ಹಾಸನ: ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ (AT Ramaswamy) ಅವರು ಪ್ರಜ್ವಲ್ ರೇವಣ್ಣಗೆ (Prajwal Revanna) ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವುದು ಮೊದಲೇ ನಿಗದಿಯಗಿತ್ತು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಕ್ಕೆ ಹೆಚ್ ಡಿ ರೇವಣ್ಣ (HD Revanna) ರೊಚ್ಚಿಗೆದ್ದರು. ಪ್ರಶ್ನೆ ಕೇಳಿದ ಪತ್ರಕರ್ತನನ್ನು ಜೋರುಧ್ವನಿಯ ಮೂಲಕ ಮೆತ್ತಗಾಗಿಸಲು ಪ್ರಯತ್ನಿಸಿದ ರೇವಣ್ಣನವರು, ಅದೇ ಮಾತನ್ನು ರಾಮಸ್ವಾಮಿ ಆಗಲೇ ಹೇಳದೆ ಈಗ್ಯಾಕೆ ಹೇಳುತ್ತಿದ್ದಾರೆ ಎಂದು ಕೋಪದಲ್ಲಿ ಕೇಳಿದರು. ಅರಕಲಗೂಡು ಮತ್ತು ಅರಸೀಕೆರೆ ಶಾಸಕರಿಗೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಬೇಕಿದೆ, ಹಾಗಾಗೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಭುಸುಗುಡುತ್ತಾ ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ