Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇಂದಿನಿಂದ ಒಂದು ವಾರ ಪವರ್ ಕಟ್

BESCOM: ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಇಂದು ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇಂದಿನಿಂದ ಒಂದು ವಾರ ಪವರ್ ಕಟ್
ಪವರ್​ ಕಟ್​

ಬೆಂಗಳೂರು: ಮಳೆಯ ಕಾಟದಿಂದ ತತ್ತರಿಸಿದ್ದ ಬೆಂಗಳೂರಿನ (Bangalore) ಜನರಿಗೆ ಬೆಸ್ಕಾಂ (BESCOM) ಪವರ್ ಕಟ್ ಶಾಕ್ ನೀಡಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಕಡಿತದ (Power Cut) ಸಮಸ್ಯೆ ಇತ್ತು. ಅಂತೆಯೇ ಇಂದಿನಿಂದ (ಡಿಸೆಂಬರ್ 6) ಡಿಸೆಂಬರ್​ 13 ರವರೆಗೆ ವಿದ್ಯುತ್​​ ಕಡಿತವಾಗಲಿದೆ.  ಯಾವ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಇಂದಿನಿಂದ ಡಿಸೆಂಬರ್​ 13ರವರೆಗೆ ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ದಕ್ಷಿಣ ವಲಯ ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಚಿಕ್ಕಲಕ್ಷ್ಮಿ ಲೇಔಟ್, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಈಶ್ವರ ಲೇಔಟ್, ಲಕ್ಷ್ಮಿ ನಗರ, ಗುರು ರಾಘವೇಂದ್ರ ಲೇಔಟ್, ಶಿವಶಕ್ತಿ ನಗರ, ಬೀರಪ್ಪ ಗಾರ್ಡನ್​, ದೊಡ್ಮನೆ ಕೈಗಾರಿಕಾ ಪ್ರದೇಶ, ಚರ್ಚ್ ರಸ್ತೆ, ಚುಂಚಗಟ್ಟಾ ಮುಖ್ಯ ರಸ್ತೆ, ರಾಜೀವ್ ಗಾಂಧಿ ರಸ್ತೆ.

ಉತ್ತರ ವಲಯ ಬೆಂಗಳೂರು ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಓಕಳಿಪುರಂ ಮುಖ್ಯರಸ್ತೆ, ದೇವಯ್ಯ ಪಾರ್ಕ್, ಜೆಪಿ ಪಾರ್ಕ್, ಹೆಚ್‌ಎಂಟಿ ಲೇಔಟ್, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಸುಬೇದಾರಪಾಳ್ಯ, ಕೆಎನ್ ಎಕ್ಸ್‌ಟೆನ್ಶನ್, ವಿದ್ಯಾರಣ್ಯಪುರ, ತಣ್ಣೀರು ಹಳ್ಳ, ಬಾಲಾಜಿ ಲೇಔಟ್, ಭದ್ರಪ್ಪ ಲೇಔಟ್, ವೆಂಕಟರಾಮಪ್ಪ ಲೇಔಟ್, ಗುರುದರ್ಶನ ಲೇಔಟ್, ಗಣೇಶ್ವರ ಲೇಔಟ್, ಸಪ್ತಗಿರಿ ಲೇಔಟ್, ತಿಂಡ್ಲು ಗ್ರಾಮ, ದ್ವಾರಕಾನಗರ, ಮಾರುತಿ ನಗರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿ, ಕೆ.ಬಿ.ಸಂದ್ರ, ಚಿನ್ನಣ್ಣ ಲೇಔಟ್, ಪುಟ್ಟೇನಹಳ್ಳಿ, ಕೋಗಿಲು ನಗರ ಮುಖ್ಯ ರಸ್ತೆ, , ಮುತ್ತುರಾಯ ಸ್ವಾಮಿ ದೇವಸ್ಥಾನದ ಹತ್ತಿರ, ಪ್ರಶಾಂತ್ ನಗರ, ನೃಪತುಂಗ ರಸ್ತೆ, ಕೆಜಿ ಲೇಔಟ್, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರ.

ಪೂರ್ವ ವಲಯ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ. ಡಬಲ್ ರೋಡ್, ಲೀಲಾ ಪ್ಯಾಲೇಸ್ ಬಳಿ, ಸಾಯಿಬಾಬಾ ಟೆಂಪಲ್ ರಸ್ತೆ, ಹಲಸೂರು ಪೊಲೀಸ್ ಠಾಣೆ, ಕಸ್ತೂರಿ ನಗರ, ಮುನಿಯಪ್ಪ ಲೇಔಟ್, ಜಯಮಹಲ್ 1ನೇ ಮುಖ್ಯರಸ್ತೆ, ನಂದಿದುರ್ಗ ರಸ್ತೆ, ಡೇವಿಸ್ ರಸ್ತೆ, ಹಚಿನ್ಸ್ ಅಶೋಕ ರಸ್ತೆ, ಡಿಕೋಸ್ಟಾ ಲೇಔಟ್, ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್, ಎನ್‌ಬಿಸಿ ಲೇಔಟ್, ಬೆಲಹಳ್ಳಿ ಕ್ರಾಸ್ ಮತ್ತು ವೈಟ್‌ಫೀಲ್ಡ್ ಮುಖ್ಯ ರಸ್ತೆ.

ಪಶ್ಚಿಮ ವಲಯ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸತ್ಯನಾರಾಯಣ ಲೇಔಟ್, ಎಡಿ ಹಳ್ಳಿ, ವಿನಾಯಕ ಲೇಔಟ್, ನಾಗರಭಾವಿ 9 ನೇ ಬ್ಲಾಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್‌ಎಫ್‌ಐಸಿ ರಸ್ತೆ, ಮುನೇಶ್ವರ ಬ್ಲಾಕ್, ಬಾಪೂಜಿ ನಗರ, ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಬಂಗಾರಪ್ಪ ನಗರ, ಕಾಫಿ ಕಟ್ಟೆ, ಆನಂದಪುರ, ಪುಟ್ಟಣ್ಣ ರಸ್ತೆ, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮೂಕಾಂಬಿಕಾ ಲೇಔಟ್, ಬಿಎಚ್ಇಎಲ್ ಲೇಔಟ್, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಹರ್ಷ ಲೇಔಟ್, ವಿದ್ಯಾಪೀಠ ರಸ್ತೆ, ವಿಪ್ರೋ ಲೇಔಟ್, ಸಪ್ತಗಿರಿ ಲೇಔಟ್, ಮತ್ತು ವೇಣು ಗೋಪಾಲ್ ಲೇಔಟ್, ಅನುಪಮಾ ಸ್ಕೂಲ್ ರಸ್ತೆ, ಗಾಂಧಿ ಪಾರ್ಕ್, ಮಲ್ಲತ್ತಳ್ಳಿ ಲೇಔಟ್ ಮತ್ತು ಭವಾನಿನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಿದೆ.

ಇದನ್ನೂ ಓದಿ:

Bengaluru Power Cut: ಕೋಣನಕುಂಟೆ ಸೇರಿ ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರೋದಿಲ್ಲ

Power Issue: ಚೀನಾ, ಯುರೋಪ್​ ಸೇರಿ ವಿಶ್ವದಾದ್ಯಂತ ವಿದ್ಯುತ್​ ಸಮಸ್ಯೆ; ಬಿಕ್ಕಟ್ಟಿಗೆ ಎಷ್ಟೆಲ್ಲ ಕಾರಣಗಳು!

Published On - 8:58 am, Mon, 6 December 21

Click on your DTH Provider to Add TV9 Kannada