ಒಂದು ವಾರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್; ಪರ್ಯಾಯ ಮಾರ್ಗದ ವ್ಯವಸ್ಥೆ ವಿವರ ಇಲ್ಲಿದೆ
ಒಂದು ವಾರ ಫ್ಲೈ ಓವರ್ನಲ್ಲಿ ವಾಹನ ಸಂಚಾರ ನಿರ್ಬಂಧ ಆಗಿರಲಿದೆ. ಇಂದಿನಿಂದ ಡಿಸೆಂಬರ್ 31ರ ವರೆಗೆ ಫ್ಲೈ ಓವರ್ ಬಂದ್ ಆಗಿರಲಿದೆ. ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಫ್ಲೈ ಓವರ್ ಬಂದ್ ಹಿನ್ನಲೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು: ಮುಂದಿನ ಒಂದು ವಾರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್ ಆಗಿರಲಿದೆ. ಫ್ಲೈ ಓವರ್ನ ಪಿಲ್ಲರ್ 102 ಮತ್ತು 103, 8 ನೇ ಮೈಲಿ ಬಳಿ ದುರಸ್ತಿ ಕಾರ್ಯ ನಡೆಸಬೇಕಿರುವುದರಿಂದ, ಫ್ಲೈ ಓವರ್ಗೆ ಅಳವಡಿಸಿರುವ ಕೇಬಲ್ ದುರಸ್ತಿ ಕಾರಣದಿಂದ ಒಂದು ವಾರ ರಸ್ತೆ ಬಂದ್ ಆಗಿರಲಿದೆ. ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.
ಫ್ಲೈ ಓವರ್ ದುರಸ್ತಿ ಹಿನ್ನಲೆ ಎರಡು ಬದಿ ಸಂಚಾರ ನಿರ್ಬಂಧಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ಸೂಚನೆ ಮೇರೆಗೆ ಒಂದು ವಾರ ಫ್ಲೈ ಓವರ್ನಲ್ಲಿ ವಾಹನ ಸಂಚಾರ ನಿರ್ಬಂಧ ಆಗಿರಲಿದೆ. ಇಂದಿನಿಂದ ಡಿಸೆಂಬರ್ 31ರ ವರೆಗೆ ಫ್ಲೈ ಓವರ್ ಬಂದ್ ಆಗಿರಲಿದೆ. ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಫ್ಲೈ ಓವರ್ ಬಂದ್ ಹಿನ್ನಲೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ತುಮಕೂರು ಕಡೆಯಿಂದ ಬರುವವರು ಮಾದಾವಾರ ಬಳಿ ಬಲ ತಿರುವು ಪಡೆದು ನೈಸ್ ರಸ್ತೆ ಮೂಲಕ ನಗರ ಪ್ರವೇಶಕ್ಕೆ ಸೂಚನೆ ಕೊಡಲಾಗಿದೆ. ಬೆಂಗಳೂರಿನಿಂದ ತುಮಕೂರು ಕಡೆ ಹೋಗುವವರು, ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ಬಳಿ ಎಡ ತಿರುವು ಪಡೆದು ಸುಮನಹಳ್ಳಿ, ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆಯಿಂದ ಹೊರ ಹೋಗಲು ಸೂಚನೆ ಕೊಡಲಾಗಿದೆ. ಫ್ಲೈ ಓವರ್ ಬಂದ್ ಹಾಗೂ ಮಾರ್ಗ ಬದಲಾವಣೆ ಬಗ್ಗೆ ಸಂಚಾರಿ ಪೊಲೀಸರು ಪ್ರಕಟಣೆ ನೀಡಿದ್ದಾರೆ.
8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ; ವಾಹನ ಸಂಚಾರ ಸ್ಥಗಿತ 8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ ಆಗಿದ್ದು ರೋಪ್ ಸಡಿಲಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನ 8ನೇ ಮೈಲಿಯ ಫ್ಲೈಓವರ್‌ನಲ್ಲಿ ಘಟನೆ ನಡೆದಿದೆ. ಬೆಂಗಳೂರು ಗೇಟ್ ವೇ ಪ್ಲೈ ಒವರ್ನ ರೋಪ್ ವೇ ಕಟ್ಟಾಗಿ ಸಂಚಾರ ಸ್ಥಗಿತಗೊಂಡಿದೆ. ಇಂಜಿನಿಯರ್ಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಗೊರಗುಂಟೆ ಪಾಳ್ಯ ಹಾಗೂ ನೆಲಮಂಗಲ ಎಲಿವೇಟೆಡ್ ರಸ್ತೆಯಲ್ಲಿ ರೋಪ್‌ಗಳ ಬಿರುಕು ಕಂಡುಬಂದಿದ್ದು ಘಟನೆ ಸಂಭವಿಸಿದೆ. ಫ್ಲೈಓವರ್‌ನಲ್ಲಿ ರೋಪ್‌ಗಳದ್ದೆ ಮಹತ್ವದ ಪಾತ್ರ ಇರುತ್ತದೆ. ಇದೀಗ ಪಿಲ್ಲರ್ 101 ಹಾಗೂ 102 ರ ನಡುವಿನ ರೋಪ್ ಸಡಿಲ ಆಗಿದೆ. ತಕ್ಷಣ ಎಚ್ಚೆತ್ತ ಟೋಲ್ ಆಡಳಿತ ಮಂಡಳಿ ಫ್ಲೈಓವರ್ ಸಂಚಾರ ಬಂದ್ ಮಾಡಿದೆ. ಸರ್ವೀಸ್ ರಸ್ತೆಯಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳಕ್ಕೆ NHAI ಅಧಿಕಾರಿಗಳು ಹಾಗೂ ಪೀಣ್ಯ ಪೊಲೀಸರು ದೌಡಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು ಧೃಡ
ಇದನ್ನೂ ಓದಿ: ಬೆಂಗಳೂರು: ಪ್ಯಾಲೇಸ್ ರಸ್ತೆಗೆ ಇಳಿಯುವ ಮುನ್ನ ಎಚ್ಚರ: ದಿಢೀರ್ ಎಂದು ವರ್ಕ್ ಇನ್ ಪ್ರೋಸೆಸ್ ಬೋರ್ಡ್ ಪ್ರತ್ಯಕ್ಷ