ದೇಹ ಬಲಾಢ್ಯಗಾಗಿ ಪ್ರೋಟೀನ್​​ ಪೌಡರ್​ ಬಳಸುವ ಮುನ್ನ ಎಚ್ಚರ! ICMR ವರದಿಯಲ್ಲಿದೆ ಅಚ್ಚರಿ ವಿಷಯ

ಪ್ರೋಟೀನ್ ಪೌಡರ್ ಒಂದಿಷ್ಟು ಮಂದಿಗೆ ದೇಹದ ಬಲ ವರ್ಧನೆಗಾಗಿ ಸೇವಿಸುತ್ತಿದ್ದ ಆಹಾರ. ಸದೃಢ ದೇಹ ಪಡೆಯಲು ನಾನಾ ಕಸರತ್ತುಗಳ ಜೊತೆ ಜೊತೆಗೆ ಆ ಫ್ರೋಟೀನ್ ಸವಿದು ಖುಷಿ ಪಡುತ್ತಿದ್ದಾರೆ. ಆದರೆ, ಈಗ ಇಷ್ಟ ಪಟ್ಟು ತಿನ್ನುತ್ತಿದ್ದ ಪ್ರೋಟೀನ್ ಜೀವಕ್ಕೆ ಕುತ್ತು ತರುತ್ತಿರುವ ಬಗ್ಗೆ ICMR ವರದಿ ನೀಡಿದೆ.

ದೇಹ ಬಲಾಢ್ಯಗಾಗಿ ಪ್ರೋಟೀನ್​​ ಪೌಡರ್​ ಬಳಸುವ ಮುನ್ನ ಎಚ್ಚರ! ICMR ವರದಿಯಲ್ಲಿದೆ ಅಚ್ಚರಿ ವಿಷಯ
ಪ್ರೋಟೀನ್​ ಪೌಡರ್​​
Follow us
| Updated By: ವಿವೇಕ ಬಿರಾದಾರ

Updated on:Jun 08, 2024 | 8:45 AM

ಬೆಂಗಳೂರು, ಜೂನ್​ 08: ದಿನನಿತ್ಯ ಆಹಾರ ಪದ್ಧತಿ ಬದಲಾದಂತೆ ದೇಹ ಸದೃಢಗೊಳಿಸಲು ಬಳಸುವ ಆಹಾರಗಳು ಕೂಡ ಬದಲಾಗಿವೆ. ಅದರಲ್ಲೂ ದೇಹ ಬಲಿಷ್ಠ ಆಗಬೇಕು ಅಂತ ಪ್ರೋಟೀನ್ ಪೌಡರ್ (Protein powder) ಬಳಸುವವರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲೂ ಜಿಮ್, ಸ್ಪೋರ್ಟ್​ಗಳಲ್ಲಿ ತೊಡಗಿಕೊಂಡಿರುವ ಯುವಕ ಯುವತಿಯರಂತೂ ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವನೆ ಮಾಡುತ್ತಿದ್ದು, ಜೀವಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಹೇಳಿದೆ.

13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳನ್ನು ವರದಿ ನೀಡಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿ ಹೆಚ್ಚು ಚೀಪ್ ಪ್ರೋಟಿನ್ ಪೌಡರ್‌‌ಗಳು ಮಾರಟವಾಗುತ್ತಿದ್ದು ಅದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಹೆಚ್ಚಾಗಿ ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ.

ಭಾರತದಲ್ಲಿ ನೆಲೆಯೂರಿರುವ ಅನೇಕ ಚೀಪ್ ಬ್ರಾಂಡ್ ಪ್ರೋಟಿನ್ ಪೌಡರ್ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಅನೇಕ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಹೆಚ್ಚಾಗಿ ಸಕ್ಕರೆ ಅಂಶಗಳು ಪ್ರೋಟಿನ್ ಪೌಡರ್​ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು ಇದರಿಂದ ಡಯಾಬಿಟಿಸ್ ನಂತಹ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ದೇಹಕ್ಕೆ ಕ್ಯಾಲೋರಿ ಒದಗಿಸುವ ಹಿನ್ನಲೆ ಅದರಲ್ಲಿ ಬಳಸುವ ಒಂದಿಷ್ಟು ಕೆಮಿಕಲ್ ಅಂಶಗಳು ಕಿಡ್ನಿ, ಲಿವರ್ ಮೇಲೆ ಸೈಡ್ ಎಫೆಕ್ಟ್ ಬೀರುವ ಸಾಧ್ಯತೆಗಳಿದ್ದು, ಅತಿಯಾಗಿ ಪ್ರೋಟಿನ್ ಪೌಡರ್​ಗಳನ್ನು ಬಳಸದೆ ದೇಹ ವೃದ್ಧಿಗೆ ನ್ಯಾಚುರಲ್ ಆಹಾರ ಬಳಸುವಂತೆ ಹಿರಿಯ ಮದುಮೇಹ ತಜ್ಞ ಡಾ.‌ಅನೀಲ್‌ಕುಮಾರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಜಿಮ್ ಮಾಡ್ತಾರೆ ಅನ್ನೋದೇ ಸುಳ್ಳು; ಫಿಟ್ನೆಸ್​ಗೆ ನಟ ಮಾಡೋದೇನು?

ಜಿಮ್​ಗಳಿಗೆ ಬರುವವರು ಆನ್​ಲೈನ್​ಗಳಲ್ಲಿ ಪ್ರೋಟಿನ್​ ಪ್ರೌಡರ್​​ಗಳನ್ನು ಖರೀದಿಸುತ್ತಾರೆ. ಲೈಸೆನ್ಸ್ ಇಲ್ಲದಿರುವ ಪ್ರೋಟೀನ್ ಕಂಪನಿಗಳಿಂದ ಯಾವುದೇ ಕಾರಣಕ್ಕೂ ಪ್ರೋಟೀನ್ ಪೌಡಾರ್​ ಅನ್ನು ಬಳಸಬಾರದು ಎಂದು ಜಿಮ್ ಟ್ರೈನರ್ ನಿತೇಶ್ ಹೇಳಿದ್ದಾರೆ.

ಒಟ್ಟಿನಲ್ಲಿ ದೇಹ ಬಲಾಢ್ಯತೆಗಾಗಿ ಕಳಪೆಮಟ್ಟದ ಪ್ರೋಟೀನ್​ಗಳನ್ನು ತೆಗೆದುಕೊಳ್ಳುವ ಮುನ್ನ ಯುವಜನತೆ ಎಚ್ಚೆತ್ತುಕೊಂಡು ಆರೋಗ್ಯದ ಮೇಲೆ ನಿಗಾ ವಹಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Sat, 8 June 24

Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ