AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತನ ಮಕ್ಕಳಿಗೆ ED ನೋಟಿಸ್​ ಕೊಟ್ಟಿರೋದನ್ನ ಎಲ್ಲಾದ್ರೂ ನೋಡಿದ್ದೀರಾ: ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ರೈತನ ಮಕ್ಕಳಿಗೆ ಈ.ಡಿ ನೋಟಿಸ್ ನೀಡಿರುವುದನ್ನು ಎಲ್ಲಾದರೂ ನೋಡಿದ್ದೀರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತನ ಮಕ್ಕಳಿಗೆ ED ನೋಟಿಸ್​ ಕೊಟ್ಟಿರೋದನ್ನ ಎಲ್ಲಾದ್ರೂ ನೋಡಿದ್ದೀರಾ: ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಡಿಕೆ ಶಿವಕುಮಾರ್, ಹೆಚ್​. ಡಿ ಕುಮಾರಸ್ವಾಮಿ
ಗಂಗಾಧರ​ ಬ. ಸಾಬೋಜಿ
|

Updated on:Mar 01, 2023 | 10:42 PM

Share

ಚಿಕ್ಕಮಗಳೂರು: ರೈತನ ಮಕ್ಕಳಿಗೆ ಈ.ಡಿ ನೋಟಿಸ್ (ED notice) ನೀಡಿರುವುದನ್ನು ಎಲ್ಲಾದರೂ ನೋಡಿದ್ದೀರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮೂಡಿಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರನ್ನು ಇನ್ನೂ ದುಡ್ಡು ಹೊಡೆಯಲು ಬಿಡಬೇಕಾಗಿತ್ತಾ ಎಂದು ಕಿಡಿಕಾರಿದರು. ಒಬ್ಬ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ಟ್ರೀಟ್​ ಮಾಡಿದ್ರು. ನನ್ನ ಬಗ್ಗೆ ಡಿ.ಕೆ.ಶಿವಕುಮಾರ್​ ಲಘುವಾಗಿ ಮಾತನಾಡುವುದು ಬೇಡ. ಸಿಎಂ ಆಗಿದ್ದಾಗ ನನ್ನನ್ನು ಯಾವ ರೀತಿ ನಡೆಸಿಕೊಂಡ್ರು ಎಂದು ಗೊತ್ತಿದೆ. ನಿಮಗೆ ಏನೇನು ಫ್ರೀಡಂ ಕೊಟ್ಟಿದ್ದೆ, ನೀವು ಹೇಗೆಲ್ಲ ನಡೆಸಿಕೊಂಡಿದ್ರಿ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿದ್ನಾ ಎಂದು ಪ್ರಶ್ನಿಸಿದರು. ಹುಡುಕಿಕೊಂಡು ಬಂದು ನೀವೇ ಸಿಎಂ ಸ್ಥಾನ ಕೊಡುತ್ತೇವೆ ಎಂದಿದ್ರಿ. ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡಿಕೊಳ್ಳಿ ಎಂದು ನಾವು ಹೇಳಿಲ್ವಾ. ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಮಾತನಾಡಿದ್ದು ನೆನಪಿಲ್ವಾ? ಜೀವಂತವಾಗಿ ಯಾರೂ ಇಲ್ವಾ, ಅಂದು ಮಾತಾಡಿದ್ದನ್ನು ಹೇಳಲಿಕ್ಕೆ. ಜೆಡಿಎಸ್​ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆಯಿದೆ ಎಂದು ವಾಗ್ದಾಳಿ ಮಾಡಿದರು.

ಪಾಪ ಇವಾಗ ಕರ್ನಾಟಕದ ಜನತೆಯ ಮೇಲೆ ಮಮಕಾರ ಬಂದಿದೆ. ಜನತಾ ದಳದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಕಳೆದ ಬಾರಿ ಇದೇ ರೀತಿ ಮುಸ್ಲಿಂ ಸಮಾಜದ ಮುಂದೆ ಅಪಪ್ರಚಾರ ಮಾಡಿ 105 ಸೀಟು ಬಿಜೆಪಿಗೆ ತಂದು ಕೊಟ್ರು. ಜೆಡಿಎಸ್ ವಿರುದ್ಧ ಲಘುವಾಗಿ ಮಾತಾಡಿದ್ರೆ 74 ರಿಂದ 29ಕ್ಕೆ ಬರ್ತೀರಾ. ನನಗೂ ಗೊತ್ತಿದೆ ನಿಮ್ಮ ಶಕ್ತಿ ಏನು ಅಂತ. ನಿಮಗೆ ಶಕ್ತಿ ಇದ್ರೆ ಯಾಕೆ ಜೆಡಿಎಸ್ ನಾಯಕರುಗಳ ಮನೆಯ ಬಾಗಿಲನ್ನ ತಟ್ಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್​ಗೆ ಒಂದು ಅವಕಾಶ ಮಾಡಿಕೊಡಿ: ಪರೋಕ್ಷವಾಗಿ ಸಿಎಂ ಅಭ್ಯರ್ಥಿ ಎಂದ ಡಿಕೆ ಸುರೇಶ್​​

ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದ ಡಿಕೆ ಶಿವಕುಮಾರ್ 

ಹಾಸನ ಜಿಲ್ಲೆಯಲ್ಲಿ ಎರಡು ಸಾವಿರ ಗುತ್ತಿಗೆದಾರರು ಇದ್ದರಂತೆ. ಈಗ ಅವರೆಲ್ಲಾ ಯಾರೋ ಇಬ್ಬರ ಕೈ ಕೆಳಗೆ ಮೇಸ್ತ್ರಿಗಳಾಗಿದಾರಂತೆ. ಇದಕ್ಕೆ ಕಾರಣ ಯಾರು ಎಂದು ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್​ ವಾಗ್ದಾಳಿ ಮಾಡಿದರು. ಇದನ್ನ ಬದಲಾವಣೆ ಮಾಡೋ ಅವಕಾಶ ನಿಮ್ಮ ಕೈಲಿದೆ. ಹೋರಾಟ ಮಾಡೋನಿಗೆ ಭಯ ಇರೋದಿಲ್ಲ. ಹಾಗಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡಿ ಎಂದು ಕರೆ ನೀಡಿದರು. ನಾವು ಎಂಬತ್ತು ಜನ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಣ್ಣ ಸಿಎಂ ಆದರು. ಆದರೆ ಬಾವು ಬೆಂಬಲ ಕೊಟ್ಟು ಸರ್ಕಾರ ಬಂದರೂ ನಮ್ಮನ್ನ ಜಿಲ್ಲೆಯಲ್ಲಿ ಹತ್ತಿರ ಸೇರಿಸಲಿಲ್ಲ ಎಂದು ಗೊತ್ತಾಯ್ತು ಎಂದರು.

ಇದನ್ನೂ ಓದಿ: ಹಾಸನದಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಡಿಕೆ ಶಿವಕುಮಾರ್​, ದಳಪತಿಗಳಲ್ಲಿ ಮತ್ತಷ್ಟು ಟಿಕೆಟ್​ ಟೆನ್ಷನ್

ಹೊಳೆನರಸೀಪುರದಲ್ಲಿ ಜನರೇ ಬದಲಾವಣೆ ಬಯಸಿದಾರೆ. ಈ ಸರ್ಕಾರ ನುಡಿದಂತೆ ನಡೆಯಲಿಲ್ಲ, ಬಡವರ ಪರವಾಗಿ ಅಧಿಕಾರ ಮಾಡಲಿಲ್ಲ. ಈ ಸರ್ಕಾರ ಬರೋಕೆ ಕಾರಣ ಯಾರು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ನಾವು ಕೊಟ್ಟ ಬೆಂಬಲವನ್ನು ಉಳಿಸಿಕೊಳ್ಳಲಿಲ್ಲ. ನಾವು ಒಂಚೂರು ವಂಚನೆ ಮಾಡಲಿಲ್ಲ, ಅವರು ಸರಿಯಾಗಿ ಆಡಳಿತ ಮಾಡಲಿಲ್ಲ. ದಂಡನಾಯಕ ಆದವನು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿತ್ತು. ಆದರೆ ಅವರು ಮಾಡದೆ ಈ ಸರ್ಕಾರ ಅಧಿಕಾರಕ್ಕೆ ಬಂತು ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:36 pm, Wed, 1 March 23

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ