57 ದಿನಗಳ ಬಳಿಕ ಸಂಚಾರಕ್ಕೆ ಮುಕ್ತವಾದ ತುಮಕೂರು ರಸ್ತೆ ಫ್ಲೈಓವರ್; ಎಲ್ಎಂವಿ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ

57 ದಿನಗಳ ಬಳಿಕ ಸಂಚಾರಕ್ಕೆ ಮುಕ್ತವಾದ ತುಮಕೂರು ರಸ್ತೆ ಫ್ಲೈಓವರ್; ಎಲ್ಎಂವಿ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ
ತುಮಕೂರು ರಸ್ತೆ ಫ್ಲೈಓವರ್ (ಸಂಗ್ರಹ ಚಿತ್ರ)

ಮಧ್ಯಾಹ್ನದ ನಂತ್ರ ಎಲ್ಎಂವಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ದ್ವಿಚಕ್ರ ವಾಹನಗಳು, ಆಟೋ, ಕಾರ್ಗಳು ಫ್ಲೈ ಓವರ್ ಮೇಲೆ ಸಂಚಾರ ಮಾಡಲು ಅನುಮತಿ ನೀಡಲಾಗಿದೆ. ಹೆಚ್ಎಂವಿ ವಾಹನಗಳು ಅಂದ್ರೆ ಹೆವಿ ಮೋಟಾರ್ ವೆಹಿಕಲ್ಗಳಿಗೆ ಫ್ಲೈ ಓವರ್ ಮೇಲೆ ಸಂಚರಿಸಲು ಅವಕಾಶವಿಲ್ಲ.

TV9kannada Web Team

| Edited By: Ayesha Banu

Feb 16, 2022 | 2:01 PM

ತುಮಕೂರು: 102, 103ನೇ ಪಿಲ್ಲರ್ ನಡುವಿನ ರೋಪ್ ಸಡಿಲ ಹಿನ್ನೆಲೆಯಲ್ಲಿ ತುಮಕೂರು ರಸ್ತೆ ಫ್ಲೈಓವರ್(Tumkur Road Flyover) ದುರಸ್ತಿ ಕಾರ್ಯ ನಡೆಯುತ್ತಿದ್ದು ಕಳೆದ 57 ದಿನಗಳಿಂದ ಫ್ಲೈಓವರ್ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸದ್ಯ ಇಂದು ಮಧ್ಯಾಹ್ನ ಮೂರು ಗಂಟೆಯ ನಂತರ ಪೀಣ್ಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾಗಲಿದೆ.

ಮಧ್ಯಾಹ್ನದ ನಂತ್ರ ಎಲ್ಎಂವಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ದ್ವಿಚಕ್ರ ವಾಹನಗಳು, ಆಟೋ, ಕಾರ್ಗಳು ಫ್ಲೈ ಓವರ್ ಮೇಲೆ ಸಂಚಾರ ಮಾಡಲು ಅನುಮತಿ ನೀಡಲಾಗಿದೆ. ಹೆಚ್ಎಂವಿ ವಾಹನಗಳು ಅಂದ್ರೆ ಹೆವಿ ಮೋಟಾರ್ ವೆಹಿಕಲ್ಗಳಿಗೆ ಫ್ಲೈ ಓವರ್ ಮೇಲೆ ಸಂಚರಿಸಲು ಅವಕಾಶವಿಲ್ಲ. ಲಾರಿ, ಬಸ್, ಟಿಪ್ಪರ್ ಫ್ಲೈ ಓವರ್ ಮೇಲೆ ಸಂಚಾರ ಮಾಡಲು ಅವಕಾಶವಿಲ್ಲ. ಪಕ್ಕದ ಸರ್ವಿಸ್ ರಸ್ತೆಯಲ್ಲೇ ಹೆಚ್ಎಂವಿ ವಾಹನಗಳು ಸಾಗಬೇಕು. ಫ್ಲೈ ಓವರ್ ಬಳಿ ಈಗಾಗಲೆ ಎತ್ತರ ಮಿತಿಗೆ ಪೊಲೀಸ್ರು ಕಬ್ಬಿಣದ ಸಲಾಕೆ ಹಾಕಿದ್ದಾರೆ. 10 ಅಡಿ ಎತ್ತರದಲ್ಲಿ ಕಬ್ಬಿಣ ಸಲಾಕೆ ಅಡ್ಡಲಾಗಿ ವೆಲ್ಡ್ ಮಾಡಲಾಗಿದೆ. ಎನ್ಎಚ್ಎಐ ನಿರ್ದೇಶನದಂತೆ ಎಲ್ಎಂವಿಗಳ ಓಡಾಡಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತ್ರ ಎಲ್ಎಂವಿ ವಾಹನ ಸಂಚಾರಕ್ಕೆ ಅವಕಾಶ ಕೊಡುವಂತೆ ಟ್ರಾಫಿಕ್ ಇನ್ಸ್ ಪೆಕ್ಟರ್ ಗಳಿಗೆ ಸೂಚಿಸಲಾಗಿದೆ.

ಹೆಚ್​ಡಿ ದೇವೆಗೌಡರ ನೇತೃತ್ವದಲ್ಲಿ ಕೇಂದ್ರಕ್ಕೆ ಪತ್ರ ಬರೆಯುತ್ತೆವೆ ಇನ್ನು ಈ ಹಿಂದೆ ದಾಸರಹಳ್ಳಿ ಶಾಸಕ ಮಂಜುನಾಥ್ ಫ್ಲೈಓವರ್ ಸಮಸ್ಯೆ ಬಗ್ಗೆ ಪತ್ರ ಬರೆಯಲು ಮುಂದಾಗಿದ್ದರು. ಪೀಣ್ಯಾ ಫ್ಲೈ ಓವರ್ ಒಂದ್ ಮಾಡಿ ಇವತ್ತಿಗೆ 57 ದಿನಗಳಾಗಿವೆ. 60 -70 ವರ್ಷ ಇರಬೇಕಾದ ಫ್ಲೈ ಓವರ್ ಇದು. ನಿನ್ನೆ ಸಿಎಂರನ್ನ ಕೇಳಿದ್ರೇ, ಇದು ನಮ್ಗೆ ಬರಲ್ಲ ಕೇಂದ್ರ ಸರ್ಕಾರದ್ದು ಅಂತಾರೆ. ಪೀಣ್ಯಾ ಕೈಗಾರಿಕಾ ಪ್ರದೇಶಕ್ಕೆ ಲಕ್ಷಾಂತರ ಜನ ಕೆಲಸಕ್ಕೆ ಓಡಾಡ್ತಾರೆ. ಆಂಬ್ಯುಲೆನ್ಸ್​ಗಳಲ್ಲಿ ಎಷ್ಟೋ ಪ್ರಾಣಗಳು ಹೋಗ್ತಿವೆ. ಸಿಎಂ ಕೊಟ್ಟ ನಿನ್ನೆಯ ಹೇಳಿಕೆ ಜನರನ್ನ ಕಂಗಾಲಾಗುವಂತೆ ಮಾಡಿದೆ. 48 ಗಂಟೆಯಲ್ಲಿ ಚೆಕ್ ಮಾಡ್ತೀವಿ ಅಂದವರು ಎರಡು ತಿಂಗಳಾಗುತ್ತಿದೆ. ಯಾರನ್ನ ಕೇಳಿದ್ರು ಸರಿಯಾದ ಮಾಹಿತಿ ಸಿಗುತ್ತಿಲ್ಲ. ಸಿಎಂ ಹಾರಿಕೆಯ ಉತ್ತರ ನೀಡ್ತಿದ್ದಾರೆ. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲೇಬೇಕು. ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ ಎಂದು ಹೆಚ್​ಡಿ ದೇವೆಗೌಡರ ನೇತೃತ್ವದಲ್ಲಿ ಕೇಂದ್ರಕ್ಕೆ ಪತ್ರ ಬರೆಯಲು ದಾಸರಹಳ್ಳಿ ಶಾಸಕ ಮಂಜುನಾಥ್‌ ಸಜ್ಜಾಗಿದ್ದರು.

ಇದನ್ನೂ ಓದಿ: 102, 103ನೇ ಪಿಲ್ಲರ್ ನಡುವಿನ ರೋಪ್ ಸಡಿಲ; ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ ಕಾರ್ಯ, ಬೆಳ್ಳಂ ಬೆಳಿಗ್ಗೆ ಟ್ರಾಫಿಕ್ ಜಾಮ್

Follow us on

Related Stories

Most Read Stories

Click on your DTH Provider to Add TV9 Kannada