102, 103ನೇ ಪಿಲ್ಲರ್ ನಡುವಿನ ರೋಪ್ ಸಡಿಲ; ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ ಕಾರ್ಯ, ಬೆಳ್ಳಂ ಬೆಳಿಗ್ಗೆ ಟ್ರಾಫಿಕ್ ಜಾಮ್

102-103ನೇ ಪಿಲ್ಲರ್ ನಡುವಿನ ಸ್ಲಾಬ್‌ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಗೊರಗುಂಟೆಪಾಳ್ಯ-ನಾಗಸಂದ್ರದ 4 ಕಿಲೋಮೀಟರ್ ದೂರದ ಫ್ಲೈಓವರ್ ಬಂದ್ ಮಾಡಲಾಗಿದ್ದು ಬೆಳ್ಳಂಬೆಳಗ್ಗೆ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.

102, 103ನೇ ಪಿಲ್ಲರ್ ನಡುವಿನ ರೋಪ್ ಸಡಿಲ; ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ ಕಾರ್ಯ, ಬೆಳ್ಳಂ ಬೆಳಿಗ್ಗೆ ಟ್ರಾಫಿಕ್ ಜಾಮ್
ತುಮಕೂರು ರಸ್ತೆ ಫ್ಲೈಓವರ್ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Dec 26, 2021 | 8:33 AM

ಬೆಂಗಳೂರು: 102, 103ನೇ ಪಿಲ್ಲರ್ ನಡುವಿನ ರೋಪ್ ಸಡಿಲ ಹಿನ್ನೆಲೆಯಲ್ಲಿ ಬೆಂಗಳೂರಿನ ತುಮಕೂರು ರಸ್ತೆ ಫ್ಲೈಓವರ್ ದುರಸ್ತಿ ಕಾರ್ಯ ನಡೆಯುತ್ತಿದೆ. ಹೀಗಾಗಿ ಫ್ಲೈಓವರ್ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು ತುಮಕೂರು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಗಿದೆ.

102-103ನೇ ಪಿಲ್ಲರ್ ನಡುವಿನ ಸ್ಲಾಬ್‌ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಗೊರಗುಂಟೆಪಾಳ್ಯ-ನಾಗಸಂದ್ರದ 4 ಕಿಲೋಮೀಟರ್ ದೂರದ ಫ್ಲೈಓವರ್ ಬಂದ್ ಮಾಡಲಾಗಿದ್ದು ಬೆಳ್ಳಂಬೆಳಗ್ಗೆ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಇನ್ನು ಡಿಸೆಂಬರ್ 31ರವರೆಗೆ ಫ್ಲೈ ಓವರ್ ಮೇಲೆ ಸಂಚಾರ ಬಂದ್ ಮಾಡಲಾಗಿದೆ.

ಹತ್ತು ವರ್ಷದ ಹಿಂದೆಯಷ್ಟೇ ಜನರಿಗೆ ಲಭ್ಯವಾದ 4ಕಿಲೋಮೀಟರ್ ಉದ್ದದ ಗೊರಗುಂಟೆಪಾಳ್ಯ-ನಾಗಸಂದ್ರ, ಎಲಿವೇಟೆಡ್ ಫ್ಲೈಓವರ್ ಈಗ ಒಂದು ವಾರ ಬಂದ್ ಆಗಲಿದೆ. ಫ್ಲೈ ಓವರ್​ಗೆ ಅಳವಡಿಸಿರುವ ಕೇಬಲ್ ದುರಸ್ತಿ ಹಿನ್ನಲೆ ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೆಕ್ನಿಕಲ್ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಫ್ಲೈ ಓವರ್ ದುರಸ್ತಿ ಹಿನ್ನಲೆ ಎರಡು ಬದಿ ಸಂಚಾರ ನಿರ್ಬಂಧಿಸಲಾಗಿದೆ. ಡಿಸೆಂಬರ್ 31ರವರೆಗೆ ಫ್ಲೈ ಓವರ್ ಬಂದ್ ಆಗಿರಲಿದೆ. ಫ್ಲೈ ಓವರ್ ಬಂದ್ ಹಾಗೂ ಮಾರ್ಗ ಬದಲಾವಣೆ ಬಗ್ಗೆ ಸಂಚಾರಿ ಪೊಲೀಸರು ಪ್ರಕಟಣೆ‌ ಹೊರಡಿಸಿದ್ದಾರೆ.

Tumkur road flyover traffic jam 1

ಪ್ರಕಟಣೆ‌

ಸಂಚಾರ ದಟ್ಟಣ ನಿಯಂತ್ರಿಸಲು ಅನುಸರಿಸಬೇಕು ಬದಲಿ ಮಾರ್ಗಗಳ ವ್ಯವಸ್ಥೆ ಹಾಸನ -ನೆಲಮಂಗಲ -ಬೆಂಗಳೂರು ಸಂಚಾರಿಸುವವರು ಮಾರ್ಗ ಬದಲಿಸಿದರೆ ತಪ್ಪುತ್ತೆ ಭಾರಿ ಟ್ರಾಫಿಕ್‌ ಜಾಮ್. ಹಾಸನ -ಕುಣಿಗಲ್ -ಕೆ‌ಎಂ ರಸ್ತೆ -ಮಾಗಡಿ -ತಾವರೆಕೆರೆ -ಬೆಂಗಳೂರು ಮಾಗಡಿ ರಸ್ತೆಯ ಸುಮನಹಳ್ಳಿ ಬಳಿಯ ಔಟರ್ ರಿಂಗ್ ರೋಡ್ ಮೂಲಕ ಬೆಂಗಳೂರಿನ ವಿವಿದೆಡೆಗೆ ಸಂಚಾರ ಮಾಡಬಹುದು. ವೀಕೆಂಡ್ ಆಗಿರೋದ್ರಿಂದ‌ ವಾಹನ ಸವಾರರು ಮಾರ್ಗ ಬದಲಾವಣೆ ಮಾಡೋದೆ ಒಳ್ಳೆದು. ಇಲ್ಲದಿದ್ದರೆ ಗಂಟೆಗಟ್ಟಲೆ ಹೆದ್ದಾರಿಯಲ್ಲಿ ಕಾಯುವ ಪರಿಸ್ಥಿತಿ ಬರುತ್ತದೆ.

ತುಮಕೂರು ಮಾರ್ಗವಾಗಿ ಬರುವ ವಾಹನಗಳು ನೈಸ್ ರಸ್ತೆಯ ಮೂಲಕ ಬೆಂಗಳೂರಿಗೆ ಸಂಚರಿಸಿದರೆ ಉತ್ತಮ. ನೆಲಮಂಗಲ -ಮಾದವಾರ -ನೈಸ್ ರಸ್ತೆ ಮೂಲಕ‌ ಬೆಂಗಳೂರಿನ ವಿವಿಧ ರಸ್ತೆಗಳಿಂದ ಸಂಪರ್ಕ ಪಡೆಯಬಹುದು. ಬದಲಿ ಮಾರ್ಗ ಅನುಸರಿಸುವ ಮೂಲಕ ಸಂಚಾರ ದಟ್ಟಣೆಯಿಂದ ದೂರ ಇರಬಹುದು. ಗಂಟೆ ಗಟ್ಟಲೆ‌ ಟ್ರಾಫಿಕ್ ಜಾಮ್ನಲ್ಲಿ ಸಿಲುಕುವ ಬದಲಿಗೆ ಮಾರ್ಗ ಬದಲಾವಣೆ ಅನಿವಾರ್ಯ.

ಇದನ್ನೂ ಓದಿ: Confession : ಅಭಿಜ್ಞಾನ ; ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ

Published On - 8:21 am, Sun, 26 December 21