ಡಿಕೆ ಶಿವಕುಮಾರ್​ಗೆ ಒಂದು ಅವಕಾಶ ಮಾಡಿಕೊಡಿ: ಪರೋಕ್ಷವಾಗಿ ಸಿಎಂ ಅಭ್ಯರ್ಥಿ ಎಂದ ಡಿಕೆ ಸುರೇಶ್​​

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಡಿ.ಕೆ. ಶಿವಕುಮಾರ ಸಿಎಂ ಅಭ್ಯರ್ಥಿ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

Follow us
ಗಂಗಾಧರ​ ಬ. ಸಾಬೋಜಿ
|

Updated on:Mar 01, 2023 | 8:55 PM

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಡಿ.ಕೆ. ಶಿವಕುಮಾರ ಸಿಎಂ ಅಭ್ಯರ್ಥಿ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಜಿಲ್ಲೆಯ  ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್​ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಹಾಸನ ಜಿಲ್ಲೆಯವರಿಗೆ ರಾಮನಗರದಲ್ಲಿ ರಾಜಕೀಯವಾಗಿ ಅವಕಾಶ ನೀಡಿದ್ದೇವೆ. ಕಳೆದ ಬಾರಿ ನಾವೇ ಅವರಿಗೆ ಸಿಎಂ ಆಗಲು ಬೆಂಬಲ ನೀಡಿದ್ದೆವು. ಈಗ ಡಿ.ಕೆ. ಶಿವಕುಮಾರ್​ ಸಿಎಂ ಆಗುವ ಅವಕಾಶವಿದೆ ಎಂದು ಪರೋಕ್ಷವಾಗಿ ಹೇಳಿದರು. ಹಾಸನ ಜಿಲ್ಲೆ ಜೆಡಿಎಸ್​ ಪಕ್ಷ ಭದ್ರಕೋಟೆ ಎಂಬ ಭಾವನೆ ಇದೆ. ಜಿಲ್ಲೆಯಲ್ಲಿ ಮತ್ತೆ ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಕಾಲ ಪುನರಾವರ್ತನೆ ಮಾಡುವಂಥದ್ದನ್ನು ಎದುರು ನೋಡ್ತಿದ್ದೇವೆ ಎಂದರು.

ಜೆಡಿಎಸ್ ಶಾಸಕರು ಬಹಳಷ್ಟು ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಜೆಡಿಎಸ್​ಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಾರೆ. ಹೆಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದೀರಾ? ಹಾಸನದಲ್ಲಿ ಸೋತಾಗ ರಾಮನಗರದಲ್ಲಿ ನಮ್ಮ ಸಮಾಜ ಅವಕಾಶ ನೀಡಿದೆ. ಹೆಚ್.ಡಿ.ಕುಮಾರಸ್ವಾಮಿಯನ್ನು 2 ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ. ಇಂದು ನಿಮಗೆ ಮತ್ತೊಂದು ಅವಕಾಶ ಬಂದಿದೆ. ಅದೇ ಸಮಾಜದ ಡಿ.ಕೆ.ಶಿವಕುಮಾರ್​ಗೆ ಒಮ್ಮೆ ಅವಕಾಶ ಮಾಡಿಕೊಡಿ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್​​, ಡಾ.ಜಿ.ಪರಮೇಶ್ವರ್​​ ನಡುವೆ ಗೊಂದಲವಿಲ್ಲ ಎಂದು ಡಿ.ಕೆ.ಸುರೇಶ್​ ಹೇಳಿದರು.

ಇದನ್ನೂ ಓದಿ: ಹಾಸನದಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಡಿಕೆ ಶಿವಕುಮಾರ್​, ದಳಪತಿಗಳಲ್ಲಿ ಮತ್ತಷ್ಟು ಟಿಕೆಟ್​ ಟೆನ್ಷನ್

ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದ ಡಿಕೆ ಶಿವಕುಮಾರ್ 

ಡಿಕೆ ಶಿವಕುಮಾರ್​ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಎರಡು ಸಾವಿರ ಗುತ್ತಿಗೆದಾರರು ಇದ್ದರಂತೆ. ಈಗ ಅವರೆಲ್ಲಾ ಯಾರೋ ಇಬ್ಬರ ಕೈ ಕೆಳಗೆ ಮೇಸ್ತ್ರಿಗಳಾಗಿದಾರಂತೆ. ಇದಕ್ಕೆ ಕಾರಣ ಯಾರು ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ಇದನ್ನ ಬದಲಾವಣೆ ಮಾಡೋ ಅವಕಾಶ ನಿಮ್ಮ ಕೈಲಿದೆ. ಹೋರಾಟ ಮಾಡೋನಿಗೆ ಭಯ ಇರೋದಿಲ್ಲ. ಹಾಗಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡಿ ಎಂದು ಕರೆ ನೀಡಿದರು. ನಾವು ಎಂಬತ್ತು ಜನ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಣ್ಣ ಸಿಎಂ ಆದರು. ಆದರೆ ಬಾವು ಬೆಂಬಲ ಕೊಟ್ಟು ಸರ್ಕಾರ ಬಂದರೂ ನಮ್ಮನ್ನ ಜಿಲ್ಲೆಯಲ್ಲಿ ಹತ್ತಿರ ಸೇರಿಸಲಿಲ್ಲ ಎಂದು ಗೊತ್ತಾಯ್ತು.

ಇದನ್ನೂ ಓದಿ: Belagavi: ರೈತರ ರಕ್ತಹೀರಿ, ಸುಲಿಗೆ ಮಾಡಿ 6 ಸಾವಿರ ಕೊಟ್ಟಿದ್ದೇನೆ ಎನ್ನುವ ಮೋದಿ; ಸಿದ್ದರಾಮಯ್ಯ ಕಿಡಿ

ಹೊಳೆನರಸೀಪುರದಲ್ಲಿ ಜನರೇ ಬದಲಾವಣೆ ಬಯಸಿದಾರೆ. ಈ ಸರ್ಕಾರ ನುಡಿದಂತೆ ನಡೆಯಲಿಲ್ಲ, ಬಡವರ ಪರವಾಗಿ ಅಧಿಕಾರ ಮಾಡಲಿಲ್ಲ. ಈ ಸರ್ಕಾರ ಬರೋಕೆ ಕಾರಣ ಯಾರು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ನಾವು ಕೊಟ್ಟ ಬೆಂಬಲವನ್ನು ಉಳಿಸಿಕೊಳ್ಳಲಿಲ್ಲ. ನಾವು ಒಂಚೂರು ವಂಚನೆ ಮಾಡಲಿಲ್ಲ, ಅವರು ಸರಿಯಾಗಿ ಆಡಳಿತ ಮಾಡಲಿಲ್ಲ. ದಂಡನಾಯಕ ಆದವನು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿತ್ತು. ಆದರೆ ಅವರು ಮಾಡದೆ ಈ ಸರ್ಕಾರ ಅಧಿಕಾರಕ್ಕೆ ಬಂತು ಎಂದು ಕಿಡಿಕಾರಿದರು.

ಜನರ ಪರವಾಗಿ ಕೆಲಸ ಮಾಡಿದ್ದು, ಮಾಡೋದು ಕಾಂಗ್ರೆಸ್ ಸರ್ಕಾರ ಮಾತ್ರ. ಬಿಜೆಪಿ ಯಾವತ್ತೂ ಜನರ ಬದುಕಿನ ಬದಲಾವಣೆ ಮಾಡೋ ಯೋಜನೆ ಮಾಡಿಲ್ಲ. ಹಾಗಾಗಿ ಕಾಂಗ್ರೆಸ್ ಬೆಂಬಲಿಸಿ. ಜೆಡಿಎಸ್​ ಬರಲ್ಲ ಓಟ್ ವೇಸ್ಟ್ ಮಾಡಿಕೊಳ್ಳಬಾರದು ಎಂದು ಜನರೇ ತೀರ್ಮಾನ ಮಾಡಿದಾರೆ. ಹಾಗಾಗಿ ಜೆಡಿಎಸ್​ಗೆ ಮತ ನೀಡಿ ನೀವು ನಿಮ್ಮ ಓಟ್ ವೇಸ್ಟ್ ಮಾಡಬೇಡಿ. ನಮ್ಮ ಪಕ್ಷಕ್ಕೆ ಮತ ನೀಡಿ ರೈತನ ಮಗನಿಗೆ ಅವಕಾಶ ಕೊಡಿ ಎಂದು ಡಿಕೆ ಶಿವಕುಮಾರ್​ ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:55 pm, Wed, 1 March 23

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು