ಮೈಸೂರು: ವಿಷಾನಿಲ ಸೋರಿಕೆ‌ಗೆ ಗುಜರಿ ಅಂಗಡಿ ಮಾಲೀಕನ ಯಡವಟ್ಟು ಕಾರಣ

ಮೈಸೂರಿನ ಹಳೇ ಕೆಸರೆ ಗ್ರಾಮದ ವರುಣ ನಾಲೆ ಸಮೀಪದಲ್ಲಿರುವ ಗುಜರಿ ಅಂಗಡಿಯಲ್ಲಿ ಶುಕ್ರವಾರ ವಿಷಕಾರಿ ಅನಿಲ ಸೋರಿಯಾದ ಪರಿಣಾಮ 50 ಜನ ಅಸ್ವಸ್ಥಗೊಂಡಿದ್ದರು. ಪ್ರಕರಣದ ತನಿಖೆಯನ್ನು ನರಸಿಂಹರಾಜ ಠಾಣೆ ಪೊಲೀಸರು ನಡೆಸಿದ್ದು, ಘಟನೆ ಹಿಂದಿನ ಕಾರಣವನ್ನು ಬಯಲಿಗೆ ಎಳೆದಿದ್ದಾರೆ.

ಮೈಸೂರು: ವಿಷಾನಿಲ ಸೋರಿಕೆ‌ಗೆ ಗುಜರಿ ಅಂಗಡಿ ಮಾಲೀಕನ ಯಡವಟ್ಟು ಕಾರಣ
ಗುಜುರಿ ಗೋಡೌನ್​
Follow us
| Updated By: ವಿವೇಕ ಬಿರಾದಾರ

Updated on: Jun 08, 2024 | 10:10 AM

ಮೈಸೂರು, ಜೂನ್​ 08: ವಿಷಕಾರಿ ಅನಿಲ (Poisonous gas) ಸೋರಿಕೆ‌ಯಾಗಿ 50 ಜನ ಅಸ್ವಸ್ಥಗೊಂಡಿದ್ದ ಘಟನೆ ಸಂಬಂಧಿಸಿದಂತೆ ಗುಜುರಿ ಅಂಗಡಿ ಮಾಲೀಕ ಮತ್ತು ಕಾರ್ಮಿಕನ ಯಡವಟ್ಟಿನಿಂದ ಅವಘಡ ಸಂಭವಿಸಿದೆ ಎಂದು ನರಸಿಂಹರಾಜ ಠಾಣೆ ಪೊಲೀಸರ (Police) ತನಿಖೆಯಲ್ಲಿ ಬಯಲಾಗಿದೆ.

ಮೈಸೂರಿನ ಹಳೇ ಕೆಸರೆ ಗ್ರಾಮದ ವರುಣ ನಾಲೆ ಸಮೀಪದಲ್ಲಿರುವ ಗುಜರಿ ಅಂಗಡಿ ಮಾಲೀಕ ಮೊಹಮ್ಮದ್ ಮೂರು ತಿಂಗಳ ಹಿಂದೆ ದಾವಣಗೆರೆಯಿಂದ ಗುಜರಿ ಸಾಮಗ್ರಿಗಳನ್ನು ತಂದಿದ್ದನು. ಈ ಗುಜುರಿ ಸಾಮಾಗ್ರಿಗಳಲ್ಲಿ ಖಾಲಿ ಸಿಲಿಂಡರ್​ಗಳು ಕೂಡ ಇದ್ದವು. ಈ ಖಾಲಿ ಸಿಲಿಂಡರ್​ನಲ್ಲಿ ಕ್ಲೋರಿನ್ ತುಂಬಿದ ಸಿಲಿಂಡರ್‌ ಕೂಡ ಇತ್ತು. ಶುಕ್ರವಾರ (ಜೂ.07) ರಾತ್ರಿ ಸಿಲಿಂಡರ್​ಗಳನ್ನು ಕಟ್​ ಮಾಡುವಾಗ, ಕಾರ್ಮಿಕ ಕ್ಲೋರಿನ್ ತುಂಬಿದ್ದ ಸಿಲಿಂಡರ್ ಅನ್ನು ಕೂಡ ತುಂಡರಿಸಿದ್ದಾನೆ. ಇದರಿಂದ ಕಾರ್ಮಿಕ ಪ್ರಜ್ಞೆ ತಪ್ಪಿದ್ದಾನೆ.

ಕೆಲವೇ ಹೊತ್ತಲ್ಲಿ ಗುಜುರಿ ಅಂಗಡಿ ಸುತ್ತಲಿನ ಪ್ರದೇಶಕ್ಕೆ ವಿಷಾನಿಲ ಹರಡಿದೆ. ಈ ವಿಷಾನಿಲದಿಂದ ಸುತ್ತಮುತ್ತಲಿನ ಜನರು ಅಸ್ವಸ್ಥಗೊಂಡಿದ್ದಾರೆ. ಸದ್ಯ ಮಾಲೀಕ ಮೊಹಮ್ಮದ್ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಐವರು ಸಾವು

ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್​ನಿ‌ಂದಾಗಿ ರಸ್ತೆ ಮಧ್ಯದಲ್ಲೇ ಕಾರು ಹೊತ್ತಿ ಉರಿದ ಘಟನೆ ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ನಡೆದಿದೆ. ಸ್ವಿಫ್ಟ್ ಡಿಸೈರ್ ಕಾರು ಚಿಕ್ಕಮಗಳೂರಿಂದ ಹುಬ್ಬಳ್ಳಿಗೆ ಹೋಗುತ್ತಿತ್ತು. ದಾರಿ ಮಧ್ಯೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಕೂಡಲೆ ಕಾರಿನಿಂದ ಕೆಳಗೆ ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಜಾಸ್ತಿಯಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಕಾರು ಸುಟ್ಟು ಬೂದಿಯಾಗಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಕಸ್ಮಿಕವಾಗಿ ತಗುಲಿದ ಬೆಂಕಿ, ಅಂಗಡಿಗಳು ಸುಟ್ಟು ಭಸ್ಮ

ಹಾವೇರಿ: ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಎಲೆಕ್ಟ್ರಿಕಲ್ ಅಂಗಡಿ, ಬೇಕರಿ, ಫುಟ್​​ವೇರ್ ಸೇರಿದಂತೆ 5ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹಿರೇಕೆರೂರು ತಾಲೂಕಿನ ಚಿಕ್ಕೇರೂರಿನಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿದ್ದಾರೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಭೇಟಿ, ಪರಿಶೀಲನೆ ನಡೆಸಿದರು. ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ