ಬೆಂಗಳೂರು: ವಿಮಾನ ಪ್ರಯಾಣ ಮಾಡಬೇಕೆಂದು ವಿಮಾನ ನಿಲ್ದಾಣಕ್ಕೆ (Bangalore Airport) ಹೊರಟಾಗ ಅಲ್ಲಿಗೆ ತೆರಳುವ ಕ್ಯಾಬ್ಗೂ (Cab Price) ವಿಮಾನದಷ್ಟೇ ಟಿಕೆಟ್ ದರ ನೀಡಬೇಕಾಗಿ ಬಂದರೋ? ಬೆಂಗಳೂರಿನ ಸಾರ್ವಜನಿಕರಿಗೆ ಈಗ ಇಂಥದ್ದೊಂದು ಸಮಸ್ಯೆ ಸೃಷ್ಟಿಯಾಗಿದೆ. ಈ ವಿಚಾರವಾಗಿ ಹಲವು ಮಂದಿ ಟ್ವೀಟ್ ಮಾಡುವ ಮೂಲಕ ಅಳಲು ತೋಡಿಕೊಂಡಿದ್ದಾರೆ.
@Badass_Superdad ಎಂಬ ಟ್ವಿಟರ್ ಹ್ಯಾಂಡಲ್ನಿಂದ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಇರುವ ಕ್ಯಾಬ್ ದರ ಹಾಗೂ ವಿಮಾನಯಾನ ದರದ ವಿವರದ ಸ್ಕ್ರೀನ್ಶಾಟ್ ಟ್ವೀಟ್ ಮಾಡಲಾಗಿದೆ. 52 ಕಿಲೋಮೀಟರ್ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರೀಮಿಯರ್, ಎಕ್ಸ್ಎಲ್ ಹಾಗೂ ರೆಂಟಲ್ ಮಾದರಿಯ ಕ್ಯಾಬ್ಗಳ ದರ 2584 ರೂ.ನಿಂದ 4051 ರೂ.ವರೆಗೆ ದರ ಇದೆ. ಸರಿಸುಮಾರು ವಿಮಾನ ಟಿಕೆಟ್‌ಗೆ ನೀಡಿದಷ್ಟೇ ದರ ಕ್ಯಾಬ್ಗೂ ಇದೆ ಎಂದು ಉಲ್ಲೇಖಿಸಲಾಗಿದೆ.
Uber fare to Bangalore Airport from E-City
Cost of cab fare is dangerously close to what I paid for the flight ticket ? pic.twitter.com/FUw9jygeMh
— Badass Dad ? ? (@Badass_Superdad) May 23, 2023
ಕ್ಯಾಬ್ ದರವು ನಾನು ವಿಮಾನ ಟಿಕೆಟ್‌ಗೆ ಪಾವತಿಸಿದ ದರದ ಸನಿಹದಲ್ಲಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
These are Uber Rental charges. So, you can actually travel 80 km on that.
Also, Bangalore Airport from E-City is 50+ km. This is reasonable when considering you can travel with 4 or 6 (uberXL) persons.— Vivek Nair ?? 卐 ?️ (@viveknairp) May 23, 2023
ಅನೇಕ ನೆಟಿಜನ್ಗಳು ಮೇಲಿನ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ನಗರದ ವಿವಿಧ ಕಡೆಗಳಿಂದ ವಾಯು ವಜ್ರ ಹಾಗೂ ಬಿಎಂಟಿಸಿಯ ಇತರ ಬಸ್ ಸೇವೆಗಳು ಲಭ್ಯವಿದ್ದು ಅದನ್ನು ಉಪಯೋಗಿಸಿಕೊಳ್ಳಿ ಎಂದು ಕೆಲವರು ಸಲಹೆ ನೀಡಿದ್ದಾರೆ. ವಾಯು ವಜ್ರ ಬಸ್ನಲ್ಲಿ ಕ್ಯಾಬ್ ದರದ ಆರನೇ ಒಂದರರಷ್ಟು ಮಾತ್ರವೇ ದರ ಇದೆ ಎಂದೂ ಉಲ್ಲೇಖಿಸಿದ್ದಾರೆ.
ವಿಮಾನ ನಿಲ್ದಾಣವು ಎಲೆಕ್ಟ್ರಾನಿಕ್ ಸಿಟಿಯಿಂದ 50 ಕಿ.ಮೀ ಗಿಂತ ಹೆಚ್ಚು ದೂರದಲ್ಲಿರುವುದರಿಂದ ಇದು ಸಮಂಜಸವಾದ ಬೆಲೆ ಎಂದೂ ಕೆಲವರು ಪ್ರತಿಪಾದಿಸಿದ್ದಾರೆ.
Job chhod k can hi chala le kya vaha? ?
— DipTea☕️?? (@DipTea__) May 23, 2023
ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಮುಂದುವರಿಯುವುದಕ್ಕಿಂತ ಕ್ಯಾಬ್ ಡ್ರೈವರ್ ಆಗುವುದು ಉತ್ತಮ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Fri, 26 May 23