ಕರ್ನಾಟಕದಲ್ಲಿ ಒಮಿಕ್ರಾನ್ ಆತಂಕ! ಜನರಿಂದ ಕೊವಿಡ್ ನಿಯಮಗಳು ಉಲ್ಲಂಘನೆ
ವಿಜಯಪುರದಲ್ಲಿ ಕೊರೊನಾ ಮುಂಜಾಗೃತಾ ಕ್ರಮಗಳು ಮಾಯವಾಗಿದೆ. ಪ್ರಮುಖ ರಸ್ತೆಗಳಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಜನರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕೊರೊನಾ ಬಗ್ಗೆ ಜಾಗೃತಿಯೂ ಮೂಡಿಸುತ್ತಿಲ್ಲ.
ವಿಜಯಪುರ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ (Coronavirus) ಮೂರನೇ ಅಲೆ ಆತಂಕ ಶುರುವಾಗಿದೆ. ಕೊವಿಡ್ ರೂಪಾಂತರಿ ಒಮಿಕ್ರಾನ್ ಕೂಡ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಕಡ್ಡಾಯವಾಗಿ ಎಲ್ಲರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅಂತ ಮಾರ್ಗಸೂಚಿ ಹೊರಡಿಸಿದೆ. ಆದರೆ ಜನ ಮಾತ್ರ ಯಾವುದಕ್ಕೂ ಕೇರ್ ಮಾಡದೇ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಹಾಕದೇ ಜನರು ಓಡಾಡುತ್ತಿರುವುದು ಇನ್ನಷ್ಟು ಭೀತಿಗೆ ಕಾರಣವಾಗಿದೆ.
ವಿಜಯಪುರದಲ್ಲಿ ಕೊರೊನಾ ಮುಂಜಾಗೃತಾ ಕ್ರಮಗಳು ಮಾಯವಾಗಿದೆ. ಪ್ರಮುಖ ರಸ್ತೆಗಳಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಜನರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕೊರೊನಾ ಬಗ್ಗೆ ಜಾಗೃತಿಯೂ ಮೂಡಿಸುತ್ತಿಲ್ಲ. ಇನ್ನು ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆ ಕೊವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಮಾಸ್ಕ್ ಹಾಕಿಕೊಳ್ಳದ ಪ್ರಾಯಾಣಿಕರಿಗೂ ಅನುಮತಿ ನೀಡುತ್ತಿದೆ.
ಕೆಎಸ್ಆರ್ಟಿಸಿ ಸಿಬ್ಬಂದಿ ಡೋಂಟ್ಕೇರ್ ಸರ್ಕಾರದ ಆದೇಶಕ್ಕೆ ಕೆಎಸ್ಆರ್ಟಿಸಿ ಸಿಬ್ಬಂದಿ ಡೋಂಟ್ಕೇರ್ ಎಂದಿದ್ದಾರೆ. ಮಾಸ್ಕ್ ಧರಿಸದೆ ಬಸ್ ಚಾಲಕ, ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್ಆರ್ಟಿಸಿ ಸಿಬ್ಬಂದಿಯೇ ಕೊವಿಡ್ ರೂಲ್ಸ್ ಪಾಲಿಸುತ್ತಿಲ್ಲ. ಇನ್ನು ಪ್ರಯಾಣಿಕರಿಗೆ ಯಾವ ರೀತಿ ತಿಳಿ ಹೇಳುತ್ತಾರೆ ಎಂದು ಪ್ರಶ್ನೆ ಮೂಡಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿದರೂ ಬೆಂಗಳೂರಿನ ಲಾಲ್ಬಾಗ್ನಲ್ಲಿ ಮಾಸ್ಕ್ ಧರಿಸದೆ ಜನರು ಓಡಾಡುತ್ತಿದ್ದಾರೆ. ಮಾಸ್ಕ್ ಇಲ್ಲದೆ ವಾಕಿಂಗ್, ಜಾಗಿಂಗ್ ಮಾಡುತ್ತಿದ್ದಾರೆ. ಕೆಲವರು ಕಾಟಾಚಾರಕ್ಕೆ ಮಾಸ್ಕ್ ಹಾಕಿಕೊಂಡಿದ್ದಾರೆ.
ಮೆಜೆಸ್ಟಿಕ್ನಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವವರಿಗೆ ಬಿಬಿಎಂಪಿ ಮಾರ್ಷಲ್ಸ್ ದಂಡ ಪ್ರಯೋಗ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದಿರುವುದಕ್ಕೆ ಜನ ಕಾರಣಗಳನ್ನು ಹೇಳುತ್ತಿದ್ದಾರೆ. ಮೂಗು ಉರಿಯುತ್ತೆ, ತಲೆ ನೋವು ಬರುತ್ತೆ ಅಂತಿದ್ದಾರೆ. ಹೀಗೆ ಗದಗ, ತುಮಕೂರು, ಬೆಳಗಾವಿ, ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಜನರು ಬೇಜವಾಬ್ದಾರಿ ತೋರುತ್ತಿದ್ದಾರೆ.
ಇದನ್ನೂ ಓದಿ
ಮೈಸೂರು: ವೀರನಹೊಸಹಳ್ಳಿ ಟಿಬೆಟ್ ಕ್ಯಾಂಪ್‌ನಲ್ಲಿ ಕಾಡಾನೆ ಪ್ರತ್ಯಕ್ಷ; ಓಡಿಸಲು ಮುಂದಾದ ಯುವಕನನ್ನು ಅಟ್ಟಾಡಿಸಿದ ಸಲಗ
ರಾಕೇಶ್ ಟಿಕಾಯತ್ ಭಯೋತ್ಪಾದಕ, ಕೃಷಿ ಕಾನೂನು ಹಿಂಪಡೆದಿರುವುದು ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗಲಿದೆ: ಬಿಜೆಪಿ ಮುಖಂಡ