ಲಸಿಕೆ ಪಡೆದವರಿಗೆ ಮಾತ್ರ ಮಾಲ್​, ಥಿಯೇಟರ್​ಗೆ ಪ್ರವೇಶ: ಬಿಬಿಎಂಪಿ ಅಧಿಕೃತ ಆದೇಶ

ವಾಣಿಜ್ಯ ಮಳಿಗೆ ಮಾಲೀಕರು ಪ್ರಮಾಣಪತ್ರ ಪರಿಶೀಲಿಸಬೇಕು. ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್​ಗಳು ಪರಿಶೀಲಿಸುತ್ತಾರೆ.

ಲಸಿಕೆ ಪಡೆದವರಿಗೆ ಮಾತ್ರ ಮಾಲ್​, ಥಿಯೇಟರ್​ಗೆ ಪ್ರವೇಶ: ಬಿಬಿಎಂಪಿ ಅಧಿಕೃತ ಆದೇಶ
ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)


ಬೆಂಗಳೂರು: ಎರಡು ಡೋಸ್ ಲಸಿಕೆ ಪಡೆದಿದ್ದವರಿಗೆ ಮಾತ್ರ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಥಿಯೇಟರ್​​ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕೃತ ಆದೇಶ ಹೊರಡಿಸಿದೆ. ಪ್ರವೇಶ ವೇಳೆ ಕೊವಿಡ್​ ಲಸಿಕೆ ಪ್ರಮಾಣಪತ್ರ ತೋರಿಸಬೇಕು. ವಾಣಿಜ್ಯ ಮಳಿಗೆ ಮಾಲೀಕರು ಪ್ರಮಾಣಪತ್ರ ಪರಿಶೀಲಿಸಬೇಕು. ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್​ಗಳು ಪರಿಶೀಲಿಸುತ್ತಾರೆ. ಒಂದು ವೇಳೆ ಲಸಿಕೆ ಪಡೆಯದವರಿಗೆ ಮಳಿಗೆ ಪ್ರವೇಶಕ್ಕೆ ಅವಕಾಶ ನೀಡಿದರೆ ಅಂಥ ಮಳಿಗೆಗಳ ಮಾಲೀಕರು ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.

ಬೆಂಗಳೂರು ನಗರದಲ್ಲಿ 256 ಮಂದಿಗೆ ಸೋಂಕು
ಬೆಂಗಳೂರು ನಗರದಲ್ಲಿ ಬೆಂಗಳೂರಲ್ಲಿ ಭಾನುವಾರ 256 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 5136 ಸಕ್ರಿಯ ಪ್ರಕರಣಗಳಿದ್ದು, ಇಂದು 214 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ 12,57,498 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 12,36,016 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,345 ಜನರು ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 256, ಚಿಕ್ಕಮಗಳೂರು 66, ಧಾರವಾಡ 20, ಕೊಡಗು 17, ಮೈಸೂರು 10, ಬಳ್ಳಾರಿ 5, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 2, ಬೀದರ್, ಚಿತ್ರದುರ್ಗ 1, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕಲಬುರಗಿ, ಕೋಲಾರ 2, ದಕ್ಷಿಣ ಕನ್ನಡ 13, ಹಾಸನ 12, ಮಂಡ್ಯ 3, ಶಿವಮೊಗ್ಗ 7, ತುಮಕೂರು 8, ಉಡುಪಿ 5, ಉತ್ತರ ಕನ್ನಡ 14.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 2, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಆನೇಕಲ್: ತಾಲೂಕಿನಲ್ಲಿ ಕೊರೊನಾ ಸ್ಫೋಟ; ಅದಾಗ್ಯೂ ಸಮಾವೇಶದಲ್ಲಿ ಕೊವಿಡ್ ನಿಯಮಾವಳಿ ಮರೆತ ಬಿಜೆಪಿ ನಾಯಕರು!
ಇದನ್ನೂ ಓದಿ: Omicron ಮಹಾರಾಷ್ಟ್ರದಲ್ಲಿ 7, ರಾಜಸ್ಥಾನದಲ್ಲಿ 9 ಮಂದಿಗೆ ಒಮಿಕ್ರಾನ್ ದೃಢ; ದೇಶದಲ್ಲಿ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆ

Published On - 11:12 pm, Sun, 5 December 21

Click on your DTH Provider to Add TV9 Kannada