ಮೈಸೂರಿನ ಕಾರು ಶೋ ರೂಮ್​ನಲ್ಲಿ ಅಗ್ನಿ ಅವಘಡ! ಕಾರುಗಳು ಸುಟ್ಟು ಭಸ್ಮ

ಮೈಸೂರಿನ ಕಾರು ಶೋ ರೂಮ್​ನಲ್ಲಿ ಅಗ್ನಿ ಅವಘಡ! ಕಾರುಗಳು ಸುಟ್ಟು ಭಸ್ಮ
ಅದ್ವೈತ್ ಹುಂಡೈ ಶೋ ರೂಮ್

ಶೋ ರೂಮ್​ನಲ್ಲಿದ್ದ ಪೀಠೋಪಕರಣ ಹಾಗೂ ಯಂತ್ರಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಬೆಂಕಿಗೆ ಕಾರಣವೂ ತಿಳಿದುಬಂದಿಲ್ಲ.

TV9kannada Web Team

| Edited By: sandhya thejappa

Dec 26, 2021 | 12:45 PM

ಮೈಸೂರು: ಜೆಎಲ್ಬಿ ರಸ್ತೆಯಲ್ಲಿರುವ ಅದ್ವೈತ್ ಹುಂಡೈ ಶೋ ರೂಮ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಶೋ ರೂಮ್ನಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಕಾರುಗಳಲ್ಲಿ ಎರಡು ಕಾರುಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಶೋ ರೂಮ್​ನಲ್ಲಿದ್ದ ಪೀಠೋಪಕರಣ ಹಾಗೂ ಯಂತ್ರಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಬೆಂಕಿಗೆ ಕಾರಣವೂ ತಿಳಿದುಬಂದಿಲ್ಲ.

ಬೆಂಗಳೂರಿನ ಚಾಮರಾಜಪೇಟೆಯ ಲಹರಿ ಮ್ಯೂಸಿಕ್ ಮತ್ತು ಡ್ಯಾನ್ಸ್ ಇನ್ಸ್ಟಿಟ್ಯೂಟ್​ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. 3 ಗಂಟೆ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದೆ.

ಟ್ರಾನ್ಸ್​ಫಾರ್ಮರ್​ನಲ್ಲಿ ಕಾಣಿಸಿಕೊಂಡ ಬೆಂಕಿ ದಾವಣಗೆರೆ: ಹೆಕೆಆರ್ ಸರ್ಕಲ್​ನಲ್ಲಿರುವ ವಿದ್ಯುತ್ ಟ್ರಾನ್ಸ್​ಫಾರ್ಮರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಟ್ರಾನ್ಸ್​ಫಾರ್ಮರ್​ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ಬೆಂಕಿ ನಂದಿಸಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟುದಲ್ಲಿ ಸುಟ್ಟ ಭಸ್ಮವಾಗಿದೆ. ಕೆಲ ಹೊತ್ತು ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ

ರಾತ್ರೋರಾತ್ರಿ ಬೃಹತ್ ಮರಗಳು ಮಂಗಮಾಯ; ಕಡಿದು ಬೋಳಾದ ಮರಕ್ಕೆ ಶ್ರದ್ಧಾಂಜಲಿ, ತಪ್ಪಿತಸ್ಥರ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ

ಹಾಸಿಗೆ ಹಿಡಿಯುವಂತೆ ಮಾಡಿದ ಹಿಟ್ ಅಂಡ್ ರನ್ ಕೇಸ್; ಆಸ್ಪತ್ರೆಗೆ ಹಣ ಕಟ್ಟಲಾಗದೇ ಕಣ್ಣೀರು ಹಾಕಿದ ವಿಶೇಷಚೇತನ ಮಹಿಳೆ

Follow us on

Related Stories

Most Read Stories

Click on your DTH Provider to Add TV9 Kannada