ಬೆಂಗಳೂರು, ನ.12: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರದ ಬಗ್ಗೆ ವೈದ್ಯರು ಅಸಮ್ಮತಿ ಸೂಚಿಸಿದ್ದಾರೆ. ಹೆಚ್ಚುತ್ತಿರುವ ರೋಗಿಗಳ ಹೊರೆಯನ್ನು ಪೂರೈಸಲು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ವೈದ್ಯರ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ನಿಯಮವನ್ನು ಭಾಗಶಃ ಸಡಿಲಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಎಂಬಿಬಿಎಸ್, ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ಪದವೀಧರರು ಕರ್ನಾಟಕ ಕಡ್ಡಾಯ ಸೇವೆ ಕಾಯ್ದೆ ಅನ್ವಯ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ನಿಯಮ ಪಾಲಿಸಲು ನಿರಾಕರಿಸಿದ ವೈದ್ಯಕೀಯ ಪದವೀಧರರಿಗೆ 15 ರಿಂದ 30 ಲಕ್ಷ ರೂ. ದಂಡ ವಿಧಿಸಲಾಗುವುದು. ‘ಎಂಬಿಬಿಎಸ್ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ಗ್ರಾಮೀಣ ಸೇವೆಗೆ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಪರಿಗಣಿಸುವ ಪ್ರಸ್ತಾವನೆಯಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಸಾಕಷ್ಟು ಸಿಬ್ಬಂದಿಯನ್ನು ಹೊಂದಿರುವ ಮತ್ತು ಯಾವುದೇ ಕೊರತೆಯನ್ನು ಎದುರಿಸದ ಗ್ರಾಮೀಣ ಆರೋಗ್ಯ ಸಂಸ್ಥೆಗಳಲ್ಲಿ ‘ನುರಿತ ವೈದ್ಯರು’ ಕಡಿಮೆಯಾಗದಂತೆ ನೋಡಿಕೊಳ್ಳಲು ಇತ್ತೀಚೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಪುಟ ಹೇಳಿದೆ. ಆದಾಗ್ಯೂ, ಕೊರತೆ ಇದ್ದಾಗಲೆಲ್ಲಾ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಕೇಳಬಹುದು ಎಂದು ಹೇಳಿದೆ.
ಇದನ್ನೂ ಓದಿ: ಮನೆ ಮನೆಗೆ ಬರಲಿದೆ ಔಷಧ ಪೆಟ್ಟಿಗೆ; 30 ವರ್ಷ ಮೇಲ್ಪಟ್ಟವರಿಗೆ ಗೃಹ ಆರೋಗ್ಯ ಯೋಜನೆ ಜಾರಿಗೆ ಸಿದ್ಧತೆ
ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ತೇಜಸ್ವಿ ಎಚ್‌ಜೆ, ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ಈ ಬದಲಾವಣೆಯನ್ನು ಜಾರಿಗೊಳಿಸಬಾರದು ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಸಂಸ್ಥೆಗಳು ಸಾಕಷ್ಟು ಸಿಬ್ಬಂದಿಯನ್ನು ಹೊಂದಿದ್ದರೂ, ಹೆಚ್ಚುತ್ತಿರುವ ರೋಗಿಗಳ ಹೊರೆಯನ್ನು ನಿಭಾಯಿಸಲು ಹೆಚ್ಚಿನ ವೈದ್ಯರ ಅವಶ್ಯಕತೆಯಿದೆ ಎಂದು ಅವರು ವಿವರಿಸಿದರು. ಇದು ಗ್ರಾಮೀಣ ಪ್ರದೇಶದಲ್ಲಿ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ವೈದ್ಯಕೀಯ ಶಿಕ್ಷಣದ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಮಾನದಂಡಗಳ ಪ್ರಕಾರ ಕರ್ನಾಟಕದ ಆರೋಗ್ಯ ಸಂಸ್ಥೆಗಳು, ಕನಿಷ್ಠ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಿರೆ ಸಿಬ್ಬಂದಿ ಕೊರತೆ ಇರುವುದಿಲ್ಲ ಎಂದು ಹೇಳಿದರು. ಹೆಚ್ಚುವರಿ ರೋಗಿಯ ಹೊರೆಯನ್ನು ನಿಭಾಯಿಸಲು ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಹುದ್ದೆಗಳು ಖಾಲಿ ಉಳಿದಿವೆ. ಇದರೊಂದಿಗೆ ರೋಗಿಗಳ ಹೊರೆ ನಿಭಾಯಿಸಲು ಕಷ್ಟವಾಗುತ್ತಿದೆ. ಇನ್ನು ಈಗ ಇರುವ ವೈದ್ಯರು, ಹೆಚ್ಚೆಚ್ಚು ರೋಗಿಳನ್ನು ನಿಭಾಯಿಸುವುದರಿಂದ ಅವರ ಮಾನಸಿಕ, ದೈಹಿಕ ಆರೋಗ್ಯ ಮತ್ತು ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ