AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡದಿ ಕಾರ್ಯಕ್ರಮದಲ್ಲಿ ಡಾ ಸಿಎನ್ ಅಶ್ವಥ್ ನಾರಾಯಣ್ ಹಾಗೂ ಡಿಕೆ ಸುರೇಶ್ ಅಕ್ಕಪಕ್ಕ ಕೂತು ಹರಟಿದ್ದೇ ಹರಟಿದ್ದು!

ಬಿಡದಿ ಕಾರ್ಯಕ್ರಮದಲ್ಲಿ ಡಾ ಸಿಎನ್ ಅಶ್ವಥ್ ನಾರಾಯಣ್ ಹಾಗೂ ಡಿಕೆ ಸುರೇಶ್ ಅಕ್ಕಪಕ್ಕ ಕೂತು ಹರಟಿದ್ದೇ ಹರಟಿದ್ದು!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 02, 2023 | 1:37 PM

Share

ಹಿಂದೊಮ್ಮೆ ಅವರು ರಾಮನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಒಬ್ಬರ ಮೇಲೊಬ್ಬರು ಏರಿಹೋಗಿದ್ದು ಸಮಸ್ತ ಕನ್ನಡಿಗರು ನೋಡಿದ್ದಾರೆ

ರಾಮನಗರ: ಬಿಡದಿಯಲ್ಲಿ ಇಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಮಾಡಿದ್ದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಸಮಾರಂಭ ನಡೆಯುತ್ತಿದ್ದಾಗ ನಡೆದ ಹಲವು ಕುತೂಹಲಕಾರಿ ಸಂಗತಿಗಳು ನಡೆದವು. ಅವಗಳಲ್ಲಿ ಇಲ್ಲಿ ಕಾಣುತ್ತಿರುವ ದೃಶ್ಯವೂ ಒಂದು. ರಾಮನಗರ ಉಸ್ತುವಾರಿ ಸಚಿವ ಡಾ ಸಿಎನ್ ಆಶ್ವಥ್ ನಾರಾಯಣ (Dr CN Ashwath Narayan) ಮತ್ತು ಅಲ್ಲಿನ ಸಂಸದ ಡಿಕೆ ಸುರೇಶ್ (DK Suresh) ನಡುವೆ ಹಾವು-ಮುಂಗುಸಿ ಸಂಬಂಧ. ಹಿಂದೊಮ್ಮೆ ಅವರು ರಾಮನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಒಬ್ಬರ ಮೇಲೊಬ್ಬರು ಏರಿಹೋಗಿದ್ದು ಸಮಸ್ತ ಕನ್ನಡಿಗರು ನೋಡಿದ್ದಾರೆ. ಆದರೆ, ಇವತ್ತು ನೋಡಿ, ಅಕ್ಕಪಕ್ಕ ಕೂತು ಹಳೇ ದೋಸ್ತಿಗಳ ಹಾಗೆ ಹರಟುತ್ತಿದ್ದಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.