ಬೆಂಗಳೂರು, ಮೇ 25: ಸಕಾಲಿಕ ಮತ್ತು ಕಾಲಾತೀತವಾಗಿ ಬದುಕಿಗೆ ಅನ್ವಯವಾಗುವ “ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು” ಆತ್ಮಚರಿತ್ರೆಯ ಮುಖಪುಟ ಇದೇ ತಿಂಗಳು ರವಿವಾರ (ಮೇ 26) ರಂದು ಬಿಡುಗಡೆಯಾಗಲಿದೆ. ಈ ಪುಸ್ತಕವನ್ನು ಹಿಮಾಲಯದ ಮಹಾನ್ ಯೋಗಿ ಸ್ವಾಮಿ ರಾಮ ಹಾಗೂ ಬಹುಶ್ರುತ ವಿದ್ವಾಂಸರಾದ, ಪದ್ಮಶ್ರೀ ಪುರಸ್ಕೃತ ಡಾ. ಆರ್ ಸತ್ಯನಾರಾಯಣರವರ ಶಿಷ್ಯೆ, ಸಕಲಮಾ ಅವರು ಬರೆದಿದ್ದಾರೆ. ಈ ಪುಸ್ತಕದ ಮುಖಪುಟ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂಗ್ಲೀಷ್ನಲ್ಲಿ “Messages From the Himalayan Sages” ಎಂಬ ಶಿರ್ಷಿಕೆಯಲ್ಲಿ ಅನಾವರಣಗೊಳ್ಳುತ್ತಿದೆ.
ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಮೇ 26 ರಂದು ಬೆಳಗ್ಗೆ 10:30ಕ್ಕೆ ಆತ್ಮ ಚರಿತ್ರೆಯ ಮುಖಪುಟ ಅನಾವರಣಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ, ಸಾಹಿತಿ ಜೋಗಿ, ಬಹುಭಾಷಾ ನಟಿ ಸಪ್ತಮಿ ಗೌಡ ಭಾಗಿಯಾಗಲಿದ್ದಾರೆ. ಲೇಖಕಿ ಸಕಲಮಾ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.
ಮುಖಪುಟ ಅನಾವರಣ ಕಾರ್ಯಕ್ರಮದಲ್ಲಿ ಚಂದ್ರಕಲಾ ನಮಸ್ಕಾರ, ಭರತನಾಟ್ಯ ಪ್ರಸ್ತುತ ಪಡಿಸಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sat, 25 May 24