ಪಾನ್ ಬೀಡಾ ಬೆಲೆ‌‌ ಹೆಚ್ಚಳ, ಜಗಿಯುವುದು ಕಷ್ಟ ಎಂದ ಪಾನ್​ ಪ್ರಿಯ

ಊಟ ಆದ ಮೇಲೆ ಒಂದ್ ಪಾನ್ ತಿಂದರೆ ಆಹಾರ ಸರಿಯಾಗಿ ಜೀರ್ಣ ಆಗುತ್ತೆ ಅಂತ ಪಾನ್​ ಪ್ರೀಯರ ನಂಬಿಕೆ. ಹೀಗಾಗಿ ಅನೇಕರು ಪಾನ್​ ತಿನ್ನುತ್ತಾರೆ. ಮನೆಯಲ್ಲಿ ಶುಭ ಸಮಾರಂಭ ಇದ್ದಾಗ ಪಾನ್​ ಬೀಡಾ ಬೇಕೆ ಬೇಕು. ಹಬ್ಬದ ಊಟವಾದ ಮೇಲೆ ಪಾನ್​ ತಿಂದಾಗ ಮಾತ್ರ ಸಮಾಧಾನ ಆಗುವವರು ಇದ್ದಾರೆ. ಆದರೆ ಇದೀಗ ಪಾನ್​ಗಳ‌ ಬೆಲೆ‌ ಕಹಿಯ ಅನುಭವ ಕೊಡುತ್ತಿದೆ.‌

ಪಾನ್ ಬೀಡಾ ಬೆಲೆ‌‌ ಹೆಚ್ಚಳ, ಜಗಿಯುವುದು ಕಷ್ಟ ಎಂದ ಪಾನ್​ ಪ್ರಿಯ
ತಯಾರಾಗುತ್ತಿರುವ ಪಾನ್​
Follow us
| Updated By: ವಿವೇಕ ಬಿರಾದಾರ

Updated on: Jun 08, 2024 | 8:05 AM

ಬೆಂಗಳೂರು, ಜೂನ್​ 08: ಪಾನ್​ಗಳಿಗೆ (Pan) ಹೆಚ್ಚಾಗಿ ವೀಳ್ಯದೆಲೆ (Betel), ಕೊಲ್ಕತ್ತಾ, ಮದ್ರಾಸ್, ಮೈಸೂರು ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಎಲೆಗಳ‌ ಬೆಲೆ‌‌ ಒಂದು ಕಟ್​ಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಪಾನ್​ಗಳ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಸ್ವೀಟ್ ಪಾನ್​ಗಳು 5 ರಿಂದ 10 ರೂಪಾಯಿ ಸಿಗುತ್ತಿದ್ದವು.‌ ಆದರೆ ಇದೀಗ ಪಾನ್​ ಬೀಡಾಗಳ ಪ್ರಾರಂಭಿಕ ಬೆಲೆ 20 ರೂ.ಗಳಿಂದ 60 ರೂ.ವರೆಗೂ ಏರಿಕೆಯಾಗಿವೆ. ಚಾಕೊಲೇಟ್ ಪಾನ್ (Chocolate pan) ಈ ಹಿಂದೆ 40 ರೂ. ಇತ್ತು, ಆದರೆ ‌ಇದೀಗ 50 ರೂಪಾಯಿಯಾಗಿದೆ.

ಮಲೈಯೆ ಬೀಡಾ 40 ರೂ. ಇತ್ತು. ಇದೀಗ 45 ರೂ. ಆಗಿದೆ. ಕೊಲ್ಕತ್ತ ಸಾದಾ ಪಾನ್​ 20 ರಿಂದ 30, ಆರೆಂಜ್ ಡ್ರೈ ಫ್ರೂಟ್ ಬೀಡಾ 25 ರಿಂದ 20, ಚಾಕೊಲೇಟ್ ಪಾನ್ 25 ರಿಂದ 15, ವೆನಿಲಾ ಪಾನ್ 25 ರಿಂದ 30, ಚಾಕೊಲೇಟ್ ಡೇಟ್ಸ್ 25 ರಿಂದ 40, ವೆನಿಲಾ ಡೇಟ್ಸ್ 20 ರೂ. ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಎಂದು ವ್ಯಾಪಾರಸ್ಥ ಸಂದೀಪ್ ಪಾಂಡೆ ಹೇಳಿದರು.

ಈ ಹಿಂದೆ ಎಲೆ ಅಡಿಕೆ ತಿನ್ನುತ್ತಿದ್ವಿ, ಬಳಿಕ ಪಾನ್ ಪೀಡಾಗಳನ್ನು ತಿನ್ನಲು ಶರು ಮಾಡಿದ್ವಿ. ‌ಈ ಹಿಂದೆ ಕಡಿಮೆ‌ ಬೆಲೆ ಪಾನ್​ಗಳು ಸಿಗುತಿದ್ದವು.‌ ಆದರೆ, ಈಗ ಪಾನ್​ಗಳ ಬೆಲೆ‌ ಏರಿಕೆಯಾಗಿದೆ. ಒಂದೊಂದು ಏರಿಯಾದಲ್ಲಿ‌ ಒಂದೊಂದು ಬೆಲೆ‌ ಇದೆ. ಸಿಕ್ಕಾಪಟ್ಟೆ ಜಾಸ್ತಿಮಾಡಿದ್ದಾರೆ. ಆದರೂ ತಿನ್ನುತ್ತೇವೆ. ಬಿಡಲು ಆಗುತ್ತಿಲ್ಲ ಎಂದು ಗ್ರಾಹಕ ಗುರುರಾಜ್ ಹೇಳಿದರು.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ‌ ಎಲ್ಲ ವಸ್ತುಗಳ‌ ಬೆಲೆ ಏರಿಕೆಯಾಗುತ್ತಿದ್ದು, ಸದ್ಯ ಪಾನ್​ಗಳ‌ ಬೆಲೆ ಏರಿಕೆಯಾಗಿರುವುದು ಪಾನ್ ಪ್ರಿಯರಿಗೆ ಶಾಕ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ