150 ಕೋಟಿ ರೂ. ಸಂಭಾವನೆ ಪಡೆದ ಪ್ರಭಾಸ್​; ಇಷ್ಟು ಹಣಕ್ಕೆ ಅವರು ಕೆಲಸ ಮಾಡೋದು ಎಷ್ಟು ದಿನ?

Prabhas Remuneration: ಪ್ರಭಾಸ್​ ಅವರ ಕಾಲ್​ಶೀಟ್​ಗಾಗಿ ದೊಡ್ಡ ದೊಡ್ಡ ನಿರ್ಮಾಪಕರು ಕಾಯುತ್ತಿದ್ದಾರೆ. ‘ಆದಿಪುರುಷ್​’ ಚಿತ್ರಕ್ಕಾಗಿ ಪ್ರಭಾಸ್​ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

150 ಕೋಟಿ ರೂ. ಸಂಭಾವನೆ ಪಡೆದ ಪ್ರಭಾಸ್​; ಇಷ್ಟು ಹಣಕ್ಕೆ ಅವರು ಕೆಲಸ ಮಾಡೋದು ಎಷ್ಟು ದಿನ?
ಪ್ರಭಾಸ್​

ನಟ ಪ್ರಭಾಸ್ (Prabhas)​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಾವ ಪರಿ ಬೇಡಿಕೆ ಇದೆ ಎಂಬುದನ್ನು ಹೊಸದಾಗಿ ವಿವರಿಸಬೇಕಿಲ್ಲ. ಅವರು ಈಗ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಸ್ತುತ ಅವರು ನಟಿಸುತ್ತಿರುವ ‘ಆದಿಪುರುಷ್​’ ಚಿತ್ರ (Adipurush Movie) ಸಖತ್​ ನಿರೀಕ್ಷೆ ಮೂಡಿಸಿದೆ. ಅಚ್ಚರಿ ಎಂದರೆ ಈ ಸಿನಿಮಾದಲ್ಲಿ ನಟಿಸಲು ಪ್ರಭಾಸ್​ ಪಡೆದಿದ್ದಾರೆ ಎನ್ನಲಾದ ಸಂಭಾವನೆ (Prabhas Remuneration) ಮೊತ್ತದ ಬಗ್ಗೆ ಒಂದು ಸುದ್ದಿ ಹರಡಿದೆ. ಈ ಚಿತ್ರಕ್ಕಾಗಿ ಅವರು ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದವರಾಗಲೀ, ಪಭಾಸ್​ ಆಗಲಿ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ‘ಆದಿಪುರುಷ್​’ ಚಿತ್ರಕ್ಕೆ ಓಂ ರಾವುತ್​ ನಿರ್ದೇಶನ ಮಾಡುತ್ತಿದ್ದಾರೆ. ರಾಮನ ಪಾತ್ರದಲ್ಲಿ ಪ್ರಭಾಸ್​ ನಟಿಸುತ್ತಿದ್ದು, ರಾವಣನಾಗಿ ಸೈಫ್​ ಅಲಿ ಖಾನ್​ ಅಭಿನಯಿಸುತ್ತಿದ್ದಾರೆ.

150 ಕೋಟಿ ರೂಪಾಯಿ ಸಂಭಾವನೆ ಎಂದರೆ ಸಣ್ಣ ಮೊತ್ತವಲ್ಲ. ಇಷ್ಟು ದೊಡ್ಡ ಸಂಭಾವನೆ ಪಡೆದಿರುವ ಪ್ರಭಾಸ್ ಅವರು ಈ ಚಿತ್ರಕ್ಕೆ 60 ದಿನಗಳ ಕಾಲ್​ಶೀಟ್​ ನೀಡಿದ್ದಾರೆ ಎನ್ನಲಾಗಿದೆ. ಈ ಸಮಯದೊಳಗೆ ಚಿತ್ರತಂಡದವರು ಶೂಟಿಂಗ್​ ಮತ್ತು ಡಬ್ಬಿಂಗ್​ ಕೆಲಸಗಳನ್ನು ಮುಗಿಸಬೇಕು. ‘ಬಾಹುಬಲಿ’ ಯಶಸ್ಸಿನ ನಂತರ ಪ್ರಭಾಸ್​ ನಟಿಸಿದ ‘ಸಾಹೋ’ ಚಿತ್ರ ನಿರೀಕ್ಷಿಸಿದಷ್ಟು ಕಲೆಕ್ಷನ್​ ಮಾಡಲಿಲ್ಲ. ಹಾಗಂತ ಪ್ರಭಾಸ್​ ಅವರಿಗೆ ಇದ್ದ ಬೇಡಿಕೆ ಕಮ್ಮಿ ಆಗಿಲ್ಲ. ಪ್ರಶಾಂತ್​ ನೀಲ್​ ನಿರ್ದೇಶಿಸುತ್ತಿರುವ ‘ಸಲಾರ್​’ ಸಿನಿಮಾದಲ್ಲಿ ಪ್ರಭಾಸ್​ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಜೊತೆ ಅವರು ಅಭಿನಯಿಸಿರುವ ‘ರಾಧೆ ಶ್ಯಾಮ್​’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, 2022ರ ಜ.14ರಂದು ವಿಶ್ವಾದ್ಯಂತ ತೆರೆಕಾಣಲಿದೆ.

ಒಂದು ಕೋಟಿ ರೂ. ದೇಣಿಗೆ ನೀಡಿದ ಪ್ರಭಾಸ್​!

ಪ್ರವಾಹದಿಂದಾಗಿ ಆಂಧ್ರ ಪ್ರದೇಶದಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಅದಕ್ಕಾಗಿ ಟಾಲಿವುಡ್​ ಸ್ಟಾರ್​ ನಟರು ಮರುಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಕೈಲಾಸ ಸಹಾಯ ಮಾಡುತ್ತಿದ್ದಾರೆ. ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಚಿರಂಜೀವಿ ಮುಂತಾದ ನಟರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ವಿಶೇಷ ಎಂದರೆ, ಈ ಎಲ್ಲ ಹೀರೋಗಳಿಗಿಂತಲೂ ನಟ ಪ್ರಭಾಸ್​ ಅವರು ಹೆಚ್ಚು ಹಣ ನೀಡಿದ್ದಾರೆ. ಬರೋಬ್ಬರಿ 1 ಕೋಟಿ ರೂ. ಹಣವನ್ನು ಅವರು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ​!

‘ಮೆಗಾ ಸ್ಟಾರ್​’ ಚಿರಂಜೀವಿ, ಮಹೇಶ್​ ಬಾಬು, ಜ್ಯೂ. ಎನ್​ಟಿಆರ್​, ರಾಮ್​ ಚರಣ್​ ಅವರು ತಲಾ 25 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅವರೆಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರಭಾಸ್​ ಅವರು 1 ಕೋಟಿ ರೂ. ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ

Published On - 9:55 am, Wed, 8 December 21

Click on your DTH Provider to Add TV9 Kannada