ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 14 ವರ್ಷದ ಬಾಲಕ ತನ್ನ ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಘಟನೆ ನಡೆದಿದೆ. ಬೆಂಗಳೂರಿನ ಆರ್.ಟಿ.ನಗರದ ಮನೆಯೊಂದರಲ್ಲಿ ಫೆ.26ರಂದು ಅಣ್ಣಮ್ಮ(44) ಎಂಬ ಮಹಿಳೆ ಮೃತಪಟ್ಟಿದು ತಾಯಿ ಮಾತು ಬಿಟ್ಟಿದ್ದಾರೆ, ಮಲಗಿದ್ದಾರೆ ಎಂದೇ ತಿಳಿದು ಬಾಲಕ ತನ್ನ ತಾಯಿಯ ಶವದ ಜೊತೆ ಎರಡು ದಿನ ಕಳೆದಿದ್ದಾನೆ.
ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಇರುವ ಮನೆಯಲ್ಲಿ ಫೆಬ್ರವರಿ 26 ರಂದು ಲೋ ಬಿಪಿ ಮತ್ತು ಶುಗರ್ನಿಂದಾಗಿ ಅಣ್ಣಮ್ಮ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಫೆಬ್ರವರಿ 28ರ ವರೆಗೂ ಬಾಲಕ ತನ್ನ ತಾಯಿಯ ಶವದ ಜೊತೆಗೆ ಕಾಲ ಕಳೆದಿದ್ದಾನೆ. ಹೊರಗೆ ಬಂದು ಊಟ, ತಿಂಡಿ ತೆಗೆದುಕೊಂಡು ಮತ್ತೆ ಮನೆ ಸೇರಿಕೊಳ್ಳುತ್ತಿದ್ದನಂತೆ. ರಾತ್ರಿ ಪೂರ್ತಿ ತಾಯಿಯ ಜೊತೆಯಲ್ಲೇ ಮಲಗಿ ಕಾಲ ಕಳೆಯುತ್ತಿದ್ದನಂತೆ. ಆದರೆ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಕೊಂಚವೂ ಮಾಹಿತಿ ನೀಡಿಲ್ಲ. ನಂತರ ತಂದೆ ಸ್ನೇಹಿತರಿಗೆ ತನ್ನ ತಾಯಿ ಮಾತನಾಡ್ತಿಲ್ಲ ಎಂದು ಹೇಳಿದ್ದನಂತೆ. ಆಗ ಸ್ನೇಹಿತರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ.
ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ರು. ಆದ್ರೆ ಈಗ ತಾಯಿ ಕೂಡ ಮೃತಪಟ್ಟಿದ್ದು ಅಮಾಯಕ ಬಾಲಕ ತಬ್ಬಲಿಯಾಗಿದ್ದಾನೆ. ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸೋಲಿನ ನೋವಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲೇ ಗುಂಡು ತುಂಡು ಪಾರ್ಟಿ, ಶಿಸ್ತಿನ ಪಕ್ಷದ ನಾಯಕರ ವಿಡಿಯೋ ವೈರಲ್
ಇನ್ನು ಮತ್ತೊಂದೆಡೆ ಕೌಟುಂಬಿಕ ಕಲಹ ಹಿನ್ನೆಲೆ ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನ ನಡೆದಿರುವ ಘಟನೆ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ. ಕವಿತಾ ಮಚ್ಚಿನಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಮಹಿಳೆ. ಆರೋಪಿ ಶ್ರೀನಿವಾಸ್ನನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೊಳಗಾದ ಕವಿತಾಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಠಾಣೆಗೆ ಬರುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಅನಿತಾ, ಘಟನೆ ನೋಡಿ ಸಾರ್ವಜನಿಕರ ಸಹಾಯದಿಂದ ಆರೋಪಿ ಶ್ರೀನಿವಾಸ್ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೋಲಾರ ನಗರ ಠಾಣೆ ಮಹಿಳಾ ಕಾನ್ ಸ್ಟೇಬಲ್ ಅನಿತಾ ಅವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಕಾನ್ ಸ್ಟೇಬಲ್ ಗಳಾದ ಅನಿತಾ, ಹೇಮಂತ್, ಮಹೇಶ್ ಅವರ ಕಾರ್ಯಕ್ಕೆ ಎಸ್ಪಿ ನಾರಾಯಣ್ ಮೆಚ್ಚಿ ತಲಾ ಹತ್ತು ಸಾವಿರ ಬಹುಮಾನ ಘೋಷಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:00 am, Thu, 2 March 23