Bengaluru News: ಪೀಣ್ಯ ಫ್ಲೈಓವರ್​ ವಾಹನ ಸಂಚಾರಕ್ಕೆ ಮುಕ್ತ; ಭಾರಿ ವಾಹನಗಳ ಸಂಚಾರಕ್ಕೆ ಮುಂದುವರಿದ ನಿರ್ಬಂಧ

| Updated By: ganapathi bhat

Updated on: Feb 16, 2022 | 4:49 PM

ಗೊರಗುಂಟೆ ಪಾಳ್ಯದಿಂದ ನಾಗಸಂದ್ರ ವರೆಗಿನ 4 ಕಿಲೋ ಮೀಟರ್ ಫ್ಲೈ‌ಓವರ್ ಕಳೆದ 58 ದಿನಗಳಿಂದ ಬಂದ್ ಆಗಿತ್ತು. ಆದರೆ, ಫ್ಲೈ‌ಈವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಟಿಟಿ ವ್ಯಾನ್, ಟಾಟಾ ಏಸ್, ಕಾರ್‌,ಬೈಕ್ ನಂತಹ ಲಘು ವಾಹನಗಳ ಓಡಾಟ ಶುರುವಾಗಿದೆ.

Bengaluru News: ಪೀಣ್ಯ ಫ್ಲೈಓವರ್​ ವಾಹನ ಸಂಚಾರಕ್ಕೆ ಮುಕ್ತ; ಭಾರಿ ವಾಹನಗಳ ಸಂಚಾರಕ್ಕೆ ಮುಂದುವರಿದ ನಿರ್ಬಂಧ
ಪೀಣ್ಯ ಫ್ಲೈಓವರ್, ಸಂಚಾರಕ್ಕೆ ನಿರ್ಬಂಧ
Follow us on

ಬೆಂಗಳೂರು: ನಗರದ ಪೀಣ್ಯ ಫ್ಲೈಓವರ್​ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮೊದಲಿಗೆ ಲಘು ವಾಹನಗಳ ಸಂಚಾರಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅವಕಾಶ ನೀಡಿದೆ. ಪ್ರಸ್ತುತ 4 ಚಕ್ರದ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕಳೆದ 58 ದಿನಗಳಿಂದ ಬಂದ್ ಆಗಿದ್ದ ಪೀಣ್ಯ ಫ್ಲೈಓವರ್​, ಗೊರಗುಂಟೆಪಾಳ್ಯ-ನಾಗಸಂದ್ರ ನಡುವಿನ ಫ್ಲೈಓವರ್​ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿದಿದೆ.

ಗೊರಗುಂಟೆ ಪಾಳ್ಯ-ನಾಗಸಂದ್ರ, ಫ್ಲೈ‌ಓವರ್ ಲಘುವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಗೊರಗುಂಟೆ ಪಾಳ್ಯದಿಂದ ನಾಗಸಂದ್ರ ವರೆಗಿನ 4 ಕಿಲೋ ಮೀಟರ್ ಫ್ಲೈ‌ಓವರ್ ಕಳೆದ 58 ದಿನಗಳಿಂದ ಬಂದ್ ಆಗಿತ್ತು. ಆದರೆ, ಫ್ಲೈ‌ಈವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಟಿಟಿ ವ್ಯಾನ್, ಟಾಟಾ ಏಸ್, ಕಾರ್‌,ಬೈಕ್ ನಂತಹ ಲಘು ವಾಹನಗಳ ಓಡಾಟ ಶುರುವಾಗಿದೆ.

ಇದನ್ನೂ ಓದಿ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಘನತ್ಯಾಜ್ಯ ವಿಲೇವಾರಿ; ಪಾಲಿಕೆ ಅಧಿಕಾರಿಗಳನ್ನು ಜೈಲಿಗಟ್ಟುವುದಾಗಿ ಹೈಕೋರ್ಟ್ ಎಚ್ಚರಿಕೆ

ಇದನ್ನೂ ಓದಿ: ಬೆಂಗಳೂರು: 2021ರಲ್ಲಿ ರಸ್ತೆ ಗುಂಡಿಗಳಿಗೆ ಬಲಿಯಾದ ಜೀವಗಳೆಷ್ಟು ಗೊತ್ತಾ? ಹೈಕೋರ್ಟ್ ಬಿಬಿಎಂಪಿಗೆ ಕೊಟ್ಟ ಸೂಚನೆ ಇಲ್ಲಿದೆ