Bengaluru: 8ನೇ ತರಗತಿಯ ನಂತರ ಕನ್ನಡ ಭಾಷಾ ಪಠ್ಯ ಕೈಬಿಡಲು ಖಾಸಗಿ ಶಾಲೆಗೆ ಪೋಷಕರ ಮನವಿ; ಕನ್ನಡ ಸಂಘಟನೆಗಳ ವಿರೋಧ

|

Updated on: Jul 17, 2023 | 4:01 PM

ಪಠ್ಯಕ್ರಮದಿಂದ ಕನ್ನಡ ಭಾಷೆಯನ್ನು ಕೈಬಿಡಬೇಕೆಂಬ ಪೋಷಕರ ಆಗ್ರಹದ ವಿರುದ್ಧ ಕನ್ನಡ ಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ವಿರೋಧಿಸುತ್ತಿರುವ ಶಾಲೆ ಮತ್ತು ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.

Bengaluru: 8ನೇ ತರಗತಿಯ ನಂತರ ಕನ್ನಡ ಭಾಷಾ ಪಠ್ಯ ಕೈಬಿಡಲು ಖಾಸಗಿ ಶಾಲೆಗೆ ಪೋಷಕರ ಮನವಿ; ಕನ್ನಡ ಸಂಘಟನೆಗಳ ವಿರೋಧ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ 17: ಕನ್ನಡ ಭಾಷೆಯನ್ನು (Kannada Language) 8ನೇ ತರಗತಿಯ ನಂತರ ಪಠ್ಯಕ್ರಮದಲ್ಲಿ ಸೇರಿಸಬಾರದು ಎಂದು ಬೆಂಗಳೂರಿನ ಖಾಸಗಿ ಶಾಲೆಯೊಂದರ (Private School)  ವಿದ್ಯಾರ್ಥಿಗಳ ಪೋಷಕರು ಶಾಲಾ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ನಗರದ ಚಾಲುಕ್ಯ ವೃತ್ತದ ಬಳಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ 50 ಕ್ಕೂ ಹೆಚ್ಚು ಮಕ್ಕಳ ಪೋಷಕರು ಪಠ್ಯಕ್ರಮದಿಂದ ಕನ್ನಡ ಭಾಷೆ ಕೈಬಿಡುವಂತೆ ಶಾಲೆಯನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದಾರೆ.

ಖಾಸಗಿ ಶಾಲೆಯು ಪೋಷಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಲು ಚಿಂತನೆ ನಡೆಸಿದೆ. ಜತೆಗೆ ಈ ಬಗ್ಗೆ ಶಾಲಾ ಆಡಳಿತಕ್ಕೆ ಪತ್ರ ಬರೆಯುವಂತೆ ಹೇಳಿದೆ ಎಂದು ‘ನ್ಯೂಸ್ 9’ ವರದಿ ಮಾಡಿದೆ.

ಪಠ್ಯಕ್ರಮದಲ್ಲಿ ಕನ್ನಡದ ಬದಲು ಇಂಗ್ಲಿಷ್ ಸೇರಿಸಿದರೆ ಮಕ್ಕಳು ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದಾಗ ಅನುಕೂಲವಾಗುತ್ತದೆ ಎಂದು ಪೋಷಕರು ವಾದ ಮಂಡಿಸಿದ್ದಾರೆ.

ಈ ಮಧ್ಯೆ, ಪಠ್ಯಕ್ರಮದಿಂದ ಕನ್ನಡ ಭಾಷೆಯನ್ನು ಕೈಬಿಡಬೇಕೆಂಬ ಪೋಷಕರ ಆಗ್ರಹದ ವಿರುದ್ಧ ಕನ್ನಡ ಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ವಿರೋಧಿಸುತ್ತಿರುವ ಶಾಲೆ ಮತ್ತು ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಹುಭಾಷಾ ಶಿಕ್ಷಣದ ಪ್ರಯೋಜನಗಳು: ಸಾಂಸ್ಕೃತಿಕ ತಿಳುವಳಿಕೆ ಮತ್ತು ಅರಿವಿನ ಅಭಿವೃದ್ಧಿಗಾಗಿ ಈ ಕಲಿಕೆ

ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ