ಬೆಂಗಳೂರು: ಕುಖ್ಯಾತ ರಾಂಜಿನಗರ ಗ್ಯಾಂಗ್ನ 11 ಸದಸ್ಯರ ಬಂಧನ ಮಾಡಲಾಗಿದೆ. ಬೆಂಗಳೂರಿನ ಮಾರತ್ತಹಳ್ಳಿ ಠಾಣೆ ಪೊಲೀಸರಿಂದ ಬಂಧಿಸಲಾಗಿದೆ. ಮುರಳಿ, ಗೋಪಾಲ, ಮೂರ್ತಿ, ಸೆಂದಿಲ್, ರಜನಿಕಾಂತ್, ಮುರುಘಾನಂದನ್, ವೆಂಕಟೇಶ್, ಸುಬ್ರಮಣಿ, ಶಿವಕುಮಾರ್, ಸುಂದರ್ ರಾಜನ್, ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವಾಸಿತಾಣದಲ್ಲಿ ಕಳ್ಳತನ ಮಾಡುತ್ತಿದ್ದ ರಾಂಜಿನಗರ ಗ್ಯಾಂಗ್, ದೇಶಾದ್ಯಂತ ಸಂಚಾರ ಮಾಡುತ್ತಲೇ ಕಳವುಮಾಡ್ತಿದ್ದ ಗ್ಯಾಂಗ್ ಸೆರೆಯಾಗಿದೆ.
ಕಾರು ಮಾಲೀಕರು ಮತ್ತು ಚಾಲಕರ ಗಮನ ಬೇರೆಡೆ ಸೆಳೆದು ಅಪರಾಧ ಕೃತ್ಯ ಎಸಗಲಾಗುತ್ತಿತ್ತು. ಕಾರಿನ ಗ್ಲಾಸ್ ಒಡೆದು ಕಳವು ಮಾಡಲಾಗುತ್ತಿತ್ತು. ಲ್ಯಾಪ್ಟಾಪ್, ಕ್ಯಾಮರಾ, ಮ್ಯೂಸಿಕ್ ಸಿಸ್ಟಂ ಕದಿಯುತ್ತಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. 7 ಲ್ಯಾಪ್ಟಾಪ್, ಆಪಲ್ ಐಪಾಡ್, ಕ್ಯಾಮರಾ, ಹಣ ಜಪ್ತಿ ಮಾಡಲಾಗಿದೆ. ಬಂಧಿತರಿಂದ ಒಟ್ಟು ₹7 ಲಕ್ಷ ಮೌಲ್ಯದ ಕಳವು ಮಾಲು ಜಪ್ತಿ ಮಾಡಲಾಗಿದೆ.
ಗ್ರಾಮಸ್ಥರ ಮೇಲೆ ಹಲ್ಲೆ ಯತ್ನ: ಆರೋಪಿಗಳ ಬಂಧನ ನವರತ್ನ ಅಗ್ರಹಾರದಲ್ಲಿ ಗ್ರಾಮಸ್ಥರ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಚಿಕ್ಕಜಾಲ ಪೊಲೀಸರಿಂದ 9 ಆರೋಪಿಗಳ ಬಂಧನ ಮಾಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರ ಗ್ರಾಮದಲ್ಲಿ ಡಿ.22ರ ರಾತ್ರಿ ರೌಡಿಗಳಂತೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳು, ಲಾಂಗ್, ಮಚ್ಚುಗಳಿಂದ ಯುವಕರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದರು. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಯುವಕರು ಪಾರಾಗಿದ್ದರು. ಜಮೀನು ವಿಚಾರವಾಗಿ ಗ್ರಾಮಸ್ಥರನ್ನು ಬೆದರಿಸಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಅಂಬರ್‌ಗ್ರೀಸ್ ಮಾರಾಟ: 10 ಕೋಟಿ ರೂ. ಮೌಲ್ಯದ ಅಂಬರ್‌ಗ್ರೀಸ್ ಜಪ್ತಿ ಅಕ್ರಮವಾಗಿ ಅಂಬರ್‌ಗ್ರೀಸ್ ಮಾರಾಟ ಮಾಡ್ತಿದ್ದ ಕೇಸ್ ಸಂಬಂಧಿಸಿ ಮತ್ತೆ 10 ಕೋಟಿ ರೂ. ಮೌಲ್ಯದ ಅಂಬರ್‌ಗ್ರೀಸ್ ಜಪ್ತಿ ಮಾಡಲಾಗಿದೆ. ವಿಜಯನಗರ ಪೊಲೀಸರಿಂದ ಆರೋಪಿ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಗಣಪತಿ ಎಂಬುವವರ ಮನೆಯಲ್ಲಿ ಜಪ್ತಿ ಮಾಡಲಾಗಿದೆ. ಡಿ.22 ರಂದು ಹೊಸಪೇಟೆಯಲ್ಲಿ ಮಾರಾಟ ವೇಳೆ ಜಪ್ತಿ ಮಾಡಲಾಗಿದೆ. ಒಂದೂವರೆ ಕೋಟಿ ರೂ. ಮೌಲ್ಯದ ಅಂಬರ್‌ಗ್ರೀಸ್ ಜಪ್ತಿ ವೇಳೆ 6 ಆರೋಪಿಗಳನ್ನು ಬಂಧಿಸಿದ್ದ ವಿಜಯನಗರ ಪೊಲೀಸರು ಈಗ 3ನೇ ಆರೋಪಿ ಮನೆಯಲ್ಲಿ ಅಂಬರ್‌ಗ್ರೀಸ್ ಜಪ್ತಿ ಮಾಡಿದ್ದಾರೆ.
ವಿಷ ಸೇವಿಸಿ ಡೇರಿ ಕಾರ್ಯದರ್ಶಿ ಬೈಯಣ್ಣ ಆತ್ಮಹತ್ಯೆಗೆ ಯತ್ನ ವಿಷ ಸೇವಿಸಿ ಡೇರಿ ಕಾರ್ಯದರ್ಶಿ ಬೈಯಣ್ಣ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗುಟ್ಟೂರು ಗ್ರಾಮದಲ್ಲಿ ನಡೆದಿದೆ. ಗುಟ್ಟೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿ.15ರಂದು ಹಾಲು ಉತ್ಪಾದಕರ ಸಂಘದ ಚುನಾವಣೆ ನಡೆದಿತ್ತು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಹಲ್ಲೆ ಆರೋಪ ಕೇಳಿಬಂದಿತ್ತು. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಕಚೇರಿಯಲ್ಲಿ ಹಲ್ಲೆ ನಡೆಸಲಾಗಿತ್ತು. ನಿರ್ದೇಶಕನ ಕುಮ್ಮಕ್ಕಿನಿಂದ ಕೂಡಿ ಹಾಕಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಶ್ರೀನಿವಾಸ್, ಶ್ರೀನಾಥ್, ಮಧು ಸೇರಿ ಇತರರ ವಿರುದ್ಧ ಆರೋಪ ಕೇಳಿತ್ತು. ಈಗ ಡೇರಿ ಕಾರ್ಯದರ್ಶಿ ಬೈಯಣ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಅಸ್ವಸ್ಥ ಬೈಯಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ.
ಚಾರ್ಜ್‌ಶೀಟ್ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ಪೊಲೀಸ್ ಇನ್ಸ್‌ಪೆಕ್ಟರ್ ಜಯರಾಜ್ ವಿರುದ್ಧ FIR ದಾಖಲು ಚಾರ್ಜ್‌ಶೀಟ್ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಯರಾಜ್ ವಿರುದ್ಧ FIR ದಾಖಲು ಮಾಡಲಾಗಿದೆ. ಪಿಐ ಜಯರಾಜ್ ವಿರುದ್ಧ ಎಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಕೆ.ಆರ್.ಪುರ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಜಯರಾಜ್ ಬಳಿ ಕೌಟುಂಬಿಕ ಕಲಹದಲ್ಲಿ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಹೆಂಡತಿ ದೂರಿನನ್ವಯ ಗಂಡ ಸಂಜು ರಾಜನ್ ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಂಜು ರಾಜನ್ ಪ್ರತಿವಾರ ಠಾಣೆಗೆ ಆಗಮಿಸಿ ಸಹಿ ಮಾಡಲು ಲಂಚ ಪಡೆದಿದ್ದಾರೆ. 500, 10 ಸಾವಿರ ರೂ. ಪಡೆದಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಕೆ.ಆರ್.ಪುರ ಠಾಣೆ ಎಎಸ್ಐ ಶಿವಕುಮಾರ್ ವಿರುದ್ಧ ಆರೋಪ ಕೇಳಿಬಂದಿತ್ತು. ತ್ವರಿತ ಚಾರ್ಜ್‌ಶೀಟ್‌ಗೆ 80 ಸಾವಿರ ಲಂಚ ಪಡೆದ ಆರೋಪ ಇತ್ತು. ಸದ್ಯ ಸಿಐಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಯರಾಜ್ ವಿರುದ್ಧ ಲಂಚ ಪಡೆದ ಬಗ್ಗೆ ದೂರು ಪಡೆದು ತನಿಖೆ ನಡೆಸಲಾಗಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಮೇರೆಗೆ FIR ದಾಖಲು ಮಾಡಲಾಗಿದೆ.
ಕ್ರಿಸ್ಮಸ್ ಹಬ್ಬದ ನೆಪದಲ್ಲಿ ಮತಾಂತರಕ್ಕೆ ಯತ್ನ ಆರೋಪ; ಸೇಂಟ್ ಪೌಲ್ಸ್ ಶಾಲೆಗೆ ಹಿಂದೂಪರ ಸಂಘಟನೆಗಳ ಮುತ್ತಿಗೆ ಕ್ರಿಸ್ಮಸ್ ಹಬ್ಬದ ನೆಪದಲ್ಲಿ ಮತಾಂತರಕ್ಕೆ ಯತ್ನ ಆರೋಪಕ್ಕೆ ಸಂಬಂಧಿಸಿ ಸೇಂಟ್ ಪೌಲ್ಸ್ ಶಾಲೆಗೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿವೆ. ಬಾಗಲಕೋಟೆ ಜಿಲ್ಲೆ ಇಳಕಲ್ದಲ್ಲಿರುವ ಸೇಂಟ್ಪೌಲ್ಸ್ ಶಾಲೆಗೆ ಮುತ್ತಿಗೆ ಹಾಕಲಾಗಿದೆ. ಈ ವೇಳೆ, ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಆಚರಿಸುತ್ತಿರುವುದಾಗಿ ಮುಖಂಡರು ಹೇಳಿಕೆ ನೀಡಿದ್ದಾರೆ. ಶಾಲಾ ಸಿಬ್ಬಂದಿ, ಕ್ರೈಸ್ತ ಸಮುದಾಯದ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: Crime News: ಮಗನ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಸಾವು