Bengaluru New Year: ಹೊಸ ವರ್ಷಾಚರಣೆಗೆ ಹೊಸ ಬೇಡಿಕೆಗಳನ್ನಿಟ್ಟ ಬಾರ್, ಪಬ್ ಮಾಲೀಕರು
ಎರಡು ವರ್ಷಗಳ ಕೊರೋನಾ ಅಟ್ಟಹಾಸದ ಹಿನ್ನಲೆ ಬೆಂಗಳೂರಿನಲ್ಲಿ ನಡೆಯುವ ವಿಜ್ರಂಭಣೆಯ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಇದೀಗ ಎರಡು ವರ್ಷಗಳ ನಂತರ ಹೊಸವರ್ಷಾಚರಣೆಗೆ ಬೆಂಗಳೂರು ಸಜ್ಜಾಗುತ್ತಿದೆ.
ಬೆಂಗಳೂರು: ಎರಡು ವರ್ಷಗಳ ಕೋವಿಡ್ ಮಹಾಮಾರಿ ಅಟ್ಟಹಾಸಕ್ಕೆ ನಗರದಲ್ಲಿ ನಡೆಯುತ್ತಿದ್ದ ವಿಜ್ರಂಭಣೆಯ ಹೊಸ ವರ್ಷ ಆಚರಣೆ (Bengaluru New Year Celebration)ಗೆ ತಡೆಬಿದ್ದಿತ್ತು. ಅದಾಗ್ಯೂ ಸೋಂಕು ಪ್ರಮಾಣದಲ್ಲಿ ಕ್ಷೀಣಿಸುತ್ತಿದ್ದಂತೆ ಸರಳ ಆಚರಣೆಗೆ ಅನುಮತಿಸಲಾಗಿತ್ತು. ಆದರೆ ಈಗ ಕೊರೋನಾ ಮಹಾಮಾರಿ ತೀರಾ ಕಡಿಮೆಯಾಗಿದ್ದಂರಿಂದ ಮತ್ತೆ ವಿಜ್ರಂಭಣೆಯ ಹೊಸ ವರ್ಷಾಚರಣೆಗೆ ನಗರದ ಜನರು ಸಜ್ಜಾಗುತ್ತಿದ್ದು, ಬಾರ್ ಮತ್ತು ಪಬ್ (Bengaluru Bar And Pub) ಮಾಲೀಕರು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಅದರಂತೆ ಎರಡು ವರ್ಷಗಳ ನಂತರ ಹೊಸ ವರ್ಷಾಚರಣೆ ನಡೆಯುತ್ತಿರುವುದರಿಂದ ಬಾರ್ ಮತ್ತು ಪಬ್ ಮಾಲೀಕರು ಅದ್ದೂರಿ ಆಚರಣೆಗೆ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಕೊವಿಡ್ ಬಳಿಕ ಸಿಲಿಕಾನ್ ಸಿಟಿಯಲ್ಲಿ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಎರಡು ವರ್ಷಗಳ ನಂತರದ ನ್ಯೂಇಯರ್ ಕ್ರಿಸ್ಮಸ್ ಸೆಲೆಬ್ರೆಷನ್ ಗೆ ಎಲ್ಲಡೆ ತಯಾರಿ ನಡೆಸಲಾಗುತ್ತಿದ್ದು, ಅದರಲ್ಲೂ ಸಾವಿರಾರರು ಜನರು ಸೇರುವ ಎಂಜಿರೋಡ್, ಚರ್ಚ್ ಸ್ಟ್ರೀಟ್ನಲ್ಲಿ ತಯಾರಿ ನಡೆಸಲಾಗುತ್ತಿದೆ. ಈ ನಡುವೆ ಗ್ರಾಂಡ್ ಸೆಲೆಬ್ರೇಷನ್ಗೆ ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್ ಹಾಗೂ ಪಬ್ ಮಾಲೀಕರ ಸಂಘದಿಂದ ಡಿಮ್ಯಾಂಡ್ ಮಾಡಿದ್ದಾರೆ.
ಈ ಬಾರಿಯ ಹೊಸ ವರ್ಷಾಚರಣೆ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿರುವ ಮಾಲೀಕರ ಸಂಘ, ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಅವುಗಳು ಈ ಕೆಳಗಿನಂತಿವೆ:
- ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮನವಿ
- ಹೊಸ ವರ್ಷಾಚರಣೆ ಸಂಭ್ರಮಕ್ಕಾಗಿ ಮಧ್ಯರಾತ್ರಿ 3 ಗಂಟೆ ತನಕ ಅವಕಾಶ ನೀಡಬೇಕು
- ಎಂ.ಜಿ.ರೋಡ್, ಚರ್ಚ್ ಸ್ಟ್ರಿಟ್ ಹಾಗೂ ಕಮರ್ಸಿಯಲ್ ಸ್ಟ್ರೀಟ್ನಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಕೆಗೆ ಮನವಿ
- ಮತ್ತೊಂದಡೆ, ಈ ಬಾರಿ ಲೇಡಿಸ್ ಸೇಫ್ಟಿ ಬಗ್ಗೆ ವಿಶೇಷ ಒತ್ತು ನೀಡಿರುವ ಸಂಘ, 2016 ರ ಕಹಿ ಘಟನೆ ಮರುಕಳಿಸದಿರಲು ನಿರ್ಧಾರ
- ಮಹಿಳಾ ಸುರಕ್ಷತೆಗಾಗಿ ಲೇಡಿ ಬೌನ್ಸರ್ಸ್ ನಿಯೋಜನೆ
- ಮಹಿಳೆಯರು ಕುಣಿದು ಕುಪ್ಪಳಿಸಲು ಸಪರೇಟ್ ಡ್ಯಾನ್ಸ್ ಫ್ಲೋರ್ಗೆ ಮುಂದಾಗಿರುವ ಕೆಲವು ಪಬ್ ಬಾರ್ ಮಾಲೀಕರು
- ಮಧ್ಯರಾತ್ರಿ 12 ಗಂಟೆಗೆ ಲೈಟ್ಸ್ ಆಫ್ ಮಾಡದಿರಲು ನಿರ್ಧಾರ
- ಮಹಿಳೆಯರಿಗೆ ಪಾರ್ಟಿ ಸೆಲೆಬ್ರೆಷನ್ ನಂತರ ರಕ್ಷಣಾ ಕ್ಯಾಬ್ ಸರ್ವಿಸ್ ನೀಡಲು ಪ್ಲಾನ್
- ಹೆಚ್ಚಿನ ಮಹಿಳಾ ಪೊಲೀಸ್ ಹಾಗೂ ಬೌನ್ಸರ್ಗಳ ನಿಯೋಜನೆಗೂ ಚಿಂತನೆ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 am, Fri, 16 December 22