Crime News: ಮಗನ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಸಾವು

Crime News: ಮಗನ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಸಾವು
ಸಾಂಕೇತಿಕ ಚಿತ್ರ

ಹುಟ್ಟುಹಬ್ಬದಲ್ಲಿ ಅನಿತಾಳ ಸಂಬಂಧಿಕರು ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಪಿಸ್ತೂಲಿನಿಂದ ಸಿಡಿದ ಗುಂಡು ಅನಿತಾರಿಗೆ ತಾಗಿದೆ.

TV9kannada Web Team

| Edited By: Sushma Chakre

Dec 23, 2021 | 8:41 PM

ಲಖೀಂಪುರ್​ಖೇರಿ: ತನ್ನ ಮಗನ ಹುಟ್ಟುಹಬ್ಬ ಆಚರಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶ ಲಖೀಂಪುರ್​ಖೇರಿಯಲ್ಲಿ ನಡೆದಿದೆ. ಅನಿತಾ ವರ್ಮಾ ಮತ್ತು ಪ್ರದೀಪ್ ವರ್ಮಾ ಅವರ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಅಲ್ಲಿ 100ಕ್ಕೂ ಹೆಚ್ಚು ಸ್ನೇಹಿತರು, ಸಂಬಂಧಿಕರು ಸೇರಿದ್ದರು.

ಹುಟ್ಟುಹಬ್ಬದಲ್ಲಿ ಅನಿತಾಳ ಸಂಬಂಧಿಕರು ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಪಿಸ್ತೂಲಿನಿಂದ ಸಿಡಿದ ಗುಂಡು ಅನಿತಾರಿಗೆ ತಾಗಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈರಾಮ್ ವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಾಯಿ ಸಾವನ್ನಪ್ಪಿದ್ದಾರೆ. ಮಂಗಳವಾರ ಚಕ್ದನ್ ಮಜ್ರಾ ಸರ್ಖಾನ್‌ಪುರ ಗ್ರಾಮದ ನಿವಾಸಿ ಪ್ರದೀಪ್ ವರ್ಮಾ ಅವರ ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ಅನೇಕ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು. ಪ್ರದೀಪ್ ವರ್ಮಾ ಅವರ ಸೋದರ ಸಂಬಂಧಿ ಫರ್ಧಾನ್ ಪೊಲೀಸ್ ಠಾಣೆಯ ಸರಾಯ್ ದೇವಕಾಲಿ ನಿವಾಸಿ ಜೈರಾಮ್ ಕೂಡ ಭಾಗಿಯಾಗಿದ್ದರು. ಜೈರಾಮ್ ವಿಪರೀತ ಕುಡಿದು ಕೈಯಲ್ಲಿ ರಿವಾಲ್ವರ್ ಹಿಡಿದಿದ್ದ.

ಜೈರಾಮ್ ಕುಡಿದ ಮತ್ತಿನಲ್ಲಿ ರೂಮಿನಲ್ಲಿ ಮಲಗಿದ್ದ. ಇದೇ ವೇಳೆ ರಾತ್ರಿ 8.30ರ ಸುಮಾರಿಗೆ ಪ್ರದೀಪ್ ವರ್ಮಾ ಹಾಗೂ ಅವರ ಸೋದರ ಮಾವ ಜೈರಾಮ್ ಅವರನ್ನು ಊಟಕ್ಕೆ ಕರೆಯಲು ತೆರಳಿದ್ದರು. ಆರೋಪಿ ಜೈರಾಮ್ ಮದ್ಯದ ಅಮಲಿನಲ್ಲಿ ಪರವಾನಗಿ ಪಡೆದ ರಿವಾಲ್ವರ್ ಹಿಡಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದಾಗ ಆ ಗುಂಡು ಪ್ರದೀಪ್ ವರ್ಮಾ ಅವರ ಪತ್ನಿ ಅನಿತಾ ವರ್ಮಾ ಅವರ ಎದೆಗೆ ತಗುಲಿದೆ. ಗಾಯಗೊಂಡಿದ್ದ ಅನಿತಾಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅನಿತಾ ಮೃತಪಟ್ಟಿದ್ದಾರೆ.

ಬುಧವಾರ, ಅನಿತಾ ವರ್ಮಾ ಅವರ ಪತಿ ಪ್ರದೀಪ್ ವರ್ಮಾ ನೀಡಿದ ದೂರಿನ ಮೇರೆಗೆ, ಸರಾಯ್ ದೇವಕಲಿ ನಿವಾಸಿ ಜೈರಾಮ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಜೈರಾಮ್ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ತಗುಲಿ ವಿವಾಹಿತ ಮಹಿಳೆ ಅನಿತಾ ಸಾವನ್ನಪ್ಪಿದ್ದಾರೆ ಎಂದು ಖೇರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಂಧಾ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಥ್ರಿಲ್ಲರ್​ ಕಾದಂಬರಿಯಂತಾದ ಶೀನಾ ಬೋರಾ ಕೊಲೆ ಕೇಸ್​; ಕಾರ್ಯಪ್ರವೃತ್ತರಾದ ಇಂದ್ರಾಣಿ ಪರ ವಕೀಲರು !

ಎಸ್​ಡಿಪಿಐ ನಾಯಕನ ಕೊಲೆ ಬೆನ್ನಲ್ಲೇ ಕೇರಳದ ಬಿಜೆಪಿ ನಾಯಕನ ಕತ್ತು ಕೊಯ್ದು ಬರ್ಬರ ಹತ್ಯೆ

Follow us on

Related Stories

Most Read Stories

Click on your DTH Provider to Add TV9 Kannada