ಪ್ರಭಾಸ್​ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಚಿಂತೆ; ‘ರಾಧೆ ಶ್ಯಾಮ್​’ ಚಿತ್ರಕ್ಕೆ ಕೈ ಕೊಡಬಹುದಾ ಗ್ರಾಫಿಕ್ಸ್​?

ಪ್ರಭಾಸ್​ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಚಿಂತೆ; ‘ರಾಧೆ ಶ್ಯಾಮ್​’ ಚಿತ್ರಕ್ಕೆ ಕೈ ಕೊಡಬಹುದಾ ಗ್ರಾಫಿಕ್ಸ್​?
ಪ್ರಭಾಸ್​

ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಚಿತ್ರಕ್ಕೆ ರಾಧಾಕೃಷ್ಣ ಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. 2022ರ ಜ.14ರಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ.

TV9kannada Web Team

| Edited By: Madan Kumar

Dec 25, 2021 | 9:24 AM

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಭಿನಯದ ‘ರಾಧೆ ಶ್ಯಾಮ್​’ ಸಿನಿಮಾ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ನಿಂದಾಗಿ ಜನರಲ್ಲಿ ಕೌತುಕ ಸೃಷ್ಟಿ ಆಗಿದೆ. ಹಲವು ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ ಎಂಬುದಕ್ಕೆ ಈ ಟ್ರೇಲರ್​ ಸಾಕ್ಷಿ ಒದಗಿಸಿದೆ. ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ಈಗಾಗಲೇ ಹೊರಬಂದಿರುವ ಹಾಡುಗಳಿಗೂ ಜನಮೆಚ್ಚುಗೆ ಸಿಕ್ಕಿದೆ. ಆದರೆ ಟ್ರೇಲರ್​ ಬಿಡುಗಡೆ ಆದ ಬಳಿಕ ಪ್ರಭಾಸ್​ ಅಭಿಮಾನಿಗಳಿಗೆ ಹೊಸ ಚಿಂತೆ ಶುರುವಾಗಿದೆ. ಗ್ರಾಫಿಕ್ಸ್ ಕಾರಣದಿಂದ ​ಈ ಸಿನಿಮಾದ ಚಾರ್ಮ್​ ಹಾಳಾಗಬಹುದು ಎಂದು ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ.

‘ರಾಧೆ ಶ್ಯಾಮ್​’ ಟ್ರೇಲರ್​ನಲ್ಲಿ ಕೆಲವು ದೃಶ್ಯಗಳನ್ನು ನೋಡಿ ಅಭಿಮಾನಿಗಳು ಇಂಪ್ರೆಸ್​ ಆಗಿದ್ದಾರೆ. ಆದರೆ ವಿಎಫ್​ಎಕ್ಸ್​ ಬಳಸಿರುವ ದೃಶ್ಯಗಳು ಯಾಕೋ ಜನರಿಗೆ ಇಷ್ಟ ಆದಂತಿಲ್ಲ. ಹಡಗು ಮುಳುಗುವ ದೃಶ್ಯ ಅಷ್ಟೇನೂ ಚೆನ್ನಾಗಿ ಮೂಡಿಬಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ಇಡೀ ಸಿನಿಮಾ ಅಂದ ಕೆಡಬಹುದು ಎಂದು ಫ್ಯಾನ್ಸ್​ ಚಿಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

‘ಬಾಹುಬಲಿ’ ಸಿನಿಮಾದ ಯಶಸ್ಸಿನ ನಂತರ ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ಬೇರೆ ಬೇರೆ ಭಾಷೆಗೆ ಡಬ್​ ಆಗಿ ದೇಶಾದ್ಯಂತ ಬಿಡುಗಡೆ ಆಗುತ್ತವೆ. ‘ರಾಧೆ ಶ್ಯಾಮ್​’ ಕೂಡ ಅದೇ ಹಾದಿ ಹಿಡಿದಿದೆ. ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಗೆ ಈ ಚಿತ್ರ ಡಬ್​ ಆಗಿದೆ. ಎಲ್ಲ ಭಾಷೆಯಲ್ಲೂ ಟ್ರೇಲರ್​ ಬಿಡುಗಡೆ ಮಾಡಲಾಗಿದೆ.

ರಾಧಾಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 2022ರ ಜ.14ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಆ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಪ್ರಭಾಸ್​ ಅಭಿಮಾನಿಗಳಿಗೆ ‘ರಾಧೆ ಶ್ಯಾಮ್​’ ಸಿನಿಮಾ ಮನರಂಜನೆ ನೀಡಲಿದೆ. ಈ ಚಿತ್ರದ ಕಥೆಯ ಬಗ್ಗೆ ಸಿನಿಪ್ರಿಯರಿಗೆ ಸಾಕಷ್ಟು ನಿರೀಕ್ಷೆ ಇದೆ. ಬಾಹುಬಲಿ ಬಳಿಕ ಆ್ಯಕ್ಷನ್​-ಹೀರೋ ಇಮೇಜ್​ಗೆ ಹೆಚ್ಚು ಒತ್ತುಕೊಟ್ಟಿದ್ದ ಪ್ರಭಾಸ್​ ಅವರು ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಸಂಪೂರ್ಣ ಲವರ್​ಬಾಯ್​ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ಬೇರೆಯದೇ ಫ್ಲೇವರ್​ನಲ್ಲಿ ಮೂಡಿಬಂದಿದೆ ಎಂಬ ಮಾತು ಕೇಳಿಬಂದಿದೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಇದಲ್ಲದೇ, ‘ಆದಿಪುರುಷ್​’ ಮತ್ತು ‘ಸಲಾರ್​’ ಸಿನಿಮಾ ಕೆಲಸಗಳಲ್ಲಿ ಪ್ರಭಾಸ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

150 ಕೋಟಿ ರೂ. ಸಂಭಾವನೆ ಪಡೆದ ಪ್ರಭಾಸ್​; ಇಷ್ಟು ಹಣಕ್ಕೆ ಅವರು ಕೆಲಸ ಮಾಡೋದು ಎಷ್ಟು ದಿನ?

‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ

Follow us on

Related Stories

Most Read Stories

Click on your DTH Provider to Add TV9 Kannada