AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಐಟಿ ವಿಚಾರಣೆ ವೇಳೆ ಕಿಡ್ನ್ಯಾಪ್ ಆರೋಪ ಅಲ್ಲಗೆಳೆದ ಭವಾನಿ ರೇವಣ್ಣ‌

ಮೈಸೂರು ಜಿಲ್ಲೆ ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಆರೋಪ ಕೇಸ್​ಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳಿಂದ ಭವಾನಿ ರೇವಣ್ಣ ವಿಚಾರಣೆ ನಡೆದಿದ್ದು ವಿಚಾರಣೆ ವೇಳೆ ಭವಾನಿ ರೇವಣ್ಣ‌ ಕಿಡ್ನ್ಯಾಪ್ ಆರೋಪ ಅಲ್ಲಗಳೆದಿದ್ದಾರೆ. ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರು. ನಾನು ಕಿಡ್ನ್ಯಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದಿದ್ದಾರೆ.

ಎಸ್ಐಟಿ ವಿಚಾರಣೆ ವೇಳೆ ಕಿಡ್ನ್ಯಾಪ್ ಆರೋಪ ಅಲ್ಲಗೆಳೆದ ಭವಾನಿ ರೇವಣ್ಣ‌
ಭವಾನಿ ರೇವಣ್ಣ
ಆಯೇಷಾ ಬಾನು
|

Updated on:Jun 08, 2024 | 9:20 AM

Share

ಬೆಂಗಳೂರು, ಜೂನ್.08: ಮೈಸೂರಿನ ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಭವಾನಿ ರೇವಣ್ಣ ಖುದ್ದಾಗಿ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಭವಾನಿ ರೇವಣ್ಣ ಹಾಜರಾದಾಗ ಎಸ್‌ಐಟಿ ಪೊಲೀಸರು ಬಂಧಿಸಬಾರದು ಎಂದು ಕೋರ್ಟ್ ಹೇಳಿದೆ. ಈ ಹಿನ್ನೆಲೆ ನಿನ್ನೆ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿದ್ದು, ನಾನು ಕಿಡ್ನ್ಯಾಪ್ (Kidnap) ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಿಡ್ನಾಪ್ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರು. ನಾನು ಕಿಡ್ನಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಭವಾನಿ ರೇವಣ್ಣ ಅವರು ಎಸ್​ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳ ನಡುವಿನ ಆಡಿಯೋ ಸಂಭಾಷಣೆ ಇಟ್ಟು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸತೀಶ್ ಬಾಬಣ್ಣ ಹಾಗೂ ರಾಜಗೋಪಾಲ್ ನಡುವಿನ ಆಡಿಯೋ ಸಂಭಾಷಣೆ ಇಟ್ಟು ವಿಚಾರಣೆ ಮಾಡಿದ್ದು ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಭವಾನಿ ರೇವಣ್ಣ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು ಇಂದು ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಪಹರಣ ಪ್ರಕರಣ: ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಕೊನೆಗೂ ಅರೆಸ್ಟ್

ಮೈಸೂರಿನ ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಭವಾನಿ ರೇವಣ್ಣ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಜೂನ್ 14 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಭವಾನಿ ರೇವಣ್ಣ ಖುದ್ದಾಗಿ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಭವಾನಿ ರೇವಣ್ಣ ಹಾಜರಾದಾಗ ಎಸ್‌ಐಟಿ ಪೊಲೀಸರು ಬಂಧಿಸಬಾರದು. ಎಸ್‌ಐಟಿ ಸಂಜೆ 5 ಗಂಟೆಯವರೆಗೆ ತನಿಖೆಗೆ ಒಳಪಡಿಸಬಹುದು. ಇದು ಮಧ್ಯಂತರ ಆದೇಶವಾಗಿದ್ದು, ಕೋರ್ಟ್ ಯಾವುದೇ ಪಾರಿತೋಷಕ ನೀಡುತ್ತಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ಸಂಭ್ರಮಾಚರಣೆ ಮಾಡುವಂತಿಲ್ಲ. ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:19 am, Sat, 8 June 24