್ಟ್ರವ್ಯಾಪಿ” ವ್ಯಾಯಾಮವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪುಣೆ: ಹೆದ್ದಾರಿಯ ಹೋಟೆಲ್ ಬಳಿ ಕೊಯ್ತಾ ಗ್ಯಾಂಗ್ ಲೀಡರ್ ಅವಿನಾಶ್ ಧನ್ವೆಯನ್ನು ಗುಂಡಿಕ್ಕಿ ಹತ್ಯೆ
ಎಸ್ಟಿಆರ್ಆರ್ನ ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ವಿಭಾಗದಲ್ಲಿ (42 ಕಿಮೀ) ಟೋಲ್ ಶುಲ್ಕವನ್ನು ಏಪ್ರಿಲ್ನಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದರು. ಮಾರ್ಚ್ 11 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 80 ಕಿಮೀ ವ್ಯಾಪ್ತಿಯ STRR ನ ಎರಡು ವಿಸ್ತರಣೆಗಳನ್ನು ಉದ್ಘಾಟಿಸಿದರು. ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗಿದೆ. ಜೊತೆ ಟೋಲ್ ಮುಕ್ತ ಕೂಡ. ಟೋಲ್ ಸಂಗ್ರಹಿಸಲು ಗುತ್ತಿಗೆದಾರರನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಬ್ರಹ್ಮಂಕರ್ ಹೇಳಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಶುಲ್ಕ
ಹೆದ್ದಾರಿಯ 55.63-ಕಿಮೀ ಬೆಂಗಳೂರು-ನಿಡಘಟ್ಟ ವಿಭಾಗವನ್ನು ಬಳಸುವ ಕಾರುಗಳು/ವ್ಯಾನ್ಗಳು/ಜೀಪ್ಗಳು ಏಕಮುಖ ಪ್ರಯಾಣಕ್ಕೆ ರೂ 170 ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು ರೂ 255 ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು ಕ್ರಮವಾಗಿ 165 ಮತ್ತು 250 ರೂ. ಇದೆ.
ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್ಗಳು ಕ್ರಮವಾಗಿ ರೂ 270 ಮತ್ತು ರೂ 405 ಇದೆ. ಏಪ್ರಿಲ್.01ರಿಂದ ಏಕಮುಖ ಪ್ರಯಾಣಕ್ಕೆ ರೂ 275 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 415 ಪಾವತಿಸಬೇಕಾಗುತ್ತೆ.
ಟ್ರಕ್ಗಳು ಮತ್ತು ಬಸ್ಗಳು (ಎರಡು ಆಕ್ಸಲ್ಗಳು) ಏಕಮುಖ ಪ್ರಯಾಣಕ್ಕೆ ರೂ 580 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 870 ಪಾವತಿಸಬೇಕಾಗುತ್ತೆ. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳಿಗೆ ಮಾಸಿಕ ಪಾಸ್ 340 ರೂ.ನಿಂದ 330 ರೂ. ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಿಸಲಾಗುವುದು.
ನಿಡಘಟ್ಟ ಮತ್ತು ಮೈಸೂರು ನಡುವೆ 160 ರೂ (ಏಕಮುಖ ಪ್ರಯಾಣ) ಮತ್ತು ಕಾರುಗಳು/ವ್ಯಾನ್ಗಳು/ಜೀಪ್ಗಳಿಗೆ ರೂ 240 ಟೋಲ್ ಶುಲ್ಕಗಳು ಕ್ರಮವಾಗಿ ರೂ 155 ಮತ್ತು ರೂ 235 ಆಗಿರುತ್ತದೆ.
ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ. ಕಾರುಗಳಿಗೆ ಏಕಮುಖ ಟೋಲ್ 330 ರೂ.
ಇದನ್ನೂ ಓದಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ
ದೊಡ್ಡಬಳ್ಳಾಪುರ-ಹೊಸಕೋಟೆ ಟೋಲ್
ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ನಡುವೆ ಕಾರುಗಳು/ವ್ಯಾನ್ಗಳು/ಜೀಪ್ಗಳಿಗೆ ಏಕಮುಖ ಪ್ರಯಾಣ ರೂ 80 ಮತ್ತು ದ್ವಿಮುಖ ಪ್ರಯಾಣ ರೂ 120. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿಬಸ್ಗಳು ಕ್ರಮವಾಗಿ ಏಕ ಪ್ರಯಾಣ 130 ರೂ. ಮತ್ತು ದ್ವಿಮುಖ ಪ್ರಯಾಣ ರೂ 200. ಟ್ರಕ್ಗಳು ಮತ್ತು ಬಸ್ಗಳು (ಎರಡು ಆಕ್ಸಲ್ಗಳು) ಏಕಮುಖ ರೂ 275 ಮತ್ತು ದ್ವಿಮುಖ ರೂ 415. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳಿಗೆ ಮಾಸಿಕ ಪಾಸ್ 340 ರೂ. ದೇವನಹಳ್ಳಿ ಬಳಿಯ ನಲ್ಲೂರಿನಲ್ಲಿ ಟೋಲ್ ಸಂಗ್ರಹಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ 7
ರಾಷ್ಟ್ರೀಯ ಹೆದ್ದಾರಿ 7 ರ (ಎಪಿ/ಕರ್ನಾಟಕ ಗಡಿ-ದೇವನಹಳ್ಳಿ) 71.45-ಕಿಮೀ ವಿಭಾಗವನ್ನು ಬಳಸಲು ಕಾರುಗಳು/ಜೀಪ್ಗಳು/ವ್ಯಾನ್ಗಳು/ಲಘು ಮೋಟಾರು ವಾಹನಗಳು ಏಕಮುಖ ಪ್ರಯಾಣಕ್ಕೆ ರೂ 115 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 175 ಪಾವತಿಸಬೇಕಾಗುತ್ತದೆ. ಬಾಗೇಪಲ್ಲಿಯಲ್ಲಿ ಟೋಲ್ ಸಂಗ್ರಹಿಸಲಾಗುವುದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:08 am, Thu, 28 March 24