ಸೋಲಿನ ನೋವಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲೇ ಗುಂಡು ತುಂಡು ಪಾರ್ಟಿ, ಶಿಸ್ತಿನ ಪಕ್ಷದ ನಾಯಕರ ವಿಡಿಯೋ ವೈರಲ್
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಸೋಲಿನ ನೋವಲ್ಲಿ ಪಕ್ಷದ ಕಚೇರಿಯಲ್ಲೇ ಬಿಜೆಪಿ ಮುಖಂಡರು ಎಣ್ಣೆ ಪಾರ್ಟಿ ಮಾಡಿದ್ದಾರೆ.
ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿ ಬಿಜೆಪಿ ಮುಖಂಡರು ಗುಂಡು ತುಂಡು ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪಾರ್ಟಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಮುಖಂಡರ ವರ್ತನೆಗೆ ಸ್ಥಳೀಯರು ಟೀಕೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಸೋಲಿನ ನೋವಲ್ಲಿ ಪಕ್ಷದ ಕಚೇರಿಯಲ್ಲೇ ಬಿಜೆಪಿ ಮುಖಂಡರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಶಿಸ್ತಿನ ಪಕ್ಷದ ಬಿಜೆಪಿಯ ಕಚೇರಿಯಲ್ಲಿ ನಡೆದ ಪಾರ್ಟಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ. ಶಿಸ್ತಿನ ಪಕ್ಷದಲ್ಲಿ ಮುಖಂಡರ ಆಸಿಸ್ತು ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಅಶಿಸ್ತು ತೋರಿದವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಬೆಂಬಲಿಗರು ಒತ್ತಾಯಿಸಿದ್ದಾರೆ.
ಹಾಸನ ಅವದಿ ಮುಗಿದಿದ್ದ ಸಕಲೇಶಪುರ ತಾಲೂಕಿನ ಉಚ್ಚಂಗಿ ಮತ್ತು ವಣಗೂರು ಗ್ರಾಮ ಪಂಚಾಯಿತಿಗಳಿಗೆ ಫೆಬ್ರವರಿ 25 ರಂದು ಚುನಾವಣೆ ನಡೆದಿತ್ತು. ಉಚ್ಚಂಗಿ 10 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿಗರು, 8 ಬಿಜೆಪಿ ಹಾಗು ಕಾಂಗ್ರೆಸ್ ಬೆಂಬಲಿಗರು ತಲಾ ಒಂದು ಸ್ಥಾನ ಗೆದ್ದಿದ್ದರು, ವಣಗೂರು ಪಂಚಾಯಿತಿಯ 9 ಸ್ಥಾನಗಳಲ್ಲಿ ಜೆಡಿಎಸ್ 6 ಹಾಗು ಬಿಜೆಪಿ ಬೆಂಬಲಿಗರು 3 ಸ್ಥಾನ ಗೆದ್ದಿದ್ದರು, ಇನ್ನು ಕೇವಲ ಒಂದು ತಿಂಗಳಲ್ಲಿ ಎದುರಾಗಲಿರೋ ವಿದಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಜೆಡಿಎಸ್ ನ ಕುಮಾರಸ್ವಾಮಿಗೆ ಬಿಜೆಪಿ ಪ್ರಭಲ ಪೈಪೋಟಿ ನೀಡಲಿದೆ ಎಂಬ ಚರ್ಚೆ ನಡುವೆ ಬಂದ ಈ ಚುನಾವಣಾ ಫಲಿತಾಂಶದಲ್ಲಿ ತೀವ್ರ ಹಿನ್ನಡೆ ಆದ ಕಾರಣ ತೀವ್ರ ಬೇಸರಗೊಂಡಿದ್ದ ಸ್ಥಳೀಯ ಬಿಜೆಪಿ ನಾಯಕರು ಚುನಾವಣಾ ಫಲಿತಾಂಶ ಬಂದ ಫೆಬ್ರವರಿ 28 ರ ರಾತ್ರಿ ಬಿಜೆಪಿ ಕಚೇರಿಯಲ್ಲೆ ಪಾರ್ಟಿ ಮಾಡಿದ್ದಾರೆ.
ಫಲಿತಾಂಶದಲ್ಲಿ ಬಿಜೆಪಿಗೆ ಪರಾಜಯ ಆದ ಕಾರಣ ಬೇಸರದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಸಕಲೇಶಪುರ ತಾಲೂಕು ಮಂಡಲ ಅಧ್ಯಕ್ಷ ಮಂಜುನಾಥ ಸಾಂಗ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್ ಸೇರಿ ಹಲವು ಮುಖಂಡರು ಎಣ್ಣೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:00 am, Thu, 2 March 23