ಬೆಂಗಳೂರು ನೃಪತುಂಗ ವಿವಿಯಲ್ಲಿ ಶುಲ್ಕ ಹೆಚ್ಚಳ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯವು ಪದವಿ ಕೋರ್ಸ್‌ಗಳ ಶುಲ್ಕವನ್ನು ಏಕಾಏಕಿ 30 ರಿಂದ 35%ರಷ್ಟು ಹೆಚ್ಚಳ ಮಾಡಿದೆ. ಸದ್ಯ ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ತರಗತಿ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದರು. ನಾನಾ ಸಮಸ್ಯೆಗಳ ನಡುವೆ ಶುಲ್ಕ ಏರಿಕೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ನೃಪತುಂಗ ವಿವಿಯಲ್ಲಿ ಶುಲ್ಕ ಹೆಚ್ಚಳ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬೆಂಗಳೂರು ನೃಪತುಂಗ ವಿವಿ, ವಿದ್ಯಾರ್ಥಿಗಳ ಪ್ರತಿಭಟನೆ
Edited By:

Updated on: Aug 25, 2025 | 11:11 AM

ಬೆಂಗಳೂರು, ಆಗಸ್ಟ್​ 25: ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯದಲ್ಲಿ (Nrupathunga University) ಇದೀಗ ಏಕಾಏಕಿ ಪದವಿ ಕೋರ್ಸ್​​ಗಳ ಶುಲ್ಕವನ್ನು (Fees Hike) ಶೇಕಡಾ 30 ರಿಂದ 35ರಷ್ಟು ಹೆಚ್ಚಳ ಮಾಡಲಾಗಿದೆ. ಸದ್ಯ ಇದು ಆಕ್ರೋಶಕ್ಕೆ ಕಾರಣವಾಗಿದ್ದು, ಶುಲ್ಕ ಏರಿಕೆ ಕೈಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

ಏಕಾಏಕಿ ಶುಲ್ಕ ಹೆಚ್ಚಳ

ನೃಪತುಂಗ ವಿಶ್ವವಿದ್ಯಾಲಯದ ಬಿಎ, ಬಿಎಸ್ಇ ಮತ್ತು ಬಿ.ಇಡಿ ಸೇರಿದಂತೆ ಸಾಕಷ್ಟು ಪದವಿ ಕೋರ್ಸ್​ಗಳ ಶುಲ್ಕವನ್ನು ಏಕಾಏಕಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಕ್ಯಾಂಪಸ್​ನಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆಗೆ ಕುಳಿತಿದ್ದಾರೆ. ಕ್ಯಾಂಪಸ್​ನಲ್ಲಿ ನಾನಾ ಸಮಸ್ಯೆಗಳ ನಡುವೆ ಶುಲ್ಕ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನಾನಾ ಸಮಸ್ಯೆಗಳ ನಡುವೆ ಶುಲ್ಕ ಏರಿಕೆ

ಶೌಚಾಲಯದ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸರಿಯಾದ ಬೋಧಕ ಸಿಬ್ಬಂದಿಗಳಿಲ್ಲ. ಹೀಗೆ ಕ್ಯಾಂಪಸ್​ನಲ್ಲಿ ನಾನಾ ಸಮಸ್ಯೆಗಳಿವೆ. ಇದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಿಲ್ಲ, ಆದರೆ ಶುಲ್ಕ ಮಾತ್ರ ಏರಿಕೆಗೆ ಮಾಡಲಾಗಿದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಸದ್ಯ ದುಬಾರಿ ಶುಲ್ಕ ಏರಿಕೆ ಕೈಬೀಡುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: NMC Announce: ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ, 8000 ಸೀಟುಗಳು ಹೆಚ್ಚಾಗುವ ಸಾಧ್ಯತೆ

ನೃಪತುಂಗ ವಿಶ್ವವಿದ್ಯಾಲಯ 2021 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆ ಆಯಿತು. ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಯಂತಹ ವಿವಿಧ ವಿಭಾಗಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್​​ಗಳಲ್ಲಿ ವಿದ್ಯಾರ್ಥಿಗಳು ಓದಬಹುದಾಗಿದೆ.

ಅತಿಥಿ ಉಪನ್ಯಾಸಕರಿಂದ ಧರಣಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇತ್ತೀಚೆಗೆ ಬೀದರ್ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನಾ ಧರಣಿ ನಡೆಸುತ್ತಿದ್ದರು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿಯಿರುವ ಬೀದರ್ ವಿಶ್ವ ವಿದ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸುತ್ತಿದ್ದರು.

ಇದನ್ನೂ ಓದಿ: Free Yoga Training: ಉಚಿತವಾಗಿ ಯೋಗ ಅಧ್ಯಯನ ಮಾಡಿ, ಶಿಕ್ಷಕರಾಗುವ ಮೂಲಕ ನಿಮ್ಮ ವೃತ್ತಿಜೀವನ ಪ್ರಾರಂಭಿಸಿ

ಅತಿಥಿ ಉಪನ್ಯಾಸಕರು ನಡೆಸುತ್ತಿದ್ದ ಪ್ರತಿಭಟನಾ ಧರಣಿಯಿಂದಾಗಿ ವಿಶ್ವವಿದ್ಯಾಲಯದಲ್ಲಿ ತರಗತಿಗಳು ನಡೆಯದೆಯೇ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬೀದರ್ ವಿಶ್ವ ವಿದ್ಯಾಯದಲ್ಲಿ ಬೋಧನೆ ಮಾಡುವ ಅತಿಥಿ ಉಪನ್ಯಾಸಕರಿಗೆ ಗಂಟೆಗೆ 750 ರೂ. ಕೊಡುತ್ತಿದ್ದಾರೆ. ಇದೇ ಅತಿಥಿ ಉಪನ್ಯಾಸಕರ ಧರಣಿಗೆ ಕಾರಣವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.