AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಕ್ಸಿಡೆಂಟ್​ ಬಳಿಕ ಥಿಯೇಟರ್​ನಲ್ಲಿ ಸೋತು ಓಟಿಟಿಯಲ್ಲಿ ದಾಖಲೆ ಮಾಡಿದ ಸಾಯಿ ಧರಮ್​ ತೇಜ್​ ಚಿತ್ರ ‘ರಿಪಬ್ಲಿಕ್​’

Republic Movie | Zee5: ನ.26ರಂದು ಜೀ5 ಮೂಲಕ ‘ರಿಪಬ್ಲಿಕ್​’ ಸಿನಿಮಾ ಪ್ರಸಾರ ಆರಂಭಿಸಿತು. ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ಹಾಗಾಗಿ ದಾಖಲೆ ಪ್ರಮಾಣದಲ್ಲಿ ‘ರಿಪಬ್ಲಿಕ್​’ ವೀಕ್ಷಣೆ ಕಂಡಿದೆ.

ಆ್ಯಕ್ಸಿಡೆಂಟ್​ ಬಳಿಕ ಥಿಯೇಟರ್​ನಲ್ಲಿ ಸೋತು ಓಟಿಟಿಯಲ್ಲಿ ದಾಖಲೆ ಮಾಡಿದ ಸಾಯಿ ಧರಮ್​ ತೇಜ್​ ಚಿತ್ರ ‘ರಿಪಬ್ಲಿಕ್​’
ಸಾಯಿ ಧರಮ್ ತೇಜ್
TV9 Web
| Updated By: ಮದನ್​ ಕುಮಾರ್​|

Updated on: Dec 08, 2021 | 9:13 AM

Share

ಟಾಲಿವುಡ್ (Tollywood)​ ನಟ ಸಾಯಿ ಧರಮ್​ ತೇಜ್​ (Sai Dharam Tej) ಅವರು ಬಹಳ ನಿರೀಕ್ಷೆ ಇಟ್ಟುಕೊಂಡು ‘ರಿಪಬ್ಲಿಕ್​’ ಸಿನಿಮಾ ಮಾಡಿದ್ದರು. ಆದರೆ ಆ ಚಿತ್ರ ಬಿಡುಗಡೆ ಆಗುವುದಕ್ಕಿಂತ ಮುನ್ನವೇ ಅವರಿಗೆ ಆ್ಯಕ್ಸಿಡೆಂಟ್​ ಆಗಿತ್ತು. ಸೆಪ್ಟೆಂಬರ್​ 10ರಂದು ಅವರಿಗೆ ಹೈದರಾಬಾದ್​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಲವು ದಿನಗಳ ಕಾಲ ಅವರ ಕೋಮಾ ಸ್ಥಿತಿಯಲ್ಲಿ ಇದ್ದರು. ಸಾಯಿ ಧರಮ್​ ತೇಜ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗಲೇ ಅವರ ‘ರಿಪಬ್ಲಿಕ್​’ ಸಿನಿಮಾ (Republic Movie) ಬಿಡುಗಡೆ ಆಗಿತ್ತು. ಆದರೆ ಪ್ರೇಕ್ಷಕರಿಂದ ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದು ಅವರ ಅಭಿಮಾನಿಗಳಿ ಸಖತ್​ ಬೇಸರ ಮೂಡಿಸಿತ್ತು. ಆದರೆ ಈಗ ಆ ಬೇಸರವನ್ನು ಮರೆಸುವಂತಹ ಸುದ್ದಿ ಕೇಳಿಬಂದಿದೆ. ಜೀ5 (Zee5) ಮೂಲಕ ಬಿಡುಗಡೆ ಆಗಿದ್ದ ಈ ಚಿತ್ರ ಒಂದು ಸಾಧನೆ ಮಾಡಿದೆ. ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ (OTT platform) ಸಾಯಿ ಧರಮ್​ ತೇಜ್​ ಅವರಿಗೆ ಗೆಲುವು ಸಿಕ್ಕಿದೆ. 

ನ.26ರಂದು ಜೀ5 ಮೂಲಕ ‘ರಿಪಬ್ಲಿಕ್​’ ಸಿನಿಮಾ ಪ್ರಸಾರ ಆರಂಭಿಸಿತು. ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಿದ್ದವರೆಲ್ಲರೂ ಮನೆಯಲ್ಲೇ ಕುಳಿತು ಈ ಸಿನಿಮಾ ವೀಕ್ಷಿಸಿದ್ದಾರೆ. ಹಾಗಾಗಿ ದಾಖಲೆ ಪ್ರಮಾಣದಲ್ಲಿ ‘ರಿಪಬ್ಲಿಕ್​’ ವೀಕ್ಷಣೆ ಕಂಡಿದೆ. 7 ದಿನಗಳಲ್ಲಿ ಈ ಸಿನಿಮಾ 12 ಕೋಟಿ ನಿಮಿಷಗಳಷ್ಟು ವೀಕ್ಷಣೆ ಆಗಿದೆ. ತೆಲುಗು ಚಿತ್ರರಂಗದಲ್ಲಿ ಇದೊಂದು ದಾಖಲೆ ಎಂದು ಹೇಳಲಾಗುತ್ತಿದೆ.

‘ರಿಪಬ್ಲಿಕ್​’ ಸಿನಿಮಾದಲ್ಲಿ ಐಎಎಸ್​ ಅಧಿಕಾರಿಯ ಕಥೆ ಇದೆ. ಹಾಗಾಗಿ ಕರುನಾಡಿನ ನಿಷ್ಠಾವಂತ ಐಎಎಸ್​ ಅಧಿಕಾರಿ, ದಿವಗಂತ ಡಿಕೆ ರವಿ ಅವರಿಗೆ ಈ ಸಿನಿಮಾತಂಡದಿಂದ ಒಂದು ವಿಡಿಯೋ ಮೂಲಕ ಗೌರವ ಸಲ್ಲಿಸಲಾಗಿತ್ತು. ಓಟಿಟಿಯಲ್ಲಿ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನ ಜೀ5 ಮೂಲಕ ಉತ್ತಮವಾಗಿ ಪ್ರಚಾರ ಮಾಡಲಾಯಿತು. ಎಲ್ಲದರ ಪರಿಣಾಮವಾಗಿ ಕೇವಲ 7 ದಿನದಲ್ಲಿ 12 ಕೋಟಿ ನಿಮಿಷಗಳಷ್ಟು ವೀಕ್ಷಣೆ ಕಾಣುವ ಮೂಲಕ ಸಾಯಿ ಧರಮ್​ ಪಾಲಿಗೆ ಈ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿದೆ.

ಬೈಕ್​ ಅಪಘಾತದ ಬಳಿಕ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಸಾಯಿ ಧರಮ್​ ತೇಜ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅ.15ರಂದು ಸಾಯಿ ಧರಮ್​ ತೇಜ್​ ಜನ್ಮದಿನ. ಆ ಪ್ರಯುಕ್ತ ಅವರ ಮಾವ ‘ಮೆಗಾ ಸ್ಟಾರ್​’ ಚಿರಂಜೀವಿ ವಿಶ್​ ಮಾಡಿದ್ದರು. ‘ಈ ಬಾರಿ ವಿಜಯ ದಶಮಿಯ ವಿಶೇಷ ಏನೆಂದರೆ, ಸಾಯಿ ಧರಮ್​ ತೇಜ್​ ಸಂಪೂರ್ಣ ಗುಣಮುಖರಾಗಿ ಮನೆಗೆ ಬರುತ್ತಿದ್ದಾರೆ. ಭೀಕರ ಬೈಕ್​ ಅಪಘಾತದಲ್ಲಿ ಅವರು ಬದುಕಿ ಬಂದಿದ್ದಾರೆ. ಇದು ನಮ್ಮೆಲ್ಲರಿಗೂ ಖುಷಿ ನೀಡಿದೆ. ಅವರಿಗೆ ಇದು ಪುನರ್ಜನ್ಮ’ ಎಂದು ಚಿರಂಜೀವಿ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ:

ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್​ ಸಿರೀಸ್

ಒಟಿಟಿಯಲ್ಲಿ ರಿಲೀಸ್​ ಆದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಬರುತ್ತಿದೆ ಉತ್ತಮ ಪ್ರತಿಕ್ರಿಯೆ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!