Crime News: ಪೀಣ್ಯ ವ್ಯಾಪ್ತಿಯಲ್ಲಿ 2 ದರೋಡೆ, ವೃದ್ಧೆ ಕೊಂದಿದ್ದ ಆರೋಪಿ ಬಂಧನ, ಖಾಸಗಿ ಶಾಲೆಯಲ್ಲಿ ಕ್ರಿಸ್​ಮಸ್ ಆಚರಣೆಗೆ ಅಡ್ಡಿ

Crime News: ಪೀಣ್ಯ ವ್ಯಾಪ್ತಿಯಲ್ಲಿ 2 ದರೋಡೆ, ವೃದ್ಧೆ ಕೊಂದಿದ್ದ ಆರೋಪಿ ಬಂಧನ, ಖಾಸಗಿ ಶಾಲೆಯಲ್ಲಿ ಕ್ರಿಸ್​ಮಸ್ ಆಚರಣೆಗೆ ಅಡ್ಡಿ
ಸಾಂಕೇತಿಕ ಚಿತ್ರ

ಕ್ರಿಸ್ ಮಸ್ ಆಚರಣೆ ಮಾಡಲೇಬೇಕು ಅನ್ನೋದಾದ್ರೆ ಹಿಂದೂ ದೇವರ ಭಾವಚಿತ್ರ ಹಾಕಲು ಪಟ್ಟು ಹಿಡಿದಿದ್ದಾರೆ. ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿಗೆ ಹಿಂದೂ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ.

TV9kannada Web Team

| Edited By: ganapathi bhat

Dec 24, 2021 | 10:43 PM

ಬೆಂಗಳೂರು: ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಐವರು ಅಂತಾರಾಜ್ಯ ವಂಚಕರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯ ಎಂಬಲ್ಲಿ ನಡೆದಿದೆ. ಐವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 4.10 ಕೋಟಿ ರೂಪಾಯಿ ಮೌಲ್ಯದ 8 ಕೆಜಿ ಚಿನ್ನಾಭರಣ, 36 ಲಕ್ಷ ನಗದು, 2 ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ದರೋಡೆ ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ದರೋಡೆ ಮಾಡಿರುವ ಘಟನೆ ನಡೆದಿದೆ. ನೆಲಗೆದರನಹಳ್ಳಿ ಬಳಿ ಅಂಜನಮೂರ್ತಿ ಬೆದರಿಸಿ ದರೋಡೆ ಮಾಡಲಾಗಿದೆ. ಚಾಕು ತೋರಿಸಿ 4 ಸಾವಿರ ನಗದು, ಮೊಬೈಲ್​ ದರೋಡೆ ಮಾಡಲಾಗಿದೆ. ಹಾಗೂ ನಾಗಸಂದ್ರದ ಬಳಿ ನರಸಿಂಹನನ್ನು ಬೆದರಿಸಿ, ನರಸಿಂಹನ ಬಳಿಯಿದ್ದ ಮೊಬೈಲ್, 3 ಸಾವಿರ ಹಣ ದರೋಡೆ ಮಾಡಲಾಗಿದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ.

ತೂಬಿನಕೆರೆ ಗ್ರಾಮದಲ್ಲಿ ವೃದ್ಧೆ ಕೊಂದಿದ್ದ ಆರೋಪಿ ಬಂಧನ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ವೃದ್ಧೆ ಕೊಂದಿದ್ದ ಆರೋಪಿ ಬಂಧನ ಮಾಡಿದ ಘಟನೆ ನಡೆದಿದೆ. ಅಕ್ಕೂರು ಠಾಣೆ ಪೊಲೀಸರಿಂದ ನೆರೆಮನೆ ನಿವಾಸಿ ರವಿ ಅರೆಸ್ಟ್​ ಮಾಡಲಾಗಿದೆ. ಆರೋಪಿ ಮಾರಕಾಸ್ತ್ರಗಳಿಂದ ಕೊಚ್ಚಿ ಜಯಮ್ಮ (65) ಎಂಬವರನ್ನು ಕೊಲೆಗೈದಿದ್ದ. ಹಳೆ ದ್ವೇಷ, ಚರಂಡಿ ನೀರಿನ ವಿಚಾರಕ್ಕೆ ಕೊಲೆ ನಡೆಸಿದ್ದ. ಹತ್ಯೆಯಾದ ಜಯಮ್ಮ ಪುತ್ರ ಸಿದ್ದರಾಜು ಮೇಲೆ ಹಲ್ಲೆಗೈದಿದ್ದ ರವಿ, ಆನಂತರ ಸಿದ್ದರಾಜು ಬೈಕ್​ನಲ್ಲಿ ಪರಾರಿಯಾಗಿದ್ದ. ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿದ್ದ ಪರಾರಿಯಾಗಿದ್ದ. ಇದೀಗ ಆರೋಪಿ ರವಿಯನ್ನು ಅಕ್ಕೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ: ಖಾಸಗಿ ಶಾಲೆಯಲ್ಲಿ ಕ್ರಿಸ್​ಮಸ್ ಆಚರಣೆಗೆ ಅಡ್ಡಿ ಖಾಸಗಿ ಶಾಲೆಯಲ್ಲಿ ಕ್ರಿಸ್ ಮಸ್ ಆಚರಣೆ ಹಿನ್ನೆಲೆ ಶಾಲೆಗೆ ಮುತ್ತಿಗೆ ಹಾಕಿ ಕ್ರಿಸ್ ಮಸ್ ಆಚರಣೆಗೆ ಅಡ್ಡಿಪಡಿಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ. ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಕ್ರಿಸ್ ಮಸ್ ಆಚರಣೆಗೆ ವಿರೋಧ ವ್ಯಕ್ತವಾಗಿದೆ. ಪಾಂಡವಪುರದ ನಿರ್ಮಲಾ ಕಾನ್ವೆಂಟ್ ನಲ್ಲಿ ಘಟನೆ ನಡೆದಿದೆ. ಕ್ರಿಸ್ ಮಸ್ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಆಕರ್ಷಿತವಾಗುತ್ತಿದೆ. ಇದರಿಂದ ಮಕ್ಕಳ ನಡುವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ. ಬಾಲ್ಯದಲ್ಲೇ ಕ್ರೈಸ್ತ ಧರ್ಮಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಮಾಡಿ ಹಬ್ಬ ಆಚರಣೆಗೆ ಅಡ್ಡಿಪಡಿಸಲಾಗಿದೆ.

ಶಾಲಾ, ಕಾಲೇಜುಗಳು ಧರ್ಮಾತೀತವಾಗಿರಬೇಕು. ನಿರ್ಮಲ ಕಾನ್ವೆಂಟ್ ನಲ್ಲಿ ಕ್ರಿಸ್ ಮಸ್ ಆಚರಣೆ ಧರ್ಮ ಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಕ್ರಿಸ್ ಮಸ್ ಆಚರಣೆ ಮಾಡಲೇಬೇಕು ಅನ್ನೋದಾದ್ರೆ ಹಿಂದೂ ದೇವರ ಭಾವಚಿತ್ರ ಹಾಕಲು ಪಟ್ಟು ಹಿಡಿದಿದ್ದಾರೆ. ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿಗೆ ಹಿಂದೂ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಅಧಿಕಾರಿಗಳ ವಿರುದ್ಧ ರಿಯಲ್ ಎಸ್ಟೇಟ್ ಡೆವಲಪರ್ಸ್​​ ಗರಂ ಲಂಚ ಪಡೆದು ಕೆಲಸ ಮಾಡಿಕೊಡದೆ ವರ್ಗಾವಣೆಯಾದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ರಿಯಲ್ ಎಸ್ಟೇಟ್ ಡೆವಲಪರ್ಸ್​​ ಗರಂ ಆದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ವರ್ಗಾವಣೆಯಾದ ನಗರಾಭಿವೃದ್ಧಿ ಆಯುಕ್ತೆ ಪ್ರಜ್ಞಾ ಅಮ್ಮೆಂಬಳ, ಕೃಷ್ಣಪ್ಪ ವಿರುದ್ಧ ರಿಯಲ್ ಎಸ್ಟೇಟ್ ಡೆವಲಪರ್ಸ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡಾವಣೆಗಳ ಅನುಮೋದನೆ, ನಿವೇಶನಗಳ ಬಿಡುಗಡೆಗೆ ಲಂಚ ಪಡೆಯಲಾಗಿದೆ. ಕೋಟ್ಯಂತರ ರೂ. ಲಂಚ ಪಡೆದು ವರ್ಗಾವಣೆಯಾದ ಆರೋಪ ಹಿನ್ನೆಲೆ ಡೆವಲಪರ್ಸ್ ಗರಂ ಆಗಿದ್ದಾರೆ.

ಮತ ಕೇಳಲು ಬಂದಾಗ ಮೂಲಸೌಕರ್ಯ ಕೇಳಿದ್ರೆ ಹೊಡೀರಿ! ‘ಮತ ಕೇಳಲು ಬಂದಾಗ ಮೂಲಸೌಕರ್ಯ ಕೇಳಿದ್ರೆ ಹೊಡೀರಿ’ ಎಂದು ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ದರ್ಪ ತೋರಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ನಡೆದಿದೆ. ಕನಕಗಿರಿ ಪ.ಪಂ. ಚುನಾವಣಾ ಪ್ರಚಾರದಲ್ಲಿ ಶಾಸಕರ ದರ್ಪ ಕಂಡುಬಂದಿದೆ. ಮತ ಕೇಳಲು ಬಂದಾಗ ಶೌಚಾಲಯ ಇಲ್ಲ, ಅದಿಲ್ಲ ಅಂತೀರಿ. ಬೇರೆ ಟೈಂ ಇಲ್ವಾ ನಿಮಗೆ ಕೇಳಲು ಎಂದು ಶಾಸಕ ಗದರಿದ್ದಾರೆ. ಡಿಸಿ ಏನ್ಮಾಡ್ತಾನೆ, ಅವರನ್ನ ಕೇಳಿದ್ರೆ ಮಾಡಿಕೊಡಲ್ಲ ಅಂತಾನಾ? ಕನಕಗಿರಿ ಪ.ಪಂ. ಚುನಾವಣಾ ಪ್ರಚಾರದಲ್ಲಿ ಶಾಸಕರ ದರ್ಪ ಕಂಡುಬಂದಿದೆ.

ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ನೀರುಪಾಲು ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ನೀರುಪಾಲು ಆದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರುದ್ರಪಾದ ಗ್ರಾಮದ ಭದ್ರಾ ನದಿಯಲ್ಲಿ ನಡೆದಿತ್ತು. ಈ ಪೈಕಿ ಜೀವನ್ ದಾಸ್ (17) ಎಂಬಾತನ ಮೃತದೇಹ ಪತ್ತೆ ಆಗಿದೆ. ನೀರು ಪಾಲಾಗಿರುವ ಮತ್ತೊಬ್ಬ ವಿದ್ಯಾರ್ಥಿ ನಿಕ್ಷೇಪ್​ಗಾಗಿ ಶೋಧಕಾರ್ಯ ಮುಂದುವರಿದಿದೆ. ನಿನ್ನೆ ಕಾಲೇಜಿಗೆ ಹೋದವರು ಮನೆಗೆ ವಾಪಸ್ಸಾಗಿರಲಿಲ್ಲ. ಇಂದು ಹುಡುಕಾಟ ನಡೆಸಿದಾಗ ಭದ್ರಾ ನದಿಯ ದಡದಲ್ಲಿ ಮೊಬೈಲ್, ಡ್ರೆಸ್ ಪತ್ತೆ ಆಗಿತ್ತು. ಹಿರೇಬೈಲ್ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈಜಲು ತೆರಳಿ ನೀರುಪಾಲಾಗಿದ್ದರು.

ಇದನ್ನೂ ಓದಿ: Crime News: ಮಗನ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಸಾವು

ಇದನ್ನೂ ಓದಿ: Crime Roundup: ಚಿನ್ನಾಭರಣ ದೋಚಿ ರಾಜಸ್ಥಾನಕ್ಕೆ ಪರಾರಿಯಾದ ವ್ಯಾಪಾರಿ: ಒಡವೆ ಕಳೆದುಕೊಂಡವರ ಗೋಳಾಟ

Follow us on

Related Stories

Most Read Stories

Click on your DTH Provider to Add TV9 Kannada