Cubbon Park: ಬೆಂಗಳೂರಿನ ಹಸಿರಿನ ಅರಸಿ ಕಬ್ಬನ್ ಪಾರ್ಕ್​ನಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ

|

Updated on: May 28, 2023 | 7:07 AM

ಕಬ್ಬನ್ ಪಾರ್ಕ್ ಇತ್ತೀಚೆಗೆ ತನ್ನ ಅಂದ ಕಳೆದುಕೊಳ್ಳುತ್ತಿದೆ. ಬೆಳಗ್ಗೆ ಜಾಗಿಂಗ್, ಸಂಜೆ ವಾಕಿಂಗ್, ಮಧ್ಯಾಹ್ನ ವಾಯುವಿಹಾರಿಗಳಿಗೆ ಫೇವರಿಟ್ ತಾಣವಾಗಿದ್ದ ಹಾಗೂ ಬೆಂಗಳೂರಿನ ಅಂದಕ್ಕೆ ಬೊಟ್ಟಿಟ್ಟಂತೆ ಇದ್ದ ಕಬ್ಬನ್​​ಪಾರ್ಕ್​ನಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ತಲೆದೋರಿದೆ.

Cubbon Park: ಬೆಂಗಳೂರಿನ ಹಸಿರಿನ ಅರಸಿ ಕಬ್ಬನ್ ಪಾರ್ಕ್​ನಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ
ಕಬ್ಬನ್ ಪಾರ್ಕ್​ನಲ್ಲಿ ದುರ್ನಾತದೊಂದಿಗೆ ಹರಿಯುತ್ತಿದೆ ಚರಂಡಿ ನೀರು
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ನಾನಾ ಅನಾಹುತಗಳು ಸೃಷ್ಟಿಯಾಗಿವೆ(Bengaluru Rain). ಮಳೆ ನಿಂತರೂ ಮಳೆ ಪರಿಣಾಮ ಕಡಿಮೆಯಾಗಿಲ್ಲ ಎಂಬಂತ ಸ್ಥಿತಿ ನಗರದಲ್ಲಿದೆ. ಇತ್ತೀಚೆಗೆಷ್ಟೆ ಮಳೆಗೆ ಕಬ್ಬನ್ ಪಾರ್ಕ್​ನಲ್ಲಿ(Cubbon Park) ಹಳೆಯ ಮರಗಳು ಧರೆಗುರುಳಿದ್ದವು. ಆದ್ರೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಜನರಿಗೆ ಹಾಟ್ ಸ್ಪಾಟ್, ನೆರಳರಸಿ, ಹಸಿರನ್ನ ಅರಸಿ, ಸಿಟಿ ಮಂದಿ ರಿಲ್ಯಾಕ್ಸ್ ಮಾಡೋ ವನ ಆಗಿರುವ ಕಬ್ಬನ್ ಪಾರ್ಕ್ ಇತ್ತೀಚೆಗೆ ತನ್ನ ಅಂದ ಕಳೆದುಕೊಳ್ಳುತ್ತಿದೆ. ಬೆಳಗ್ಗೆ ಜಾಗಿಂಗ್, ಸಂಜೆ ವಾಕಿಂಗ್, ಮಧ್ಯಾಹ್ನ ವಾಯುವಿಹಾರಿಗಳಿಗೆ ಫೇವರಿಟ್ ತಾಣವಾಗಿದ್ದ ಹಾಗೂ ಬೆಂಗಳೂರಿನ ಅಂದಕ್ಕೆ ಬೊಟ್ಟಿಟ್ಟಂತೆ ಇದ್ದ ಕಬ್ಬನ್​​ಪಾರ್ಕ್​ನಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ತಲೆದೋರಿದೆ.

ಕಬ್ಬನ್ ಪಾರ್ಕ್​ನಲ್ಲಿ ಹರಿಯುತ್ತಿದೆ ಚರಂಡಿ ನೀರು

ಬೆಂಗಳೂರಿನ ಹಾಟ್ ಆಫ್ ದಾ ಪ್ಲೇಸ್ ಅಂದ್ರೆ ಅದು ಕಬ್ಬನ್ ಪಾರ್ಕ್, ಇಲ್ಲಿನ ನೆರಳು ಮತ್ತೆ ನೆಮ್ಮದಿ ಅರಸಿ ಬರೋರ ಸಂಖ್ಯೆ ಹೆಚ್ಚಿದೆ. ಇಂಥಾ ಹಸಿರು ಉದ್ಯಾವನದಲ್ಲಿ ಈಗ ಒಳಚರಂಡಿ ನೀರು ಸೇರಿಕೊಳ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಉದ್ಯಾನವನದ ವಿವಿಧ ಭಾಗಗಳಲ್ಲಿರೋ ಒಳ ಚರಂಡಿಯ ಮೂಲಕ ಕೊಳಚೆ ನೀರು ಪಾರ್ಕ್​ನ ಒಂದ್ಕಡೆ ಶೇಖರಣೆ ಆಗ್ತಿದೆ.

ಕಬ್ಬನ್ ಪಾರ್ಕ್​ನಲ್ಲಿ ದುರ್ನಾತದೊಂದಿಗೆ ಹರಿಯುತ್ತಿದೆ ಚರಂಡಿ ನೀರು

ಇದನ್ನೂ ಓದಿ: ಮಳೆ ಅವಘಡ ತಡೆಯಲು ಟ್ರಾಫಿಕ್ ಪೊಲೀಸರಿಗೆ ಟಾಸ್ಕ್ ಕೊಟ್ಟ ಕಮಿಷನರ್ ಸಲೀಂ, ಕಬ್ಬನ್ ಪಾರ್ಕ್​ಗೆ ಹೋಗುವವರೇ ಇರಲಿ ಎಚ್ಚರ!

ಪಾರ್ಕ್​ನ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಲೇ ಇವೆ. ಇದರ ಪ್ರಯೋಜನ ಮಾತ್ರ ಕಿಂಚಿತ್ತೂ ಆಗಿಲ್ಲ. ಪಾರ್ಕ್​ನ ಬಾಲಭವನದಲ್ಲಿ ಬರೋಬ್ಬರಿ ₹24 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯ ವಿವಿಧ ಕಾಮಾಗಾರಿಗಳು ನಡಿತಿವೆ. ಆದ್ರೆ, ಕೊಳಚೆ ನೀರಿನ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಅಲ್ಲದೇ ₹1.5 ಕೋಟಿ ವೆಚ್ಚದಲ್ಲಿ ಕಮಲ ಕೊಳವನ್ನ ಅಭಿವೃದ್ಧಿ ಮಾಡಲಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ರು ಕೆರೆಯ ಹೂಳೆತ್ತಿಲ್ಲ. ಇನ್ನು, ಈ ಕುರಿತಾಗಿ ಕಬ್ಬಕ್ ಪಾರ್ಕ್ ವಾಕರ್ ಅಸೋಸಿಯೇಷನ್ ಅಧಿಕಾರಿಗಳಿಗೆ ದೂರು ಕೊಟ್ಟಿದೆ. ಮನವಿಗಳನ್ನ ಸ್ವೀಕರಿಸೋ ಕಬ್ಬನ್ ಪಾರ್ಕ್ ನಿರ್ದೇಶಕರು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಕಬ್ಬನ್ ಪಾರ್ಕ್​ನಲ್ಲಿ ದುರ್ನಾತದೊಂದಿಗೆ ಹರಿಯುತ್ತಿದೆ ಚರಂಡಿ ನೀರು

ಒಟ್ನಲ್ಲಿ, ಇಷ್ಡು ದಿನಗಳ‌ ಕಾಲ ರಸ್ತೆಗಳಿಗೆ, ರಾಜಕಾಲುವೆಗಳಿಗೆ ಬೇಕಾಬಿಟ್ಟಿಯಾಗಿ ಚರಂಡಿ ನೀರನ್ನ ಬಿಡೋದನ್ನ ಕೇಳಿದ್ವಿ. ಇದೀಗಾ ಪಾರ್ಕ್​ಗಳಿಗೂ ಸಹ ಚರಂಡಿ ನೀರನ್ನ ಬಿಡ್ತಿದ್ದು, ಅಧಿಕಾರಿಗಳು ಈ ಕುರಿತಾಗಿ ಕ್ರಮ ತೆಗೆದುಕೊಳ್ಳಬೇಕಿದೆ.

ವರದಿ: ಪೂರ್ಣಿಮಾ TV9 ಬೆಂಗಳೂರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ