Bengaluru Power Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಪವರ್ ಕಟ್; ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

Bengaluru Power Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಪವರ್ ಕಟ್; ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ KERC

Power Cut in Bengaluru: ಬೆಂಗಳೂರಿನ ಹಲವೆಡೆ ವಿದ್ಯುತ್ ನಿರ್ವಹಣಾ ಕಾಮಗಾರಿ ಇರುವುದರಿಂದ ಇಂದು (ಡಿಸೆಂಬರ್ 26) ಹಾಗೂ ನಾಳೆ (ಡಿಸೆಂಬರ್ 27) ಈ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ.

TV9kannada Web Team

| Edited By: Sushma Chakre

Dec 26, 2021 | 6:05 AM

ಬೆಂಗಳೂರು: ಬೆಂಗಳೂರಿನಲ್ಲಿ ಒಂದೆಡೆ ಚಳಿ ವಿಪರೀತ ಹೆಚ್ಚಾಗಿದೆ. ನಲ್ಲಿಯಲ್ಲಿನ ನೀರು, ಮನೆಯ ನೆಲ ಕೂಡ ಮಂಜುಗಡ್ಡೆಯಂತಾಗಿದೆ. ಇದರ ನಡುವೆ ಬೆಂಗಳೂರಿಗರಿಗೆ ಇಂದಿನಿಂದ 2 ದಿನ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಲಿದೆ. ಇಂದು (ಭಾನುವಾರ) ಮತ್ತು ಸೋಮವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ಹಲವೆಡೆ ವಿದ್ಯುತ್ ನಿರ್ವಹಣಾ ಕಾಮಗಾರಿ ಇರುವುದರಿಂದ ಇಂದು (ಡಿಸೆಂಬರ್ 26) ಹಾಗೂ ನಾಳೆ (ಡಿಸೆಂಬರ್ 27) ಈ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಟಾಟಾ ಐಬಿಎಂ, ಎಸ್.ಜೆ.ಆರ್. ಪಾರ್ಕ್, ಸುಮಧುರಾ ಅಪಾರ್ಟ್‌ಮೆಂಟ್, ನಲ್ಲೂರಹಳ್ಳಿ, ಯುಟಿಎಲ್ ಕಂಪನಿ, ವಿ.ಕೆ.ಟೆಕ್ ಪಾರ್ಕ್, ಗಾಯತ್ರಿ ಟೆಕ್ ಪಾರ್ಕ್, ಮೈಕ್ರೊ ಚಿಪ್, ವೈದೇಹಿ ಆಸ್ಪತ್ರೆ, ಸತ್ಯ ಸಾಯಿ ಬಾಬಾ ಆಸ್ಪತ್ರೆ, ಚನ್ನಮ್ಮ ಬಡಾವಣೆ, ಗ್ರಾಫೈಟ್ ಸಿಗ್ನಲ್, ಆಕಾಶ್‌ ಟೆಕ್‌ಪಾರ್ಕ್‌, ಜನತಾ ಕಾಲೋನಿ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ.

ಹಾಗೇ, ವಿದ್ಯಾಪೀಠ ರಸ್ತೆ, ಬಿ.ಜಿ.ಎಸ್‌. ಆಸ್ಪತ್ರೆ ರಸ್ತೆ, ಸಿದ್ಧಗಂಗಾ ಬಡಾವಣೆ, ಮಾರಣ್ಣ ಬಡಾವಣೆ, ಉಲ್ಲಾಳ ನಗರ, ಮಾರುತಿ ನಗರ, ಕುವೆಂಪು ಮುಖ್ಯ ರಸ್ತೆ, ಜಿ.ಕೆ. ಗಲ್ಲಿ, ಬಿಇಎಲ್‌ 1ನೇ ಮತ್ತು 2ನೇ ಹಂತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಇರುವ ಕಾರಣ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?

Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇಂದಿನಿಂದ ಒಂದು ವಾರ ಪವರ್ ಕಟ್

Follow us on

Related Stories

Most Read Stories

Click on your DTH Provider to Add TV9 Kannada