ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ! ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ

ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ! ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ
ನಕಲಿ ನೋಟು

ಕಿಡಿಗೇಡಿಗಳು ಜೆರಾಕ್ಸ್ ಮಾಡಿದ 100 ರೂ. ನೋಟು ಕೊಟ್ಟು ಯಾಮಾರಿದ್ದಾರೆ. ಸಣ್ಣ ಹೋಟೆಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನ ನೀಡಿದ್ದಾರೆ.

TV9kannada Web Team

| Edited By: sandhya thejappa

Dec 26, 2021 | 8:46 AM

ಬೆಂಗಳೂರು: ನಗರದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಕಿಡಿಗೇಡಿಗಳು ಜೆರಾಕ್ಸ್ ನೋಟ್ ನೀಡಿ ಜನರಿಗೆ ಯಾಮಾರಿಸುತ್ತಿದ್ದಾರೆ. ಕಾಟನ್​ಪೇಟೆಯಲ್ಲಿ ಜೆರಾಕ್ಸ್ ಮಾಡಿದ ನೋಟು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯರು ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊರಗಿನಿಂದ ಬೆಂಗಳೂರಿಗೆ ಬಂದ ಕಿಡಿಗೇಡಿಗಳು ನೋಟನ್ನು ಜೆರಾಕ್ಸ್ ಮಾಡಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕಿಡಿಗೇಡಿಗಳು ಜೆರಾಕ್ಸ್ ಮಾಡಿದ 100 ರೂ. ನೋಟು ಕೊಟ್ಟು ಯಾಮಾರಿದ್ದಾರೆ. ಸಣ್ಣ ಹೋಟೆಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನ ನೀಡಿದ್ದಾರೆ. ಹೊರಗಿನಿಂದ ಬಂದು ಲಾಡ್ಜ್​ನಲ್ಲಿ ಉಳಿದುಕೊಂಡವರು ಈ ಕೃತ್ಯ ಎಸಗಿರಬುದು ಎಂಬ ಅನುಮಾನವಿದೆ. ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ಘಟನೆ ಸಂಬಂಧ ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಿಜಬಣ್ಣ ಬಯಲಾಗಬೇಕಿದೆ.

ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಸೆರೆ ಈ ಹಿಂದೆಯೂ ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ನಿಷೇಧಿತ ನೋಟು ಬದಲಾವಣೆ ಮಾಡುತ್ತೇವೆಂದು ಹೇಳಿ ಆರೋಪಿಗಳು ಮೋಸ ಮಾಡುತ್ತಿದ್ದರು. ನಿಷೇಧಿತ 1,000 ರೂ. ಮುಖಬೆಲೆಯ ನೋಟುಗಳ ಜೆರಾಕ್ಸ್ ಮಾಡಿ ವಂಚಿಸುತ್ತಿದ್ದರು. 5 ಕೋಟಿ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ

ಮೈಸೂರು: ಕುಡಿದ ಮತ್ತಿನಲ್ಲಿ ಅರ್ಧಕ್ಕೆ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ; ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟ ಸ್ಥಳೀಯರು

Confession : ಅಭಿಜ್ಞಾನ ; ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ

Follow us on

Related Stories

Most Read Stories

Click on your DTH Provider to Add TV9 Kannada