ಮೈಸೂರು: ಕುಡಿದ ಮತ್ತಿನಲ್ಲಿ ಅರ್ಧಕ್ಕೆ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ; ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟ ಸ್ಥಳೀಯರು

ರೋಗಿ ಕರೆದುಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಮಧ್ಯೆ ಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸುತ್ತಿದ್ದು, ಅಲ್ಲಲ್ಲಿ ಕುಡಿದಿದ್ದಾನೆ ಎಂದು ಆ್ಯಂಬುಲೆನ್ಸ್​ನಲ್ಲಿದ ರೋಗಿಯ ಪೋಷಕರು ತಿಳಿಸಿದ್ದಾರೆ. ಹುಣಸೂರು ಬಳಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಚಾಲಕ ನಿಲ್ಲಿಸಿದ್ದು, ಇದನ್ನು ಕಂಡ  ಸ್ಥಳೀಯರು ತಕ್ಷಣ ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಮೈಸೂರು: ಕುಡಿದ ಮತ್ತಿನಲ್ಲಿ ಅರ್ಧಕ್ಕೆ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ; ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟ ಸ್ಥಳೀಯರು
ಆ್ಯಂಬುಲೆನ್ಸ್ ಚಾಲಕ
Follow us
TV9 Web
| Updated By: preethi shettigar

Updated on:Dec 26, 2021 | 9:16 AM

ಮೈಸೂರು: ಕುಡಿದ ಮತ್ತಿನಲ್ಲಿ ಚಾಲಕ ಅರ್ಧಕ್ಕೆ ಆ್ಯಂಬುಲೆನ್ಸ್(Ambulance) ನಿಲ್ಲಿಸಿದ ಘಟನೆ ಮೈಸೂರಿನ ಹುಣಸೂರು ನಗರದಲ್ಲಿ ನಡೆದಿದೆ. ಹಾಸನದ ಸಿದ್ದಾಪುರ ಗ್ರಾಮದ ತೀರ್ಥನಂದ (30) ಮನೆಯಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಹೀಗಾಗಿ ಮಡಿಕೆರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದರು. ಈ ವೇಳೆ ತೀರ್ಥನಂದರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂಬ ವಿಷಯ ತಿಳಿದಿದೆ. ಹೀಗಾಗಿ ಬೆಂಗಳೂರು ನಿಮ್ಹಾನ್ಸ್​ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು (Doctor) ಸೂಚಿಸಿದ್ದಾರೆ. ಅದರಂತೆ ಮಡಿಕೇರಿಯಿಂದ ಬೆಂಗಳೂರಿಗೆ ಆ್ಯಂಬುಲೆನ್ಸ್​ನಲ್ಲಿ ತೆರಳುತ್ತಿದ್ದರು. ಆದರೆ ಆ್ಯಂಬುಲೆನ್ಸ್ ಚಾಲಕ ಕುಡಿದು ದಾರಿಯಲ್ಲಿಯೇ ಮಧ್ಯ ನಿಲ್ಲಿಸಿದ್ದಾನೆ.

ರೋಗಿ ಕರೆದುಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಮಧ್ಯೆ ಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸುತ್ತಿದ್ದು, ಅಲ್ಲಲ್ಲಿ ಕುಡಿದಿದ್ದಾನೆ ಎಂದು ಆ್ಯಂಬುಲೆನ್ಸ್​ನಲ್ಲಿದ ರೋಗಿಯ ಪೋಷಕರು ತಿಳಿಸಿದ್ದಾರೆ. ಹುಣಸೂರು ಬಳಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಚಾಲಕ ನಿಲ್ಲಿಸಿದ್ದು, ಇದನ್ನು ಕಂಡ  ಸ್ಥಳೀಯರು ತಕ್ಷಣ ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಸದ್ಯ ರೋಗಿಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ರೋಗಿಯ ಪೋಷಕರು ಕರೆ ಮಾಡಿದ್ದರು. ಆದರೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಕ್ರಮಕೈಗೊಂಡಿಲ್ಲ. ಸರಿಯಾಗಿ ಸ್ಪಂದಿಸದ ಪೊಲೀಸರ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಆ್ಯಂಬುಲೆನ್ಸ್ ಚಾಲಕನಿಗೆ ಮೆಡಿಕಲ್ ಮಾಡಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಾಗರದಲ್ಲಿ ಸೂಕ್ತ ಆ್ಯಂಬುಲೆನ್ಸ್ ಇಲ್ಲದೆ ತುಂಬು ಗರ್ಭಿಣಿ, ಗಾಯಾಳುಗಳು ಪರದಾಟ

ರಾಯಚೂರಿನಲ್ಲಿ ವಾಹನಕ್ಕೆ ಸೈಡ್ ನೀಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ! ನಾಲ್ವರ ವಿರುದ್ಧ ಎಫ್ಐಆರ್ ದಾಖಲು

Published On - 8:16 am, Sun, 26 December 21