
ಬೆಂಗಳೂರು, ಜೂನ್.08: ಬೆಂಗಳೂರಿನಲ್ಲಿ ಸಿಗರೇಟ್ (Cigarette) ವಿಚಾರಕ್ಕೆ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳನ್ನು ಕಾಡುಗೋಡಿ ಠಾಣೆಯ ಪೊಲೀಸರು (Kadugodi Police Station) ಬಂಧಿಸಿದ್ದಾರೆ. ವಿಶಾಲ್, ಆಕಾಶ್, ಸಂತೋಷ್, ಸುರೆಂದರ್ ಸೇರಿ 7 ಜನರನ್ನು ಅರೆಸ್ಟ್ ಮಾಡಲಾಗಿದೆ.
ಆರೋಪಿಗಳು ಡೀಗರ್ ಅಲಿಯಾಸ್ ಧನಂಜಯ್ ಎಂಬ ಯುವಕನ ಮೇಲೆ ದೊಣ್ಣೆ, ಕಲ್ಲು, ಬೆಲ್ಟ್, ಕ್ರೇಟ್ನಿಂದ ಹಲ್ಲೆ ಮಾಡಿದ್ದರು. ಅರೆಬೆತ್ತಲು ಮಾಡಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಹೋಟೆಲ್ ಮ್ಯಾನೇಜರ್ ದೂರಿನ ಮೇರೆಗೆ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳು ಮತ್ತು ಹಲ್ಲೆಗೊಳಗಾದ ಧನಂಜಯ್ ಎಲ್ಲರೂ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದರು. ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
2 ಸಾವಿರ ಸಾಲದ ವಿಚಾರಕ್ಕೆ ಸ್ನೇಹತನನ್ನ ಹತ್ಯೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಘಟನೆ ನಡೆದಿದ್ದು, ರಮೇಶ್ ಹಾಗೂ ಮಲ್ಲ ಎಂಬುವವರ ಸ್ನೇಹಿತ ಮಾದಪ್ಪನನ್ನ ಹೊಡೆದು ಕೊಂದು ಅಪಘಾತದ ಕಥೆ ಕಟ್ಟಿದ್ದಾರೆ. ಎಣ್ಣೆ ಏಟಲ್ಲಿ 2 ಸಾವಿರ ಹಣ ವಿಚಾರ ಪ್ರಸ್ತಾಪವಾಗಿದ್ದು, ರಮೇಶ ಕೋಪದಲ್ಲಿ ಮಾದಪ್ಪನ ಕೆನ್ನೆಗೆ ಜೋರಾಗಿ ಹೊಡೆದಿದ್ದ. ಒಂದೇ ಏಟಿಗೆ ಮಾದಪ್ಪ ಮೃತಪಟ್ಟಿದ್ದು, ಆಸ್ಪತ್ರೆಗೆ ಕೊಂಡೊಯ್ದ ಬಳಿಕ ಸತ್ಯಾಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮೈಸೂರು: ವಿಷಾನಿಲ ಸೋರಿಕೆಗೆ ಗುಜರಿ ಅಂಗಡಿ ಮಾಲೀಕನ ಯಡವಟ್ಟು ಕಾರಣ
ಮನೆ ಮೇಲಿನ ಗಿಡ ಕೀಳಲು ಹೋಗಿ ವ್ಯಕ್ತಿ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ, ಹುಬ್ಬಳ್ಳಿಯ ಗಿರಣಿ ಚಾಳ ಬಳಿ ಇರೋ ಪೋಸ್ಟ್ ಆಫೀಸ್ ಕ್ವಾರ್ಟರ್ಸ್ ನಲ್ಲಿ ನಡೆದಿದೆ. ಪರಶುರಾಮ ನಿಂಗಪ್ಪ ಉಪ್ಪಾರ ಮೃತ ದುರ್ದೈವಿ ಆಗಿದ್ದು, ಈತನ ಕೆಲಸ ಕೇವಲ ಪಂಪ್ ಆಪರೇಟರ್ ಅಷ್ಟೇ. ಹೀಗಿದ್ರೂ ಮನೆ ಮೇಲಿನ ಗಿಡ ಕೀಳುವಂತೆ ಹೇಳಿದ್ರಿಂದ ದುರಂತ ಸಂಭವಿಸಿದೆ.
ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿರುವ ಆರೋಪ ಕೇಳಿ ಬಂದಿದ್ದು, ಯುವಕನಿಗೆ ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಐದಾರು ಜನ ಯುವಕರು ಯುವಕನ ಮೇಲೆ ಹಲ್ಲೆ ನಡೆಸಿದ್ದು, ಪರಿ ಪರಿಯಾಗಿ ಬೇಡಿಕೊಂಡರು ಬಿಡದೇ ಥಳಿಸಲಾಗಿದೆ. ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:28 am, Sat, 8 June 24