ಶಿಕ್ಷಣ ಸಚಿವರೇ.. 500 ವಿದ್ಯಾರ್ಥಿಗಳಿರುವ ಬೆಳ್ಳಂದೂರಿನ ಸರ್ಕಾರಿ ಶಾಲೆಯಲ್ಲಿ ಕಾದಿದೆ ಅನಾಹುತ

| Updated By: Rakesh Nayak Manchi

Updated on: Aug 28, 2023 | 7:36 PM

ಬೆಂಗಳೂರು ನಗರ ಜಿಲ್ಲೆ ದಕ್ಷಿಣ ವಲಯದ ಬೆಳ್ಳಂದೂರಿನ ನಂ. 4 ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿ ಒಂಬತ್ತು ದಶಕಗಳು ಕಳೆದಿವೆ. ಸದ್ಯ ಈ ಶಾಲೆಯಲ್ಲಿ ಅನಾಹುತ ಕಾದಿದೆ. ಮಳೆ ಬಂದರೆ ಸಾಕು ಮೇಲ್ಛಾವಣಿಯಿಂದ ನೀರು ಸೋರುತ್ತದೆ. ಅಲ್ಲದೆ, ಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಯಾವಾಗ ಏನಾಗುತ್ತೋ ಎಂಬ ಭಯದಲ್ಲೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಿನ ಕಳೆಯುತ್ತಿದ್ದಾರೆ.

ಶಿಕ್ಷಣ ಸಚಿವರೇ.. 500 ವಿದ್ಯಾರ್ಥಿಗಳಿರುವ ಬೆಳ್ಳಂದೂರಿನ ಸರ್ಕಾರಿ ಶಾಲೆಯಲ್ಲಿ ಕಾದಿದೆ ಅನಾಹುತ
ಬೆಳ್ಳಂದೂರು ಸರ್ಕಾರಿ ಶಾಲೆ
Follow us on

ಬೆಂಗಳೂರು, ಆಗಸ್ಟ್ 28: ಬೆಳ್ಳಂದೂರಿನಲ್ಲಿ (Bellandur) ಸುಮಾರು 90 ವರ್ಷಗಳಷ್ಟು ಹಳೆಯದಾದ ಸರ್ಕಾರಿ ಶಾಲೆಯ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ತರಗತಿಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಮಳೆ ಬಂದಾಗಲೆಲ್ಲ ಕಟ್ಟಡದ ಮೇಲ್ಛಾವಣಿಯಿಂದ ನೀರು ಸೋರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ತೆರಳುತ್ತಾರೆ. ಶಾಲೆಯ ದುರವಸ್ಥೆ ಬಗ್ಗೆ ದೂರು ನೀಡಿದರೂ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗುತ್ತಿದೆ.

ಬೆಳ್ಳಂದೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಸಾಕಷ್ಟು ತರಗತಿ ಕೊಠಡಿ ಹಾಗೂ ಆಟದ ಮೈದಾನವಿಲ್ಲ. 1 ರಿಂದ 7 ನೇ ತರಗತಿಯವರೆಗೆ 500 ವಿದ್ಯಾರ್ಥಿಗಳಿದ್ದಾರೆ. ಆದರೆ ನಮಗೆ ಸಾಕಷ್ಟು ತರಗತಿ ಕೊಠಡಿಗಳಿಲ್ಲ. ನಮಗೆ ಆಟವಾಡಲು ಅಥವಾ ಪ್ರಾರ್ಥನೆ ಮಾಡಲು ಮೈದಾನವಿಲ್ಲ. ಮಳೆ ಬಂದಾಗಲೆಲ್ಲ ತರಗತಿಯೊಳಗೆ ನೀರು ಸೋರುತ್ತದೆ ಎಂದು ವಿದ್ಯಾರ್ಥಿನಿ ಪ್ರತೀಕ್ಷಾ ಹೇಳಿದ್ದಾರೆ.

ಇದನ್ನೂ ಓದಿ: ಗದಗ: ಸರ್ಕಾರಿ ಶಾಲೆಯ ಮೈದಾನದಲ್ಲಿ ತೆಲೆ ಎತ್ತಿದ ಅಕ್ರಮ ಮನೆಗಳು; ನಮ್ಮ ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳ ಆಕ್ರೋಶ!

ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶವು ಸಮರ್ಪಕವಾಗಿಲ್ಲದ ಕಾರಣ ಶಿಕ್ಷಕರು ಕೆಲವೊಮ್ಮೆ ಹತ್ತಿರದ ಕಾರ್ ಶೆಡ್ ಅಥವಾ ದೇವಸ್ಥಾನದ ಆವರಣದಲ್ಲಿ ತರಗತಿಗಳನ್ನು ನಡೆಸುತ್ತಾರೆ. ಇದರಿಂದ ಪೋಷಕರು ಕೂಡ ಆತಂಕಗೊಂಡಿದ್ದಾರೆ. ಶಾಲಾ ಕಟ್ಟಡವು ದುಸ್ಥಿತಿಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ’ ಎಂದು ಪೋಷಕ ಶ್ರೀನಿವಾಸ್ ಹೇಳಿದರು.

90 ವರ್ಷಗಳು ತುಂಬಿರುವ ಈ ಸರ್ಕಾರಿ ಶಾಲೆಗೆ ಹಲವಾರು ವರ್ಷಗಳಿಂದ ಬಣ್ಣವೇ ಬಳಿದಿಲ್ಲ. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶಾಲಾ ಆವರಣ ಕಸದಿಂದ ತುಂಬಿಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ