Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?

Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?
ಪವರ್ ಕಟ್

Power Cut in Bangalore: ಬೆಂಗಳೂರಿನ ರಾಜಾಜಿನಗರ, ಆರ್​ಆರ್​ ನಗರ, ಪದ್ಮನಾಭನಗರ, ಕತ್ರಿಗುಪ್ಪೆ, ಕೆಂಗೇರಿ ಸೇರಿದಂತೆ ಬಹುತೇಕ ಕಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

TV9kannada Web Team

| Edited By: Sushma Chakre

Dec 15, 2021 | 6:05 AM

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಇಂದು ಕೂಡ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಇಂದು ರಾಜಾಜಿನಗರ, ಆರ್​ಆರ್​ ನಗರ, ಪದ್ಮನಾಭನಗರ, ಕತ್ರಿಗುಪ್ಪೆ, ಕೆಂಗೇರಿ ಸೇರಿದಂತೆ ಬಹುತೇಕ ಕಡೆ ಪವರ್ ಕಟ್ (Power Cut) ಇರಲಿದೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಇಂದು (ಬುಧವಾರ) ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಅಥವಾ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30 ರವರೆಗೆ ಅಥವಾ 11ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಜಾಲಹಳ್ಳಿ ವಿಭಾಗದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ರವರೆಗೆ ಅಥವಾ ಮಧ್ಯಾಹ್ನ 1ರಿಂದ ಮಧ್ಯಾಹ್ನ 2ರವರೆಗೆ ಅಥವಾ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಪವರ್ ಕಟ್ ಇರುತ್ತದೆ. ಹೆಬ್ಬಾಳ ವಿಭಾಗದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಅಥವಾ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು.

ಇಂದು ರಾಜಾಜಿ ನಗರದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5.30 ರವರೆಗೆ ವಿದ್ಯುತ್ ಇರುವುದಿಲ್ಲ. ಆರ್‌ಆರ್ ನಗರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತ ಇರುತ್ತದೆ. ಕೆಂಗೇರಿ ವಿಭಾಗದಲ್ಲೂ ಈ ಅವಧಿಯಲ್ಲಿ ಪವರ್ ಕಟ್ ಇರಲಿದೆ.

ಇಂದು ಪವರ್ ಕಟ್ ಇರುವ ಪ್ರದೇಶಗಳು: ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಕಡಿತವಾಗಲಿದೆ. ವಿನಾಯಕನಗರ, ವಸಂತ ವಲ್ಲಬ ನಗರ, ಶಾರದಾ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಇಸ್ರೋ ಲೇಔಟ್, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಅನ್ನಪೂರ್ಣ ಕೈಗಾರಿಕಾ ಪ್ರದೇಶ, ಸಿಆರ್ ನಗರ 1ನೇ ಹಂತ, ಜೆ.ಪಿ. , ಕರಿಸಂದ್ರ, ಕೆಆರ್ ಮುಖ್ಯ ರಸ್ತೆ, ರಾಘವೇಂದ್ರ ಲೇಔಟ್, ಪದ್ಮನಾಭನಗರ, ಜೆ.ಪಿ.ನಗರ 5 ನೇ ಹಂತ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಮಾರತಳ್ಳಿ ಆರ್.ಎಸ್. ನಾಗರಾಳ, ಹೇಮಂತ್ ನಗರ, ಪವಮಾನ ನಗರ, ಗಾಯತ್ರಿ ತಪೋವನ, ನಾಯಕ್ ಲೇಔಟ್, ಕಾಳೇನ ಅಗ್ರಹಾರ, ಮೀನಾಕ್ಷಿ ಲೇಔಟ್, ಮೀನಾಕ್ಷಿ ದೇವಸ್ಥಾನದ ಹಿಂದೆ, ದೇವರಬೀಸನಹಳ್ಳಿ ಮುಖ್ಯರಸ್ತೆ, ಹಿಲ್ ಟಾಪ್ ಲೇಔಟ್, ನಾರಾಯಣ ನಗರ, ಮತ್ತು ರಾಮಯ್ಯ ನಗರ ಮುಖ್ಯರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರು ಉತ್ತರ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತವಾಗಲಿದೆ. ಶ್ರೀರಾಮಪುರ, ಪ್ರಕಾಶನಗರ, ಸದಾಶಿವನಗರ, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಪಂಪಾ ನಗರ, ಮತ್ತಿಕೆರೆ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ವಿದ್ಯಾರಣ್ಯಪುರ, ಹೆಗಡೆ ನಗರ, ತಿರುಮೇನಹಳ್ಳಿ, ಯಶೋದಾನಗರ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬಾಗಲೂರು ಕ್ರಾಸ್, ಭುವನರಸ್ತೆ, ಹೆಸರಘಟ್ಟ ರಸ್ತೆ, ರವೀಂದ್ರನಗರ ಮತ್ತು ಸಂತೋಷನಗರದಲ್ಲಿ ಪವರ್ ಕಟ್ ಇರಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ರಸ್ತೆ ಸುತ್ತಮುತ್ತ, ಮಾಳಗಲ್, ವೆಂಕಟೇಶ್ವರ ಸ್ಲಂ, ಜವರೇಗೌಡ ನಗರ, ರಾಮದಾಸ್ ಲೇಔಟ್, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮುಕಾಂಬಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಹರ್ಷ ಲೇಔಟ್, ವಿದ್ಯಾಪೀಠ ರಸ್ತೆ, ನೀಲಗಿರಿ ಥಾಪ್ ರಸ್ತೆ, ಅನ್ನಪೂರ್ಣೇಶ್ವರಿ ಲಾ1 ಹಂತ, BEL 2ನೇ ಹಂತ, ಮಲ್ಲತ್ತಲಿ ಲೇಔಟ್, ಮತ್ತು ದ್ವಾರಕಾಬಸ ರಸ್ತೆಯಲ್ಲಿ ಇಂದು ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪೀಡಿತ ಪ್ರದೇಶಗಳಲ್ಲಿ ಡಬಲ್ ರೋಡ್, ಲೀಲಾ ಪ್ಯಾಲೇಸ್ ಹತ್ತಿರ, ಜೋಗುಪಾಳ್ಯ, ಕಸ್ತೂರಿ ನಗರ, ಉದಯನಗರ, ಮುನೇಶ್ವರ ನಗರ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ರಾಮಯ್ಯ ಲೇಔಟ್ ಮತ್ತು ಮಂಜುನಾಥ್ ನಗರದಲ್ಲಿ ನಾಳೆ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಬನಶಂಕರಿ, ಕತ್ರಿಗುಪ್ಪೆ, ಮಲ್ಲೇಶ್ವರ ಸೇರಿ ಹಲವೆಡೆ ಇಂದು ಸಂಜೆಯವರೆಗೆ ಪವರ್ ಕಟ್

ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾಗೆ ಒಮಿಕ್ರಾನ್ ಸೋಂಕಿತ ಪರಾರಿ; ನಕಲಿ ಕೊವಿಡ್ ನೆಗೆಟಿವ್ ವರದಿ ನೀಡಿದ್ದ ನಾಲ್ವರ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada