Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ವಾಹನಕ್ಕೆ ಸೈಡ್ ನೀಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ! ನಾಲ್ವರ ವಿರುದ್ಧ ಎಫ್ಐಆರ್ ದಾಖಲು

ಆರೋಪಿ ಮೆಹಬೂಬಾ ಬಸ್ ಕಂಡಕ್ಟರ್ ನಿಂಗಪ್ಪ ಎದೆಗೆ ಒದ್ದು ಹಲ್ಲೆ ನಡೆಸಿದ್ದ. ಶಮುದ್ದೀನ್ ಹಾಗೂ ಇತರರು ಚಾಲಕ ಸಂಗಮೇಶನನ್ನು ಎಳೆದಾಡಿ ಹಲ್ಲೆ ನಡೆಸಿದ್ದರು.

ರಾಯಚೂರಿನಲ್ಲಿ ವಾಹನಕ್ಕೆ ಸೈಡ್ ನೀಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ! ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ
Follow us
TV9 Web
| Updated By: sandhya thejappa

Updated on: Dec 25, 2021 | 10:25 AM

ರಾಯಚೂರು: ತಮ್ಮ ವಾಹನಕ್ಕೆ ಸೈಡ್ ನೀಡದ ಹಿನ್ನೆಲೆ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಸ್ ಚಾಲಕ, ನಿರ್ವಾಹಕನನ್ನ ಆರೋಪಿಗಳು ಮನಸೋ ಇಚ್ಛೆ ಥಳಿಸಿದ್ದರು. ಚಾಲಕ ನಿಂಗಪ್ಪ ದೂರಿನನ್ವಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಮೆಹಬೂಬಾ, ಶಮೂದ್ದೀನ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆರೋಪಿ ಮೆಹಬೂಬಾ ಬಸ್ ಕಂಡಕ್ಟರ್ ನಿಂಗಪ್ಪ ಎದೆಗೆ ಒದ್ದು ಹಲ್ಲೆ ನಡೆಸಿದ್ದ. ಶಮುದ್ದೀನ್ ಹಾಗೂ ಇತರರು ಚಾಲಕ ಸಂಗಮೇಶನನ್ನು ಎಳೆದಾಡಿ ಹಲ್ಲೆ ನಡೆಸಿದ್ದರು. ಇದೇ ಡಿಸೆಂಬರ್ 23 ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುರಗುಂಟಾ ಗ್ರಾಮದ ಬಳಿ ಈ ಘಟನೆ ನಡೆದಿತ್ತು. ಸದ್ಯ ರಾಯಚೂರು ಜಿಲ್ಲೆಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಸ್ ಧಾರವಾಡದಿಂದ ಗುರಗುಂಟಾ ಮಾರ್ಗವಾಗಿ ಯಾದಗಿರಿಗೆ ಹೊರಟಿತ್ತು. ಕಲ್ಯಾಣ ಕರ್ನಾಟಕ ಸಾರಿಗೆಯ ಯಾದಗಿರಿ ಡಿಪೋಗೆ ಸೇರಿದ್ದ ಬಸ್, ಬೊಲೆರೊ ವಾಹನಕ್ಕೆ ಸೈಡ್ ಕೊಡದಿದ್ದಕ್ಕೆ ಬಸ್ ಚಾಲಕ ಸಂಗಮೇಶ್ ಹಾಗೂ ನಿರ್ವಾಹಕ ಲಿಂಗಣ್ಣ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಕಿಡಿಗೇಡಿಗಳು ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಗಾಯಾಳುಗಳ ನರಳಾಟ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಸಿಗದೆ ಆಸ್ಪತ್ರೆಯ ಬಾಗಿಲಲ್ಲೇ ನರಳಾಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್​‌ನಲ್ಲಿ ಸೆರೆ ಹಿಡಿದಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುಲು ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಗಾಯಾಳುಗಳು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯ ಹೊರಗೆ ಒದ್ದಾಡಿದ್ದಾರೆ.

ಇದನ್ನೂ ಓದಿ

ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು – ಮಿಡಿಗೇಶಿ ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಭಾಸ್​ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಚಿಂತೆ; ‘ರಾಧೆ ಶ್ಯಾಮ್​’ ಚಿತ್ರಕ್ಕೆ ಕೈ ಕೊಡಬಹುದಾ ಗ್ರಾಫಿಕ್ಸ್​?

ಕೋರ್ಟ್ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ
ಕೋರ್ಟ್ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ
ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು