ಹಾಸನದಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಡಿಕೆ ಶಿವಕುಮಾರ್​, ದಳಪತಿಗಳಲ್ಲಿ ಮತ್ತಷ್ಟು ಟಿಕೆಟ್​ ಟೆನ್ಷನ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಸನದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರಿಂದ ದಳಪತಿಗಳಲ್ಲಿ ಮತ್ತಷ್ಟು ಟಿಕೆಟ್​ ಟೆನ್ಷನ್ ಹೆಚ್ಚಾಗಿದೆ.

ಹಾಸನದಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಡಿಕೆ ಶಿವಕುಮಾರ್​, ದಳಪತಿಗಳಲ್ಲಿ ಮತ್ತಷ್ಟು ಟಿಕೆಟ್​ ಟೆನ್ಷನ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us
ರಮೇಶ್ ಬಿ. ಜವಳಗೇರಾ
|

Updated on: Mar 01, 2023 | 3:08 PM

ಹಾಸನ: ಜೆಡಿಎಸ್‌ ಮನೆಯಲ್ಲಿ ಹೊತ್ತಿ ಉರಿಯುತ್ತಿರುವ ಹಾಸನ ಟಿಕೆಟ್ ಕಿಚ್ಚು ಧಗಧಗಿಸುತ್ತಿದೆ. ಸ್ವರೂಪ್‌ಗೆ ಟಿಕೆಟ್‌ ಕೊಡಲು ಹೆಚ್​ಡಿ ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಭವಾನಿಗೆ ಟಿಕೆಟ್‌ ಬೇಕು ಎಂದು ಹೆಚ್​ಡಿ ರೇವಣ್ಣ ಜಿದ್ದಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಟಿಕೆಟ್ ದಳ್ಳುರಿ ಬೇರೆಯೇ ಸ್ವರೂಪ ಪಡೆದುಕೊಳ್ಳುತ್ತಿದ್ದು, ಟಿಕೆಟ್‌ ಗುದ್ದಾಟ ಪ್ರತಿಷ್ಠೆ ಯುದ್ಧವಾಗಿ ಬದಲಾಗಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಸನದಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಗುಂಪುಗಾರಿಕೆ ನಿಮ್ಮಿಂದ, ನಿಮ್ಮ ಕುಟುಂಬದಿಂದ ಆಗುತ್ತಿದೆ: ರೇವಣ್ಣ, ಕುಮಾರಸ್ವಾಮಿ ವಿರುದ್ಧ JDS ಶಾಸಕ ರಾಮಸ್ವಾಮಿ ವಾಗ್ದಾಳಿ

ಈಗಾಗಲೇ ಅರಸೀಕೆರೆ ‌ಶಾಸಕ ಶಿವಲಿಂಗೇಗೌಡ ಜೆಡಿಎಸ್​ನಿಂದ ದೂರು ಉಳಿದುಕೊಂಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ. ಇನ್ನು ಜಿಲ್ಲೆ ಮತ್ತೋರ್ವ ಜೆಡಿಎಸ್​ ಶಾಸಕ ಎ‌.ಟಿ ರಾಮಸ್ವಾಮಿ ಸಹ ದಳಪತಿಗಳ ಮೇಲೆ ಮುನಿಸಿಕೊಂಡಿದ್ದು, ತೆನೆ ಇಳಿಸಿ ಕೂ ಹಿಡಿಯಲು ಪ್ಲಾನ್ ಮಾಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಡಿಕೆ ಶಿವಕುಮಾರ್ ಕಣ್ಣು​ ಹಾಸನ ಜೆಡಿಎಸ್​ ಟಿಕೆಟ್​​ನ ಪ್ರಬಲ ಆಕಾಂಕ್ಷಿ ಸ್ವರೂಪ್​ ಮೇಲೆ ಬಿದ್ದಿದ್ದು, ಅವರನ್ನು ಪಕ್ಷಕ್ಕೆ ಸೆಳೆಲು ತಂತ್ರರೂಪಿಸಿದ್ದಾರೆ. ಈ ಬಾರಿ ಹಾಸನ ಟಿಕೆಟ್​ ಸ್ವೂರಪ್​ಗೆ ಕೊಡಿಸಲು ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಡಿಕೆಶಿ ಸ್ವೂರಪ್​ಗೆ ಗಾಳ ಹಾಕಿದ್ದಾರೆ.

ಹಾಸನದಲ್ಲಿ ಇಂದು(ಮಾರ್ಚ್ 01) ಮಾತನಾಡಿದ ಡಿಕೆ ಶಿವಕುಮಾರ್, ಶೀಘ್ರದಲ್ಲೇ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ತಾರೆ. ಮಾ.5ರಂದು ಸಂಗೊಳ್ಳಿ ರಾಯಣ್ಣ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅರಸೀಕೆರೆಗೆ ಸಿದ್ದರಾಮಯ್ಯ ಭೇಟಿ ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಭಾಗಿಯಾಗುತ್ತಾರೆ. ಸ್ವರೂಪ್​​ ಜತೆ ಮಾತನಾಡಿದ್ದೇನೆ. ಎ.ಟಿ.ರಾಮಸ್ವಾಮಿ ಕೂಡ ಮಾತನಾಡಿದ್ದಾರೆ. ನಾನು ಎ.ಮಂಜು ಜೊತೆ ಮಾತನಾಡಿದ್ದು ನಿಜ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹಾಸನ ಜಿಲ್ಲಾ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.

ಇದನ್ನೂ ಓದಿ: ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ, ಅರ್ಥಮಾಡಿಕೊಳ್ಳಿ: ಹಾಸನದಲ್ಲಿ ಕುಮಾರಸ್ವಾಮಿ ಹೇಳಿಕೆ

ಒಂದು ವೇಳೆ ಅಂತಿಮವಾಗಿ ಹಾಸನ ಜೆಡಿಎಸ್​ ಟಿಕೆಟ್​​ ರೇವಣ್ಣ ಕುಟುಂಬಕ್ಕೆ ಸಿಕ್ಕರೆ ಸ್ವೂರಪ್​ನನ್ನು ಕಾಂಗ್ರೆಸ್​ಗೆ ಕರೆತರುವ ಪ್ಲಾನ್ ಡಿಕೆ ಶಿವಕುಮಾರ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಸ್ವತ್ವಃ ಡಿಕೆ ಶಿವಕುಮಾರ್​​ ಸಣ್ಣ ಸುಳಿವುಕೊಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಹೌದು…ಸ್ವರೂಪ್​ ಹಾಸನ ಜೆಡಿಎಸ್​ ಟಿಕೆಟ್​​ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಸಹ ಸ್ವರೂಪ್​ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಷ್ಟಾದರೂ ಟಿಕೆಟ್​ ಸಿಗಲಿಲ್ಲವೆಂದರೆ ಸ್ವರೂಪ್​ ಕಾಂಗ್ರೆಸ್​ನಿಂದ ಅಖಾಡಕ್ಕಿಳಿದರೂ ಅಚ್ಚರಿಪಡಬೇಕಿಲ್ಲ. ಈ ಆತಂಕ ದಳಪತಿಗಳಿಗೂ ಇದೆ. ಹೀಗಾಗಿ ಮನೆಯವರಿಗೆ ಬಿಟ್ಟು ಸ್ವರೂಪ್​ಗೆ ನೀಡುವುದು ಒಳ್ಳೆಯದು ಎನ್ನುವುದು ಕುಮಾರಸ್ವಾಮಿಯವರ ಅಭಿಪ್ರಾಯವಾಗಿದೆ. ಆದ್ರೆ, ನಮ್ಮ ಕುಟುಂಬಕ್ಕೆ ಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ. ಇದರಿಂದ ಹಾಸನ ಜೆಡಿಎಸ್ ಟಿಕೆಟ್​​ ಚೆಂಡು ದೇವೇಗೌಡ್ರ ಅಂಗಳಕ್ಕೆ ಹೋಗಿದ್ದು, ದೊಡ್ಡಗೌಡ್ರ ಒಲವು ಯಾರ ಮೇಲೆ ಎನ್ನುವುದು ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ ತಮ್ಮ ಕುಟುಂಬಕ್ಕೆ ಸವಾಲು ಹಾಕಿರುವ ಬಿಜೆಪಿಯ ಹಾಲಿ ಶಾಸಕ ಪ್ರೀತಂಗೌಡಗೆ ಪಾಠ ಕಲಿಸಲು ರೇವಣ್ಣ ಅಥವಾ ಭವಾನಿ ರೇವಣ್ಣಗೆ ಟಿಕೆಟ್​ ನೀಡುವ ಸಾಧ್ಯತೆಗಳಿವೆ ಎನ್ನಲಾದೆ. ಆದ್ರೆ, ದೇವೇಗೌಡ್ರು ಏನು ತೀರ್ಮಾನ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್