ಯುವತಿಯರ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಿದ್ದವನ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 28, 2024 | 10:14 PM

ಮುಂದುವರೆದ ತಂತ್ರಜ್ಞಾನದಲ್ಲಿ ಎಲ್ಲವೂ ಸಾಧ್ಯ. ಆದರೆ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಹೌದು, ಯುವತಿಯರ ಫೋಟೋ ಮಾರ್ಫ್(Photo morphing) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಯುವಕನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು(Cyber ​​Crime Police) ಬಂಧಿಸಿದ್ದಾರೆ.

ಯುವತಿಯರ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಿದ್ದವನ ಬಂಧನ
ಸೈಬರ್​ ಪೊಲೀಸ್​ ಠಾಣೆ
Follow us on

ಬೆಂಗಳೂರು, ಮೇ.28: ಯುವತಿಯರ ಫೋಟೋ ಮಾರ್ಫ್(Photo morphing) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಯುವಕನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು(Cyber ​​Crime Police) ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯರ ಫೋಟೋಗಳನ್ನ ಮಾರ್ಫ್ ಮಾಡ್ತಿದ್ದ ಆರೋಪಿ, ಅದನ್ನು ಇನ್​ಸ್ಟಾಗ್ರಾಮ್ ಮೂಲಕ ಶೇರ್ ಮಾಡುತ್ತಿದ್ದ. ಇತ್ತೀಚೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳ ಫೋಟೋ ಮಾರ್ಫ್ ಮಾಡಿದ್ದ. ಈ ಬಗ್ಗೆ ಬಾಲಕಿ ಪೋಷಕರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.

ಜೊತೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ‌ ಒಳಗಾದ ಬಾಲಕರು ವಶ

ಈ ಕುರಿತು ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ‌ ಒಳಗಾದ ಬಾಲಕರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತ ಆರೋಪಿತನಿಂದ ಮೂರು ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಈಶಾನ್ಯ ವಿಭಾಗ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೂ ಡೀಪ್​ ಫೇಕ್​ ಕಾಟ, ಅಶ್ಲೀಲವಾಗಿ ಎಡಿಟ್​ ಮಾಡಿ ಫೋಟೋ ಹರಿಬಿಟ್ಟ ಕಿಡಿಗೇಡಿ

ಶಾಲಾ ವಿದ್ಯಾರ್ಥಿನಿಯರಿಗೂ ಡೀಪ್​ ಫೇಕ್​ ಕಾಟ

ಇದೇ ಮೇ 24 ರಂದು ಬೆಂಗಳೂರಿನ ಪ್ರತಿಷ್ಠಿತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯ ಭಾವಚಿತ್ರಗಳನ್ನು ಕೃತಕ ಬುದ್ಧಿಮತ್ತೆ ಮುಖಾಂತರ ಅಶ್ಲೀಲವಾಗಿ ಎಡಿಟ್​ ಮಾಡಿ ಎಲ್ಲಡೆ ಹರಿಬಿಡಲಾಗಿದ್ದ ಘಟನೆ ನಡೆದಿತ್ತು. 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇನ್ಸ್ಟಾಗ್ರಾಮನಲ್ಲಿ ಗ್ರೂಪ್ ರಚಿಸಿಕೊಂಡಿದ್ದಾರೆ. ಬಳಿಕ ಈ ಗ್ರೂಪ್​ನಲ್ಲಿ ಅನಾಮದೇಯ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯರ ಮಾರ್ಫಿಂಗ್ ಭಾವಚಿತ್ರಗಳನ್ನು ಶೇರ್​ ಮಾಡುತ್ತಾನೆ. ಈ ವಿಚಾರ ತಿಳಿದು ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.ಈ ಕುರಿತು ಪೋಷಕರು ಈಗಾಗಲೇ ಸೈಬರ್ ಸೆಲ್​ಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ